ಬೊಮ್ಮಾಯಿ ರಬ್ಬರ್‌ ಸ್ಟಾಂಪ್  ಮುಖ್ಯಮಂತ್ರಿ: ಸಿದ್ದರಾಮಯ್ಯ

– ಸಿಎಂರಿಂದ ಕಾಟಾಚಾರದ ಪ್ರವಾಸ

ಹುಬ್ಬಳ್ಳಿ: ನೂತನವಾಗಿ ಸಿಎಂ ಆಗಿರುವ ಬಸವರಾಜ ಬೊಮ್ಮಾಯಿ ರಬ್ಬರ್‌ ಸ್ಟಾಂಪ್  ಮುಖ್ಯಮಂತ್ರಿ ಆಗಿದ್ದಾರೆ. ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾಗಿರಬಹುದು. ಆದರೆ ಬಿಜೆಪಿ ಸರ್ಕಾರ ಬದಲಾಗಿಲ್ಲ. ಬೊಮ್ಮಾಯಿ ರಬ್ಬರ್‌ ಸ್ಟಾಂಪ್  ಸಿಎಂ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.

ಹುಬ್ಬಳ್ಳಿಯಲ್ಲಿ ಬೆಳಗಾವಿ ವಿಭಾಗಮಟ್ಟದ ಕಾಂಗ್ರೆಸ್ ಸಮಾವೇಶದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು. ಹಿಂದಿನ ಸಿಎಂ ಬಿಎಸ್ ಯಡಿಯೂರಪ್ಪ ಸರ್ಕಾರದಲ್ಲಿ ಬಸವರಾಜ ಬೊಮ್ಮಾಯಿ ಸಚಿವರಾಗಿದ್ರು, ಈಗ ಸಿಎಂ ಆಗಿದ್ದಾರೆ. ಆದರೆ ಭ್ರಷ್ಟಾಚಾರ ಕಡಿಮೆ ಆಗಿಲ್ಲ. ನಾವೇನೂ ಅವರನ್ನ ರಬ್ಬರ್‌ ಸ್ಟಾಂಪ್  ಎಂದು ಕರೆದಿಲ್ಲ ಅವರೇ ನಾನು ರಬ್ಬರ್‌ ಸ್ಟಾಂಪ್  ಸಿಎಂ ಹೇಳಿಕೊಂಡಿರುವುದರಿಂದ ಅವರು ರಬ್ಬರ್‌ ಸ್ಟಾಂಪ್  ಸಿಎಂ ಆಗಿದ್ದಾರೆ ಎಂದು ಮುಖ್ಯಮಂತ್ರಿಯನ್ನು ಕುಟುಕಿದ್ದಾರೆ. ಇದನ್ನೂ ಓದಿ: ಬ್ಯಾಡ್ಮಿಂಟನ್ ಸೆಮಿಫೈನಲ್ ಪ್ರವೇಶಿಸಿದ ಪಿ.ವಿ ಸಿಂಧು

ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ನಮಗೆ ಸಂಯಮ ಕಡಿಮೆ ಆಗಿದೆ ಅಂತಾ ಹೇಳಿದ್ದಾರೆ. ಆದರೆ ನನಗೆ ಸಂಯಮ ಕಡಿಮೆ ಆಗಿಲ್ಲ. ನಾನು ಸಂಯಮ ಮೀರಿ ಮಾತನಾಡಿಲ್ಲ. ಶಾಂತವಾಗಿ ಸಹನೆಯಿಂದ ಸಮಾಧಾನದಿಂದಲೇ ಇದ್ದೇನೆ ಎಂದು ಸಿದ್ದರಾಮಯ್ಯ ಬಿಎಸ್‍ವೈಗೆ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಮೇಕೆ ಮೇಲೆ ಗ್ಯಾಂಗ್ ರೇಪ್ – ಟ್ರೋಲ್ ಆದ ಪಾಕ್ ಪ್ರಧಾನಿ

ರಾಜ್ಯದಲ್ಲಿ ಪ್ರವಾಹ ಬಂದ ಸಂದರ್ಭದಲ್ಲಿ ಬಿಜೆಪಿಯವರು ಅಧಿಕಾರಕ್ಕೆ ಓಡಾಡ್ತಾ ಇದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಕಾಟಾಚಾರದ ಪ್ರವಾಸ ಮಾಡಿದ್ದಾರೆ. ಉತ್ತರ ಕನ್ನಡಕ್ಕೆ ಅಷ್ಟೇ ಹೋಗಿ ಬಂದು ದೆಹಲಿಗೆ ಹೋಗಿ ಕುಳಿತಿದ್ದಾರೆ. ಬಿಜೆಪಿಯವರು ದೆಹಲಿ ಹೋಗಿ ಕುಳಿತು ರಾಜ್ಯದ ಜನರಿಗೆ ದ್ರೋಹ ಬಗೆಯುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ರಾಜ್ಯದ ಆರ್ಥಿಕ ಪರಿಸ್ಥಿತಿ ದಿವಾಳಿ ಆಗಿದೆ.  ಸಿಎಂ ವೃದ್ಧಾಪ್ಯ ವೇತನ, ವಿಧವಾ ವೇತನ, ಅಂಗವಿಕಲರ ಮಾಸಾಶನನ ಹೆಚ್ಚಳ ಮಾಡಿದ್ದಾರೆ. ರೈತರ ಮಕ್ಕಳಿಗೆ ಯೋಜನೆ ಘೋಷಿಸಿದ್ದಾರೆ. ಆದರೆ ಕೊಡೋಕೆ ಹಣ ಎಲ್ಲಿದೆ ಎಂದು ಪ್ರಶ್ನೆ ಮಾಡಿರುವ ಸಿದ್ದರಾಮಯ್ಯ, ಸರ್ಕಾರಕ್ಕೆ ನ್ಯಾಯಯುತವಾಗಿ ಬರಬೇಕಾದ ಹಣವನ್ನು ಕೇಂದ್ರದಿಂದ ಪಡೆದುಕೊಂಡು ಬರಬೇಕೆಂದು ನೂತಮ ಸಿಎಂ ಬಸವರಾಜ ಬೊಮ್ಮಾಯಿಗೆ ಸಲಹೆ ನೀಡಿದ್ದಾರೆ.

Comments

Leave a Reply

Your email address will not be published. Required fields are marked *