ಬಿಗ್ ಮನೆಯ ಸದಸ್ಯರ ಮಾರ್ನಿಂಗ್ ಪ್ರಾರಂಭವಾಗುವುದೇ ಸುಂದರವಾದ ಒಂದು ಕನ್ನಡ ಹಾಡಿನಿಂದ. ಆದರೆ ಮಾರ್ಚ್ 11 ರಂದು ಗುಡ್ ಮಾರ್ನಿಂಗ್ ಸಾಂಗ್ ಪ್ಲೇ ಆಗಿರಲಿಲ್ಲ. ಬಿಗ್ ಮನೆಯ ಸ್ಪರ್ಧಿಗಳಿಗೆ ವಿಚಿತ್ರವಾಗಿದೆ. ಅಭಿಮಾನಿಗಳು ಬಿಗ್‍ಬಾಸ್ ಮರೆತಿರ ಬೇಕು ಎಂದುಕೊಂಡಿದ್ದರು. ನಂತರ ಸಾಂಗ್ ಪ್ಲೇ ಆಗದೆ ಇರಲು ಇರುವ ಅಸಲಿ ಕಾರಣ ತಿಳಿದಿದೆ.

ಸಾಂಗ್ ಪ್ಲೇ ಆಗದಿರುವ ಹಿಂದೆ ಇದೆ ಅಸಲಿ ಕಾರಣ!
ಬಿಗ್‍ಮನೆಯ ಸದಸ್ಯರು ಹಾಡು ಪ್ಲೇ ಆಗದೇ ಇರುವುದರಿಂದ ನಿದ್ರೆಯಲ್ಲಿಯೇ ಇದ್ದರು. ನಂತರ 8 ಗಂಟೆ ಸುಮಾರಿಗೆ ಒಂದು ಅಲಾರಾಮ್ ಆಗಿದೆ. ನಂತರ ಎದ್ದ ಸ್ಪರ್ಧಿಗಳು ಇನ್ನೇನು ಎದ್ದು ಎರಡು ಸ್ಟೆಪ್ ಹಾಕಬೇಕು ಎಂದು ಕೊಂಡಿರುವವರು ಒಬ್ಬರಿಗೊಬ್ಬರು ಮುಖ ನೋಡುತ್ತಾ ಏನು ಬಿಗ್‍ಬಾಸ್ ಸಾಂಗ್‍ಗೆ ಹಾಕಿಲ್ಲ ಎನ್ನುವ ಮುಖಭಾವನೆಯಿಂದ ಅವರ ಮುಂಜಾವಿನ ಕೆಲಸಗಳಲ್ಲಿ ತೊಡಗಿಕೊಂಡರು. ಒಂದು ಕ್ಷಣ ಎಲ್ಲರ ಮನಸಿನಲ್ಲಿ ಭಯ ಮತ್ತು ಅಚ್ಚರಿ ಉಂಟಾಗಿತ್ತು. ಬಿಗ್ ಮನೆಯ ಸದಸ್ಯರು ನಗು ಮುಖದಿಂದ ಆಡಬೇಕಿದ್ದ ಟಾಸ್ಕ್ ಅನ್ನು ಕಿತ್ತಾಡಿಕೊಂಡು ಒಬ್ಬರ ಮೇಲೊಬ್ಬರು ದೂರಿ ಕೊಂಡು ಟಾಸ್ಕ್ ಯಶಸ್ವಿಗೊಳಿಸುವಲ್ಲಿ ಮನೆಯ ಸದಸ್ಯರು ವಿಫಲರಾಗಿದ್ದಾರೆ. ಈ ವಿಚಾರವಾಗಿ ಮುನಿಸಿಕೊಂಡ ಬಿಗ್‍ಬಾಸ್ ಟಾಸ್ಕ್ ಕ್ಯಾನ್ಸಲ್ ಮಾಡಿದ್ದರು.

ಬಿಗ್‍ಮನೆಯಲ್ಲಿ ಮತ್ತೆ ಶುರು ಜಡೆ ಜಗಳ!
ಚಂದ್ರಕಲಾ ಮೋಹನ್ ಅಡುಗೆ ಮನೆಯೆಂದು ಬಂದರೆ ಮೊದಲು ಧ್ವನಿ ಎತ್ತಿಮಾತನಾಡುತ್ತಾರೆ. ನಿರ್ಮಲಾ ಅಡುಗೆ ಮಾಡಿ ಎಲ್ಲ ತರಾಕಾರಿ ಖಾಲಿ ಮಾಡಿದ್ದಾರೆ. ಪನ್ನಿರ್ ಖಡಾಯಿ ಮಾಡುತ್ತೇನೆ ಎಂದು ಹೇಳುತ್ತಾರೆ. ನನಗೂ ಎಷ್ಟೊಂದು ಅಡುಗೆ ಬರುತ್ತದೆ. ಆದರೆ ಇಲ್ಲಿ ಇರೋ ಸಾಮಾಗ್ರಿಗಳಲ್ಲಿ ಎಲ್ಲರಿಗೂ ಏನು ಮಾಡಬೇಕು ಎಂದು ನೋಡಿ ಮಾಡಬೇಕು ಎಂದು ಚಂದ್ರಕಲಾ ಕಿಚನ್‍ನಲ್ಲಿ ಇರುವ ಕೆಲವು ಸದಸ್ಯರ ಬಳಿ ಹೇಳಿದ್ದಾರೆ. ಆಹಾರ ವಿಚಾರವಾಗಿಯೇ ಕೆಲವೊಮ್ಮೆ ಒಂಟಿ ಮನೆಯಲ್ಲಿ ಜಗಳವಾಗುತ್ತವೆ.

ಅಡುಗೆ ಕಮ್ಮಿ ಸಾಮಾಗ್ರಿ ಬಳಸಿ
ತರಕಾರಿ ಎಲ್ಲಾ ಖಾಲಿಯಾಗಿದೆ. ನೀವು ಸ್ವಲ್ಪ ಕಮ್ಮಿ ಹಾಕಿ ಅಡುಗೆ ಮಾಡಿ ಎಂದು ಎಂದು ಶುಭ ಪೂಂಜಾ ಅವರು ನಿರ್ಮಲಾ ಅವರಿಗೆ ಹೇಳಿದ್ದಾರೆ. ಈ ವಿಚಾರವಾಗಿ ತನ್ನ ತಪ್ಪನ್ನು ಅರಿತುಕೊಂಡ ನಿರ್ಮಲಾ, ಚಂದ್ರಕಲಾ ಮೋಹನ್ ಅವರ ಬಳಿ ಬಂದು ನನಗೆ ಅಡುಗೆ ಮಾಡುವ ಹಿಡಿತ ತಿಳಿಯಲಿಲ್ಲ. ನಿನ್ನೆ ಉಳಿದಿರುವ ಆಹಾರವನ್ನು ಎಲ್ಲರಿಗೂ ಸ್ವಲ್ಪ ಹಾಕಿ ಎಂದು ಹೇಳಿದ್ದಾರೆ. ಚಂದ್ರಕಲಾ ಮೋಹನ್ ಆಯ್ತು ಎಂದು ಹೇಳಿದ್ದಾರೆ.

ಕೊರೊನ ವೈರಸ್ ಮತ್ತು ಮನುಷ್ಯರು ಎನ್ನುವ ಒಂದು ಟಾಸ್ಕ್ ಮನೆಯ ಸದಸ್ಯರ ಮನಸ್ಸಿನ ಭಾವನೆಯನ್ನು ಬದಲಾಯಿಸಿಬಿಟ್ಟಿದೆ. ಮೇಲ್ನೋಟಕ್ಕೆ ನಗುತ್ತಾ ಪರಸ್ಪರ ಹೊಂದಿಕೊಂಡಂತೆ ಇದ್ದಾರೆ. ಆದರೆ ಎಲ್ಲರ ಮನಸ್ಸಿನಲ್ಲಿ ಬೇರೆಯದ್ದೇ ಅಭಿಪ್ರಾಯವಿದೆ. ಸದಸ್ಯರ ಮುಖವಾಡ ಕಳಚುವ ಕೆಲಸವನ್ನು ಈಗಾಗಲೇ ಬಿಗ್‍ಬಾಸ್ ಪ್ರಾರಂಭಿಸಿದ್ದಾರೆ.

Leave a Reply