‘ಭರವಸೆ ಸುಳ್ಳಾದಾಗ ಕನಸು ಸಾಯುತ್ತೆ’- ಕಿರುತೆರೆ ನಟಿ ಆತ್ಮಹತ್ಯೆ

– ಮನೆಯಲ್ಲೇ ನೇಣಿಗೆ ಕೊರಳೊಡ್ಡಿದ ಪ್ರೇಕ್ಷಾ ಮೆಹ್ತಾ

ಭೋಪಾಲ್: ಬಾಲಿವುಡ್ ಕಿರುತೆರೆ ನಟಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುವ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ.

ನಟಿ ಪ್ರೇಕ್ಷಾ ಮೆಹ್ತಾ ಆತ್ಮಹತ್ಯೆ ಮಾಡಿಕೊಂಡ ನಟಿ. ಮೆಹ್ತಾ ಸೋಮವಾರ ರಾತ್ರಿ ಮಧ್ಯಪ್ರದೇಶದ ಇಂದೋರ್ ನಲ್ಲಿರುವ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೆಹ್ತಾ ತಮ್ಮ ರೂಮಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಕುಟುಂಬವರು ಮಂಗಳವಾರ ಬೆಳಗ್ಗೆ ಆಕೆ ರೂಮಿಗೆ ಹೋಗಿ ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ತಕ್ಷಣ ಮೆಹ್ತಾರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅಷ್ಟರಲ್ಲಿಯೇ ಮೆಹ್ತಾ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಎಂದು ತಿಳಿಸಿದ್ದಾರೆ.

ನಟಿ ಮೆಹ್ತಾ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಇನ್ಸ್ಟಾಗ್ರಾಮ್‌ನಲ್ಲಿ ಹಿಂದಿಯಲ್ಲಿ ಸಂದೇಶವೊಂದು ಹಂಚಿಕೊಂಡಿದ್ದಾರೆ, “ಕೆಟ್ಟದ್ದು ಸಂಭವಿಸಿದಾಗ, ಭರವಸೆ ಸುಳ್ಳಾದಾಗ ಕನಸುಗಳು ಸಾಯುತ್ತಾ ಹೋಗುತ್ತವೆ” ಎಂದು ಮೆಹ್ತಾ ಬರೆದುಕೊಂಡಿದ್ದಾರೆ. ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.

ನಟಿ ಮೆಹ್ತಾ ಬಾಲ್ಯದಿಂದಲೂ ಆಕ್ಟಿವ್ ಹುಡುಗಿಯಾಗಿದ್ದಳು. ಆದರೆ ಕೊರೊನಾ ಲಾಕ್‍ಡೌನ್ ಹಿನ್ನೆಲೆಯಿಂದ ಯಾವುದೇ ಕೆಲಸವಿಲ್ಲದೆ ಮನೆಯಲ್ಲಿಯೇ ಮೌನವಾಗಿ ಕುಳಿತುಕೊಳ್ಳುತ್ತಿದ್ದಳು. ಅವರ ತಾಯಿ ಅನೇಕ ಬಾರಿ ಏನಾಯಿತು ಎಂದು ಕೇಳಿದ್ದಾರೆ. ಆದರೆ ಮೆಹ್ತಾ ನಾನು ಆರಾಮಾಗಿದ್ದೀವಿ ಎಂದು ಹೇಳಿದ್ದಾರೆ. ಆದರೆ ಕೆಲಸವಿಲ್ಲದೆ ಇದ್ದುದ್ದರಿಂದ ಖಿನ್ನತೆಗೆ ಒಳಗಾಗಿದ್ದಳು. ಹೀಗಾಗಿ ಮೆಹ್ತಾ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಮೆಹ್ತಾ ಸಂಬಂಧಿಕರೊಬ್ಬರು ಹೇಳಿದ್ದಾರೆ.

ನಟಿ ಮೆಹ್ತಾ ‘ಕ್ರೈಮ್ ಪೆಟ್ರೋಲ್’, ‘ಲಾಲ್ ಇಷ್ಕ್’, ಮತ್ತು ‘ಮೇರಿ ದುರ್ಗಾ’ ಮುಂತಾದ ಧಾರಾವಾಹಿಗಳಲ್ಲಿ ಅಭಿನಾಯಿಸಿದ್ದಾರೆ. ಅಲ್ಲದೇ ಅಕ್ಷಯ್ ಕುಮಾರ್ ಅಭಿನಯದ ‘ಪ್ಯಾಡ್ ಮ್ಯಾನ್’ ಚಿತ್ರದಲ್ಲಿಯೂ ಪ್ರೇಕ್ಷಾ ಕಾಣಿಸಿಕೊಂಡಿದ್ದಾರೆ.

https://www.instagram.com/p/CAe5DhIlnSI/?utm_source=ig_embed

Comments

Leave a Reply

Your email address will not be published. Required fields are marked *