ಬೆಂಗ್ಳೂರಿನ ಹಾಟ್‍ಸ್ಪಾಟ್‍ಗೂ ಕಾಲಿಟ್ಟ ಹೆಮ್ಮಾರಿ- ಎಸ್‍ಪಿ ರೋಡ್, ನಾಗರಬಾವಿ ಸೀಲ್‍ಡೌನ್

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ದಿನೇ ದಿನೇ ಕೊರೊನಾ ಕೇಸ್‍ಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇಂದು ಒಂದೇ ದಿನ 20 ಮಂದಿಗೆ ಕೊರೋನಾ ಬಂದಿದೆ.

ನಗರ್ತ್‍ಪೇಟೆಯಲ್ಲಿ ಒಬ್ಬರಿಗೆ, ಅಗ್ರಹಾರ ದಾಸರಹಳ್ಳಿಯಲ್ಲಿ ಅಜ್ಜಿಯಿಂದ ಮತ್ತಿಬ್ಬರಿಗೆ, ಯಶವಂತಪುರದ ಮೂವರಿಗೆ ಕೊರೋನಾ ಪಾಸಿಟಿವ್ ಬಂದಿದೆ. ಕೆಆರ್ ಮಾರ್ಕೆಟ್, ಸಿಂಗೇನಗ್ರಹಾರದಲ್ಲಿ ಮಂಡಿ ವ್ಯಾಪಾರಿ ಆಗಿದ್ದ ಸೋಂಕಿತನಿಂದ ಮೂವರಿಗೆ ಕೊರೋನಾ ತಗುಲಿದೆ.

ಮುಂಬೈನಿಂದ ಬಂದ ಮಹಿಳೆಗೂ ಕೊರೊನಾ ಸೋಕಿದೆ. 7 ದಿನಗಳ ಕ್ವಾರಂಟೇನ್ ಮುಗಿಸಿ ಮನೆಗೆ ತೆರಳಿದ್ದ ನಾಗರಬಾವಿ ಯುವಕನಿಗೆ 9ನೇ ದಿನಕ್ಕೆ ವೈರಸ್ ಅಟ್ಯಾಕ್ ಆಗಿದೆ. ಖತಾರ್‍ನಿಂದ ಬಂದಿದ್ದ ಈ ಯುವಕನಿಂದ ತಾಯಿ, ಕಾರು ಚಾಲಕನಿಗೆ ಸೋಂಕು ಹಬ್ಬಿರುವ ಸಾಧ್ಯತೆ ಇದ್ದು, ಕ್ವಾರಂಟೇನ್ ಮಾಡಲಾಗಿದೆ.

ಸದ್ಯ ಎಸ್‍ಪಿ ರೋಡ್, ಧರ್ಮರಾಯಸ್ವಾಮಿ ದೇಗುಲ ರಸ್ತೆ, ನಾಗರಬಾವಿ 2ನೇ ಹಂತದ 4ನೇ ಅಡ್ಡರಸ್ತೆಯನ್ನು ಸೀಲ್‍ಡೌನ್ ಮಾಡಲಾಗಿದೆ. ಜೆಜೆ ನಗರ ಠಾಣೆ ಪೇದೆಗೆ ಸೋಂಕು ಬಂದ ಹಿನ್ನೆಲೆಯಲ್ಲಿ ಪೊಲೀಸ್ ಇನ್ಸ್‍ಪೆಕ್ಟರ್ ಸೇರಿದಂತೆ 20 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ.

ಸದ್ಯ ಈ 20 ಪೊಲೀಸರ ವರದಿ ನೆಗಟಿವ್ ಎಂದು ಬಂದಿದೆ. ಮೂರು ದಿನಗಳ ಬಳಿಕ ಎಲ್ಲರನ್ನೂ ಮತ್ತೆ ಪರೀಕ್ಷೆ ಮಾಡಲು ನಿರ್ಧರಿಸಲಾಗಿದೆ. ಸೋಂಕಿತ ಪೇದೆ ಬಳಕೆ ಮಾಡ್ತಿದ್ದ ರೂಂ ಲಾಕ್ ಮಾಡಲಾಗಿದ್ದು, ಠಾಣೆಯನ್ನು ಸ್ಯಾನಿಟೈಸ್ ಮಾಡಲಾಗಿದೆ.

Comments

Leave a Reply

Your email address will not be published. Required fields are marked *