ಬೆಂಗಳೂರು: ಶಿರಾ ಉಪ ಚುನಾವಣೆಗೆ ಮುನ್ನ ಕಾಡುಗೊಲ್ಲರ ಅಭಿವೃದ್ಧಿ ನಿಗಮ ರಚಿಸಿ ಆ ಸಮುದಾಯದ ಮನಗೆದ್ದು, ಕೊನೆಗೆ ಶಿರಾ ಕ್ಷೇತ್ರದಲ್ಲಿ ಗೆಲುವು ಕೂಡ ಸಾಧಿಸಿತ್ತು ಬಿಜೆಪಿ ಸರ್ಕಾರ. ಈಗ ಅಂಥಾದ್ದೇ ಅಸ್ತ್ರವನ್ನು ಬೆಳಗಾವಿ ಮತ್ತು ಬಸವಕಲ್ಯಾಣದಲ್ಲಿ ಪ್ರಯೋಗಿಸಿದೆ.

ಉಪ ಚುನಾವಣೆ ಘೋಷಣೆಗೂ ಮುನ್ನವೇ, ಮರಾಠ ಸಮುದಾಯ ಓಲೈಸುವ ಸಲುವಾಗಿ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿ ಸಿಎಂ ಬಿಎಸ್‍ವೈ ಆದೇಶ ಹೊರಡಿಸಿದ್ದಾರೆ. ಅಲ್ಲದೇ 50 ಕೋಟಿ ರೂ. ಅನುದಾನವನ್ನು ಮೀಸಲಿಟ್ಟಿದ್ದಾರೆ. ಶುಕ್ರವಾರ ಬಿಜೆಪಿಯ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ, ಬಸವಕಲ್ಯಾಣದ ಮರಾಠ ಸಮಾವೇಶದಲ್ಲಿ ಪಾಲ್ಗೊಂಡಿದ್ದರು.ಬಸವಕಲ್ಯಾಣದಲ್ಲಿ ಮರಾಠ ಸಮುದಾಯದ 40 ಸಾವಿರ ಮತಗಳಿವೆ. ಬೆಳಗಾವಿ ಲೋಕಸಭೆ ಕ್ಷೇತ್ರದಲ್ಲೂ ಮರಾಠ ಸಮುದಾಯದ ಮತಗಳು ನಿರ್ಣಾಯಕವಾಗಿವೆ.
ಬಸವಕಲ್ಯಾಣದ ನಮ್ಮ ಪಕ್ಷದ ಕಾರ್ಯಕರ್ತರ, ಅಭಿಮಾನಿಗಳ ಈ ಪ್ರೀತಿ ಅಭಿಮಾನಗಳಿಗೆ ನಾನು ಚಿರಋಣಿ. ನಿಮ್ಮ ಆಶೀರ್ವಾದವೇ ನನಗೆ ಶ್ರೀರಕ್ಷೆ, ನಿಮ್ಮಲ್ಲಿ ಒಬ್ಬನಾಗಿ, ಈ ಸಂಭ್ರಮದ ಸ್ವಾಗತಕ್ಕೆ, ನೀವು ತೋರಿದ ಗೌರವಾದರಗಳಿಗೆ ಅತ್ಯಂತ ವಿನೀತ ಭಾವದಿಂದ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. pic.twitter.com/mu5k8eJTSL
— Vijayendra Yediyurappa (@BYVijayendra) November 13, 2020
ಬಿಹಾರದಲ್ಲಿ ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದು, ಅಧಿಕಾರ ಹಂಚಿಕೆಯಾದ ಬಳಿಕವೇ ಬಿಎಸ್‍ವೈ ಸಂಪುಟದ ಸರ್ಜರಿ ನಡೆಯೋದು ಬಹುತೇಕ ಫಿಕ್ಸ್ ಆಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಹಬ್ಬದ ನಂತ್ರ ಸಿಎಂ ಹೈಕಮಾಂಡ್ ಭೇಟಿ ಮಾಡ್ತಾರೆ ಅಂದ್ರು. ಗೃಹಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, ಈ ಬಾರಿಯ ಸಂಪುಟ ವಿಸ್ತರಣೆಯಲ್ಲಿ ಎಲ್ಲರಿಗೂ ಸಿಹಿ ಇರಲಿದೆ. ಯಾರಿಗೂ ಕಹಿ ಇರಲ್ಲ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಇಂದು ಬಸವಕಲ್ಯಾಣದಲ್ಲಿ ಮರಾಠ ಸಮಾಜದ ಬಂಧುಗಳ ಹಾಗೂ ಮುಖಂಡರ ಸಭೆಯಲ್ಲಿ ಭಾಗವಹಿಸಲಾಯಿತು. ಸಚಿವ ಶ್ರೀ ಪ್ರಭು ಚವ್ಹಾಣ್, ಸಂಸದ ಶ್ರೀ ಭಗವಂತ ಖೂಬಾ, ಸಮಾಜದ ಮುಖಂಡರು ಮತ್ತು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು, ಸಾರ್ವಜನಿಕರು ಪಾಲ್ಗೊಂಡಿದ್ದರು. pic.twitter.com/wB3zTJZHBA
— Vijayendra Yediyurappa (@BYVijayendra) November 13, 2020
ಸಂಪುಟದಿಂದ ನಾಲ್ವರು ಸಚಿವರನ್ನ ಕೈಬಿಡ್ತಾರೆ ಎಂಬ ಸುದ್ದಿಗೆ ಪ್ರತಿಕ್ರಿಯಿಸಿದ ಸಚಿವ ಮಾಧುಸ್ವಾಮಿ, ಈ ಬಗ್ಗೆ ಸಿಎಂ ಯಾರ ಬಳಿಯೂ ಚರ್ಚಿಸಿ¯್ಲ ಎಂದರು. ಮುನಿರತ್ನರನ್ನು ಮಂತ್ರಿ ಮಾಡೋದಾಗಿ ಸಿಎಂ ಹೇಳಿದ್ದಾರೆ. ಅದರ ಬಗ್ಗೆಯಷ್ಟೇ ನಾನು ಮಾತಾಡಬಹುದು ನೋಡಿ. ಈ ಮಧ್ಯೆ, ಹುಬ್ಬಳ್ಳಿಯಲ್ಲಿ ಕೇಂದ್ರ ಮಂತ್ರಿ ಪ್ರಹ್ಲಾದ್ ಜೋಷಿ, ಸಚಿವ ಶೆಟ್ಟರ್‍ರನ್ನು ನೂತನ ಶಾಸಕ ಮುನಿರತ್ನ ಭೇಟಿ ಮಾಡಿದ್ದಾರೆ.

Leave a Reply