‘ಭಾರತದ ಶ್ರೀಮಂತ ಮಹಿಳೆ’ಯಿಂದ ಸೋನು ಫೌಂಡೇಶನ್‍ಗೆ 15,000ರೂ. ದೇಣಿಗೆ

ಮುಂಬೈ: ಕೊರೊನಾ ಸಂಕಷ್ಟದ ಸಮಯದಲ್ಲಿ ಹಲವು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದ ಬಾಲಿವುಡ್ ನಟ ಸೋನು ಸೂದ್ ಫೌಂಡೇಶನ್‍ಗೆ ಅಂಧ ಮಹಿಳೆ ದೇಣಿಗೆ ನೀಡಿದ್ದಾರೆ.

ಬುಡ ನಾಗಲಕ್ಷ್ಮೀ ಎಂಬ ಅಂಧ ಮಹಿಳೆ ತಮ್ಮ 5 ತಿಂಗಳ ಪಿಂಚಣಿ ಹಣದಲ್ಲಿ 15 ಸಾವಿರ ರೂ. ಹಣವನ್ನು ಸೋನು ಫೌಂಡೇಶನ್‍ಗೆ ನೀಡಿದ್ದಾರೆ. ಜೊತೆಗೆ ಭಾರತದ ಶ್ರೀಮಂತ ಮಹಿಳೆ ಎಂದು ಸೋನು ಸೂದ್ ಕರೆದಿದ್ದಾರೆ.

ಆಂಧ್ರದಲ್ಲಿ ಸೋನು ಸೂದ್ ಫೌಂಡೇಶನ್ ವತಿಯಿಂದ ಆಮ್ಲಜನಕ ಘಟಕ ಸ್ಥಾಪಿಸಲಾಗುತ್ತಿದ್ದು, ಜುಲೈ 23ರಂದು ಇದನ್ನು ಉದ್ಘಾಟಿಸಲು ಬುಡ ನಾಗಲಕ್ಷ್ಮಿಯವರನ್ನು ಆಹ್ವಾನಿಸಲಾಗಿದೆ. ಈ ಬಗ್ಗೆ ಸೋನು ಸೂದ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಬುಡ ನಾಗಲಕ್ಷ್ಮಿ ಎಂಬ ಅಂಧ ಮಹಿಳೆ ತಮ್ಮ 5 ತಿಂಗಳ ಪಿಂಚಣಿ ಹಣದಲ್ಲಿ 15,000ರೂ ದೇಣಿಗೆ ನೀಡಿದ್ದು, ಜುಲೈ 23ರಂದು ಆಂಧ್ರ ಪ್ರದೇಶದಲ್ಲಿ ಆಮ್ಲಜನಕ ಘಟಕವನ್ನು ಉದ್ಘಾಟನೆ ಮಾಡಲಿದ್ದಾರೆ ಎಂಬುದು ಹೆಮ್ಮೆಯ ವಿಚಾರ. ಈ ಕಾರ್ಯಕ್ರಮದಲ್ಲಿ ಐಟಿ ಗೌತಮ್ ರೆಡ್ಡಿ, ಚಂದ್ರಾಧರ್ ಬಾಬು, ಜಿಲ್ಲಾಧಿಕಾರಿ ಪಾಲ್ಗೊಳ್ಳಲಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ:‘ಆರ್‌ಆರ್‌ಆರ್’ ಸೆಟ್‍ನಲ್ಲಿ ಆಲಿಯಾ ವರ್ಕೌಟ್

Comments

Leave a Reply

Your email address will not be published. Required fields are marked *