ಬ್ರಾಹ್ಮಣ್ಯದ ವಿರುದ್ಧ ಪೋಸ್ಟ್ – ನಾಳೆ ನಟ ಚೇತನ್ ವಿಚಾರಣೆ

ಬೆಂಗಳೂರು: ಬ್ರಾಹ್ಮಣ್ಯದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದ ಸ್ಯಾಂಡಲ್‍ವುಡ್ ನಟ ಚೇತನ್‍ರವರ ವಿರುದ್ಧ ಇತ್ತೀಚೆಗಷ್ಟೇ ಎಫ್‍ಐಆರ್ ದಾಖಲಾಗಿತ್ತು. ಸದ್ಯ ಈ ಕುರಿತಂತೆ ನಾಳೆ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಚೇತನ್ ವಿಚಾರಣೆ ನಡೆಯಲಿದೆ.

ಆ ದಿನಗಳು ಸಿನಿಮಾದ ಮೂಲಕ ಸ್ಯಾಂಡಲ್‍ವುಡ್‍ಗೆ ಪಾದರ್ಪಣೆ ಮಾಡಿ ಖ್ಯಾತಿ ಪಡೆದಿದ್ದ, ನಟ ಚೇತನ್ ಅಹಿಂಸಾ ಲಾಕ್‍ಡೌನ್ ವೇಳೆ ರಾಜ್ಯಾದ್ಯಂತ ಕೊರೊನಾ ಸೋಂಕಿತರು, ಕೊರೊನಾ ವಾರಿಯರ್ಸ್, ಲಾಕ್ ಡೌನ್ ಸಂತ್ರಸ್ತರಿಗೆ ಅಗತ್ಯ ವಸ್ತುಗಳನ್ನು ಒದಗಿಸುವ ಮೂಲಕ ಸಹಾಯ ಮಾಡಿದ್ದರು. ಈ ವೇಳೆ ಬ್ರಾಹ್ಮಣರಿಗೆ ಪ್ರತ್ಯೇಕವಾಗಿ ಆಹಾರ ವಿತರಣೆ ಮಾಡಿದ ನಟರೊಬ್ಬರ ಬಗ್ಗೆ ಚೇತನ್ ಟೀಕಿಸಿದ್ದರು. ಇದನ್ನೂ ಓದಿ: ಕನ್ನಡ ಸಿನಿಮಾ ಕಳಪೆ ಎಂದ ನೆಟ್ಟಿಗ – ಚೇತನ್ ಬೆಂಬಲ, ರಕ್ಷಿತ್ ಶೆಟ್ಟಿ ಕಿಡಿ

ಹೀಗಾಗಿ ಬ್ರಾಹ್ಮಣರ ಕುರಿತು ವ್ಯಂಗ್ಯವಾಗಿ ಮಾತಾಡಿದ್ದಾರೆ. ಇಂಥ ವಿಡಿಯೋವನ್ನ ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದಾರೆ. ಬ್ರಾಹ್ಮಣರು ಭಯೋತ್ಪಾದಕರು ಎಂದು ವೀಡಿಯೋದಲ್ಲಿ ಹೇಳಿಕೆ ನೀಡಿದ್ದಾರೆ ಎಂದು ವಿಪ್ರ ಯುವ ವೇದಿಕೆಯವರು ಬಸವನಗುಡಿ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದರು. ಇದೀಗ ಈ ವಿಚಾರಕ್ಕೆ ಸಂಬಂಧಿಸಿದಂತೆ ನಟ ಚೇತನ್‍ರವರನ್ನು ತನಿಖಾಧಿಕಾರಿ ಮುರಳಿ ಬುಧವಾರ ಬೆಳಗ್ಗೆ 10:30ಕ್ಕೆ ತನಿಖೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.

ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಲು ಪ್ರಶ್ನಾವಳಿಗಳನ್ನ ಸಿದ್ಧಪಡಿಸಿದ್ದು, ಚೇತನ್ ಬ್ರಾಹ್ಮಣ್ಯದ ಬಗ್ಗೆ ಮಾತನಾಡಿರೋ ಎರಡು ವಿಡಿಯೋ ಆಧಾರದ ಮೇಲೆ ಪ್ರಶ್ನೆಗಳನ್ನು ಕೇಳಲಿದ್ದಾರೆ. ಪೊಲೀಸರು ಪ್ರಶ್ನೆಗಳಿಗೆ ಸಮರ್ಪಕವಾದ ಉತ್ತರ ಕೊಡದೇ ಹೋದರೆ ಕಾನೂನು ಸಲಹೆ ಪಡೆದು ಮುಂದಿನ ಕ್ರಮದ ಬಗ್ಗೆ ತೀರ್ಮಾನ ತೆಗೆದುಕೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.

ಈ ಕುರಿತಂತೆ ಚೇತನ್‍ರವರು, ನಾಳೆ ಬೆಳಗ್ಗೆ ನಾನು ಪೊಲೀಸ್ ಠಾಣೆಗೆ ಹೋಗುತ್ತಿದ್ದೇನೆ. ಸಂವಿಧಾನಿಕ ಮೌಲ್ಯಗಳಿಗೆ ಅನುಗುಣವಾಗಿ ಸಮಾನತೆ ಮತ್ತು ನ್ಯಾಯಕ್ಕಾಗಿ ನಮ್ಮ ಹೋರಾಟ ಮುಂದುವರಿಯುತ್ತದೆ ಎಂದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ:  ನಟ ಚೇತನ್ ವಿರುದ್ಧ FIR ದಾಖಲು

 

View this post on Instagram

 

A post shared by Chetan Ahimsa (@chetanahimsa)

Comments

Leave a Reply

Your email address will not be published. Required fields are marked *