ಬೈಕ್ ಬೇಡ, ಬುಲೆಟ್ ಬೇಕು ಎಂದ ಅಳಿಯ- ವರದಕ್ಷಿಣೆ ಪಾಠ ಕಲಿಸಿದ ಗ್ರಾಮಸ್ಥರು

ಲಕ್ನೋ: ನನಗೆ ಮಾಮೂಲಿ ಬೈಕ್ ಬೇಡಾ, ಬುಲೆಟ್ ಬೈಕೇ ವರದಕ್ಷೀಣೆಯಾಗಿ ಬೇಕು ಎಂದು ಹಠ ಹಿಡಿದು ಕುಳಿತ ಅಳಿಯನಿಗೆ ಊರಿನಗ್ರಾಮಸ್ಥರು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಉತ್ತರಪ್ರದೇಶದ ಅಮೇಥಿ ಜಿಲ್ಲೆಯಲ್ಲಿ ನಡೆದಿದೆ.

ಮೊಹಮದ್ ಅಮೀರ್ ಜೊತೆಗೆ ಮದುವೆ ನಿಶ್ಚಯವಾಗಿತ್ತು. ಸಂಭ್ರಮದಿಂದ ಮದುವೆ ಏರ್ಪಾಟು ಮಾಡಲಾಗಿತ್ತು. ಆದರೆ ಮದುವೆ ಮನೆಯಲ್ಲಿ ಬುಲೆಟ್ ವಿಚಾರ ಸಂಭ್ರಮದಲ್ಲಿರುವವರಿಗೆ ಬೇಸರವನ್ನುಂಟು ಮಾಡಿತ್ತು.

ವರದಕ್ಷಿಣೆಯಾಗಿ ಬೈಕ್ ಕೇಳಿದ್ದ ವರನ ಕುಟುಂಬಕ್ಕೆ ವಧುವಿನ ಕಡೆಯವರು ಬೈಕ್ ಕೊಡಲು ಸಿದ್ಧರಾಗಿದ್ದರು. ಆದರೆ ಮದುವೆ ಊಟದಲ್ಲಿ ಕುಳಿತ ವರ ಹೊಸ ವರಸೆ ತೆಗೆದಿದ್ದಾನೆ. ನನಗೆ ಮಾಮೂಲಿ ಬೈಕ್ ಬೇಡ, ಬುಲೆಟ್ ಬೇಕೆಂದಿದ್ದಾನೆ. ಅದಕ್ಕೆ ಒಪ್ಪಿದ ವಧುವಿನ ಕುಟುಂಬ 2 ಲಕ್ಷ ರೂಪಾಯಿ ಚೆಕ್ ಅನ್ನೂ ಕೊಟ್ಟಿದ್ದಾರೆ.


ಆದರೆ ಚೆಕ್ ನೋಡಿ ಸಿಟ್ಟಿಗೆದ್ದ ವರ ಮತ್ತು ಆತನ ತಂದೆ ಚೆಕ್ ಅನ್ನು ಅಲ್ಲಿಯೇ ಹರಿದೆಸೆದಿದ್ದಾರೆ. ಈಗಲೇ ಬುಲೆಟ್ ತಂದು ನಿಲ್ಲಿಸಿ ಎಂದು ಹಠ ಹಿಡಿದಿದ್ದಾರೆ. ಇದರಿಂದ ತಾಳ್ಮೆ ಕಳೆದುಕೊಂಡ ವಧುವಿನ ಕುಟುಂಬ, ಗ್ರಾಮಸ್ಥರು ವರ ಹಾಗೂ ಆತನ ತಂದೆಗೆ ಸರಿಯಾಗಿ ಬಾರಿಸಿದ್ದಾರೆ.

ಸ್ಥಳಕ್ಕೆ ಬಂದಿರುವ ಪೊಲೀಸರು ವರ, ಆತನ ತಂದೆ ಸೇರಿ 7 ಮಂದಿಯ ಮೇಲೆ ವರದಕ್ಷಿಣೆ ಪ್ರಕರಣವನ್ನು ದಾಖಲಿಸಿದ್ದಾರೆ. ವಧು ನಾನು ಅವರ ಮನೆಗೆ ಸೊಸೆಯಾಗಿ ಹೋಗುವುದಿಲ್ಲ ಎಂದು ತನ್ನ ತವರಿನಲ್ಲೇ ಉಳಿದಿದ್ದಾಳೆ.

Comments

Leave a Reply

Your email address will not be published. Required fields are marked *