ಮುಂಬೈ: ಬಾಲಿವುಡ್ ನಟಿ ಮೌನಿ ರಾಯ್ ಹೊಸ ಉಡುಪೊಂದನ್ನು ತೊಟ್ಟು ಫೋಟೋಗೆ ಹಾಟ್ ಆಗಿ ಪೋಸ್ ನೀಡಿದ್ದಾರೆ. ಸದ್ಯ ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಬಾಲಿವುಡ್‍ನ ಕೆಜಿಎಫ್ ಐಟಂ ಸಾಂಗ್‍ನಲ್ಲಿ ರಾಕಿಂಗ್ ಸ್ಟಾರ್ ಯಶ್ ಜೊತೆಗೆ ಹೆಜ್ಜೆ ಹಾಕಿದ್ದ ಮೌನಿ ರಾಯ್, ತಮ್ಮ ಫೇವರೆಟ್ ಡ್ರೆಸ್‍ವೊಂದನ್ನು ತೊಟ್ಟು, ಫೋಟೋಗೆ ಸಖತ್ ಹಾಟ್ ಹಾಟ್ ಆಗಿ ಪೋಸ್ ನೀಡಿದ್ದಾರೆ. ಈ ಫೋಟೋವನ್ನು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ಮೌನಿ ರಾಯ್ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ.
View this post on Instagram
ಈ ಫೋಟೋವನ್ನು ಮೌನಿ ರಾಯ್ ದುಬೈನಲ್ಲಿ ಕ್ಲಿಕ್ಕಿಸಿಕೊಂಡಿದ್ದು, ಕಪ್ಪು ವೆಲ್ವೆಟ್ ಮಿನಿ ಡ್ರೆಸ್ ಧರಿಸಿದ್ದಾರೆ. ಫುಲ್ ಹಾರ್ಮ್, ಎಂಬ್ರಾಯ್ಡರಿ ಸಿಕ್ವಿನ್ಸ್ ಹಾಗೂ ಮೆಥಲಿಕ್ ಥ್ರೆಡ್ ಎಂಬ್ರಾಯ್ಡರಿಯಿಂದ ಈ ಡ್ರೆಸ್‍ನನ್ನು ವಿನ್ಯಾಸಗೊಳಿಸಲಾಗಿದೆ. ಜೊತೆಗೆ ಆ ಉಡುಪಿಗೆ ಸೂಟ್ ಆಗುವಂತಹ ಸ್ಟ್ರೇಟ್ ಪಿನ್ ಹಾಕಿ ಫ್ರೀ ಹೇರ್ ಬಿಟ್ಟಿದ್ದು, ಐ-ಮೇಕಪ್ ಜೊತೆಗೆ ಅದಕ್ಕೆ ಮ್ಯಾಚ್ ಆಗುವ ಲಿಪ್‍ಸ್ಟಿಕ್‍ನನ್ನು ಹಾಕಿಕೊಂಡಿದ್ದಾರೆ.
View this post on Instagram
ಫೋಟೋ ಜೊತೆಗೆ ಈ ಡ್ರೆಸ್ ಧರಿಸಿ ಎಂದಿಗೂ ನಾನು ಹೊರಗೆ ಬರುವುದಿಲ್ಲ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಮೌನಿರಾಯ್‍ರವರು ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಬಾಲಿವುಡ್ ರಿಮೇಕ್‍ನ ‘ಗಲಿ ಗಲಿ ಮೇ’ ಎಂಬ ಐಟಂ ಸಾಂಗ್‍ನಲ್ಲಿ ನೃತ್ಯ ಮಾಡಿದ್ದಾರೆ.
View this post on Instagram

Leave a Reply