ಬೆಂಗ್ಳೂರಲ್ಲಿ ಕೊರೊನಾ ಸ್ಫೋಟ- ಸೆಲ್ಫ್ ಲಾಕ್‍ಡೌನ್ ಹೇರಿಕೊಂಡ ಬಸವನಗುಡಿ ವರ್ತಕರು

ಬೆಂಗಳೂರು: ಕೊರೊನಾ ಎಂಬ ವೈರಸ್‍ನ ಕಾಟಕ್ಕೆ ಬೆಂಗಳೂರು ನಲುಗಿ ಹೋಗಿದೆ. ದಿನದಿಂದ ದಿನಕ್ಕೆ ಕೊರೊನಾ ತನ್ನ ಕಬಂದಬಾಹುಗಳನ್ನ ಚಾಚುತ್ತಾ ಸಿಕ್ಕ ಸಿಕ್ಕವರನೆಲ್ಲ ತನ್ನ ತೆಕ್ಕೆಗೆ ಹಾಕಿಕೊಂಡು ಮತ್ತಷ್ಟು ಮಗದಷ್ಟು ಜನರನ್ನ ಕಾಡತ್ತಿದೆ. ಹೆಮ್ಮಾರಿಯಿಂದ ತಪ್ಪಿಸಿಕೊಳ್ಳುವುದಕ್ಕೆ ಲಾಕ್ ಡೌನ್ ಒಂದೇ ಅಸ್ತ್ರ. ಸರ್ಕಾರ ಲಾಕ್ ಡೌನ್ ಮಾಡಲಿಲ್ಲ ಅಂದ್ರೂ ನಾವೇ ಸ್ವಯಂ ಲಾಕ್ ಡೌನ್ ಮಾಡಿಕೊಳ್ಳುತ್ತೇವೆ ಎಂದು ಬೆಂಗಳೂರಿನ ಜನ ಹೇಳುತ್ತಿದ್ದಾರೆ.

ಕೊರೊನಾ ಎಂಬ ಹೆಮ್ಮಾರಿ ವೈರಸ್‍ಗೆ ಬೆಂಗಳೂರಿನ ಜನರಲ್ಲಿ ಆತಂಕ ಸೃಷ್ಟಿಯಾಗಿದೆ. ಲಾಕ್ ಡೌನ್ ಸಮಯದಲ್ಲಿ ದಿನಕ್ಕೆ ನಾಲ್ಕೈದು ಪ್ರಕರಣಗಳು ಬರುತ್ತಿದ್ದ ಸಿಲಿಕಾನ್ ಸಿಟಿಯಲ್ಲಿ, ಲಾಕ್ ಡೌನ್ ಸಡಲಿಕೆ ಬಳಿಕ ಸೆಂಚುರಿ ಮೇಲೆ ಸೆಂಚುರಿ ಬಾರಿಸಿದ್ದ ಕೊರೊನಾ ಈಗ ದಿನಕ್ಕೆ 800ರ ಕೇಸ್‍ಗಳು ಬರ್ತಿವೆ. ಇದಕ್ಕೆ ಕಡಿವಾಣ ಹಾಕಲು ಬಸವನಗುಡಿಯ ವರ್ತಕರು ಮುಂದಾಗಿದ್ದಾರೆ.

ಬಸವನಗುಡಿಯ ವರ್ತಕರ ಸಂಘದವರು ಸೋಮವಾರದಿಂದ ಜುಲೈ 6 ರವರೆಗೆ 1 ವಾರಗಳ ಕಾಲ ಸ್ವಯಂ ಲಾಕ್‍ಡೌನ್ ಹೇರಿಕೊಂಡಿದ್ದಾರೆ. ಜುಲೈ 6 ರ ನಂತರದ ಪರಿಸ್ಥಿತಿ ನೋಡಿಕೊಂಡು ಮತ್ತೆ ವ್ಯಾಪಾರ ವಹಿವಾಟು ಶುರು ಮಾಡಬೇಕಾ ಬೇಡ್ವಾ ಅನ್ನೋದನ್ನ ನಿರ್ಧಾರ ಮಾಡಲಿದ್ದಾರೆ. ಗ್ರಾಹಕರು, ವ್ಯಾಪಾರಿಗಳು ಮತ್ತು ಕೆಲಸದವರು ಕೊರೋನಾದಿಂದ ಸೇಫ್ ಆಗಲಿ ಅನ್ನೋ ಉದ್ದೇಶದಿಂದ ಈ ಮಹತ್ವದ ನಿರ್ಧಾರವನ್ನ ಕೈಗೊಂಡಿದ್ದಾರೆ.

ಒಟ್ಟಿನಲ್ಲಿ ಬಸವನಗುಡಿಯ ಡಿವಿಜಿ ರೋಡ್ ಗಾಂಧಿಬಜಾರ್ ಸೇರಿದಂತೆ ಸುತ್ತಮುತ್ತಲಿನ ವರ್ತಕರು ಅಂಗಡಿಗಳನ್ನು ಬಂದ್ ಮಾಡಲು ಮುಂದಾಗಿದ್ದಾರೆ.

Comments

Leave a Reply

Your email address will not be published. Required fields are marked *