ಬೆಳ್ಳಂ ಬೆಳಗ್ಗೆ ರಾಗಿಣಿ ಕಿರಿಕ್- ಮನೆ ಊಟಕ್ಕೆ ಬೇಡಿಕೆ

ಬೆಂಗಳೂರು: ಮಹಿಳಾ ಸಾಂತ್ವನ ಕೇಂದ್ರದಲ್ಲಿರುವ ನಟಿ ರಾಗಿಣಿ ದ್ವಿವೇದಿ ಬೆಳ್ಳಂಬೆಳಗ್ಗೆ ಕಿರಕ್ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದ್ದು, ಮನೆಯೂಟಕ್ಕೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.

ಇಲ್ಲಿನ ವ್ಯವಸ್ಥೆ ಸರಿ ಇಲ್ಲ, ಸೊಳ್ಳೆ ಜಾಸ್ತಿಯಿದೆ. ನಾನು ಇಲ್ಲಿ ಇರೋದಕ್ಕೆ ಆಗಲ್ಲ. ರಾತ್ರಿ ಮಲಗಿದರೆ ಸೊಳ್ಳೆ ಕಾಟ, ತಿಂಡಿ ವ್ಯವಸ್ಥೆ ಚೆನ್ನಾಗಿಲ್ಲ. ಪ್ರತಿದಿನ ಮನೆಯಿಂದ ಊಟದ ವ್ಯವಸ್ಥೆ ಮಾಡುವಂತೆ ಪೊಲೀಸರ ಮುಂದೆ ಬೇಡಿಕೆ ಇಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಶನಿವಾರ ಸಂಜೆ ವಿಚಾರಣೆ ವೇಳೆ ಸರಿಯಾಗಿ ರಾಗಿಣಿ ಸ್ಪಂದಿಸಿಲ್ಲ ಎಂದು ತಿಳಿದು ಬಂದಿದೆ. ಇಂದು ಬೆಳಗ್ಗೆ 10ಗಂಟೆಗೆ ಸಿಸಿಬಿ ಅಧಿಕಾರಿ ಅಂಜುಮಾಲಾ ಟೀಂ ರಾಗಿಣಿ ಅವರನ್ನ ವಿಚಾರಣೆ ನಡೆಸಲಿದೆ.

ಬೆಂಗಳೂರಿನ ಡೈರಿ ಸರ್ಕಲ್‍ನ ಕಿದ್ವಾಯಿ ಆಸ್ಪತ್ರೆ ಬಳಿಯ ಮಹಿಳಾ ಸಾಂತ್ವನ ಕೇಂದ್ರದಲ್ಲಿರುವ ರಾಗಿಣಿಯನ್ನು ಶನಿವಾರ ಸಿಸಿಬಿ ವಿಚಾರಣೆ ಮಾಡಿಲ್ಲ. ನನಗೆ ಜ್ವರ, ಬೆನ್ನು ನೋವು ಎಂದು ನೆಪ ಹೇಳಿ ವಿಚಾರಣೆಯಿಂದ ತಪ್ಪಿಸಿಕೊಂಡಿದ್ದಾರೆ ಎನ್ನಲಾಗಿದೆ. ಹೀಗಾಗಿ ರಾಗಿಣಿಯ ಮೆಡಿಕಲ್ ರಿಪೋರ್ಟ್ ಬರುವ ತನಕ ಯಾವುದೇ ವಿಚಾರಣೆ ನಡೆಯುವುದು ಅನುಮಾನವಾಗಿದೆ.

Comments

Leave a Reply

Your email address will not be published. Required fields are marked *