ಬೆಳಗ್ಗಿನ ಜಾವ 3 ಗಂಟೆಗೆ ಸುಶಾಂತ್ ಫೋನ್ – ಭಾವಿ ಪತ್ನಿ ಜೊತೆ ಜಗಳ

-ಗೆಳೆಯನಿಂದ ರಹಸ್ಯ ಬಹಿರಂಗ

ಮುಂಬೈ: ನಟ ಸುಶಾಂತ್ ಸಿಂಗ್ ರಜಪೂತ್ ಭಾನುವಾರ ಆಪ್ತ ಗೆಳೆಯ ಮಹೇಶ್ ಶೆಟ್ಟಿಗೆ ಬೆಳಗಿನ ಜಾವ ಮೂರು ಗಂಟೆಗೆ ಫೋನ್ ಮಾಡಿದ್ದರು. ಆದ್ರೆ ಮಹೇಶ್ ಶೆಟ್ಟಿ ಕರೆ ಸ್ವೀಕರಿಸಿರಲಿಲ್ಲ. ಮಹೇಶ್ ಶೆಟ್ಟಿ ಭಾನುವಾರ ಮಧ್ಯಾಹ್ನ ಸುಮಾರು 12 ಗಂಟೆಗೆ ಗೆಳೆಯನಿಗೆ ಕರೆ ಮಾಡಿದ್ದಾರೆ. ಆದ್ರೆ ಸುಶಾಂತ್ ಫೋನ್ ರಿಸೀವ್ ಮಾಡಿಲ್ಲ ಎಂದು ವರದಿಯಾಗಿದೆ.

ಸುಶಾಂತ್ ಸಾವಿನ ಬಳಿಕ ನಟನ ಮೊಬೈಲ್ ಫೋನ್ ವಶಕ್ಕೆ ಪಡೆದಿರೋ ಪೊಲೀಸರು ಕೊನೆಯ ಕರೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಸುಶಾಂತ್ ಕೊನೆಯ 24 ಗಂಟೆಯಲ್ಲಿ ನಾಲ್ವರಿಗೆ ಕರೆ ಮಾಡಿದ್ದಾರೆ. ಗೆಳೆಯ ಮಹೇಶ್ ಶೆಟ್ಟಿ, ಗೆಳತಿ ರಿಯಾ ಚಕ್ರವರ್ತಿ, ಸೋದರಿ ಹಾಗೂ ತಂದೆಗೆ ಫೋನ್ ಮಾಡಿದ್ದು, ನಾಲ್ವರಲ್ಲಿ ಮಹೇಶ್ ಮತ್ತು ರಿಯಾ ಕರೆ ಸ್ವೀಕರಿಸಿಲ್ಲ. ಹೀಗಾಗಿ ಪೊಲೀಸರು ನಾಲ್ವರಿಂದಲೂ ಹೇಳಿಕೆಗಳನ್ನು ಪಡೆದುಕೊಳ್ಳುತ್ತಿದ್ದಾರೆ.

ಸುಶಾಂತ್ ಗೆಳೆಯರು ಹೇಳಿದ್ದೇನು?: ತಂದೆಯ ಬಲವಂತಕ್ಕೆ ಇದೇ ನವೆಂಬರ್ ನಲ್ಲಿ ಮದುವೆಯಾಗಲು ಸುಶಾಂತ್ ಒಪ್ಪಿಕೊಂಡಿದ್ದರು. ಲಾಕ್‍ಡೌನ್ ಸಮಯದಲ್ಲಿ ಭಾವಿ ಪತ್ನಿ ಸುಶಾಂತ್ ಮನೆಯಲ್ಲಿ ವಾಸವಾಗಿದ್ದರು. ಆದ್ರೆ ಇಬ್ಬರ ನಡುವೆ ಸಂಬಂಧ ಚೆನ್ನಾಗಿರಲಿಲ್ಲ. ಮದುವೆಗೆ ಒಪ್ಪಿಕೊಂಡಿದ್ದರೂ, ಕಳೆದ ಕೆಲ ದಿನಗಳಿಂದ ಇಬ್ಬರ ನಡುವೆ ಜಗಳ ಆಗುತ್ತಿತ್ತು. ಕೆಲ ದಿನಗಳ ಹಿಂದೆ ಸುಶಾಂತ್ ಭಾವಿ ಪತ್ನಿ ಗೆಳತಿಯ ಮನೆಗೆ ಶಿಫ್ಟ್ ಆಗಿದ್ದರು. ಸುಶಾಂತ್ ಫೋನ್ ಮಾಡಿದ್ದರೂ ಭಾವಿ ಪತ್ನಿ ಕರೆ ಸ್ವೀಕರಿಸುತ್ತಿರಲಿಲ್ಲ ಎಂದು ಬಿತ್ತರವಾಗಿದೆ.

ಪೊಲೀಸರಿಗೆ ಸುಶಾಂತ್ ಬ್ಯಾಂಕ್ ಮಾಹಿತಿ ಸಹ ಲಭ್ಯವಾಗಿದೆ. ಹಣ ವ್ಯವಹಾರದಲ್ಲಿ ಯಾವುದೇ ಬದಲಾವಣೆಗಳು ಆಗಿರಲಿಲ್ಲ. ಮಾನಸಿಕ ಖಿನ್ನತೆ ಗೆ ಒಳಗಾಗಿದ್ದ ಸುಶಾಂತ್ 5 ತಿಂಗಳಿನಿಂದ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಅನಾರೋಗ್ಯ ಹಿನ್ನೆಲೆಯಲ್ಲಿ ಎರಡು ದಿನಗಳ ಹಿಂದೆ ಸುಶಾಂತ್ ಸೋದರಿಯನ್ನು ಮನೆಗೆ ಕರೆಸಿಕೊಂಡಿದ್ದರು.

Comments

Leave a Reply

Your email address will not be published. Required fields are marked *