-ಮೈಸೂರಿನಲ್ಲಿ 637, ಯಾವ ಜಿಲ್ಲೆಯಲ್ಲಿ ಎಷ್ಟು?
ಬೆಂಗಳೂರು: ಕಳೆದ ಮೂರು ದಿನಗಳಿಂದ ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ 9 ಸಾವಿರದ ಗಡಿ ದಾಟುತ್ತಿದ್ದು, ಇಂದು 9,140 ಮಂದಿಗೆ ಸೋಂಕು ತಗುಲಿದೆ. ಕೊರೊನಾಗೆ ಇಂದು ಒಟ್ಟು 94 ಮಂದಿ ಸಾವನ್ನಪ್ಪಿದ್ದಾರೆ.

ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 4,49,551ಕ್ಕೆ ಏರಿಕೆಯಾಗಿದ್ದು, 97,815 ಸಕ್ರಿಯ ಪ್ರಕರಣಗಳಿವೆ. 795 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆ 7,161ಕ್ಕೆ ಏರಿಕೆಯಾಗಿದೆ. ಇಂದು ರಾಜ್ಯದಲ್ಲಿ 9,557 ಜನರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಸಿಲಿಕಾನ್ ಸಿಟಿಯಲ್ಲಿ ಕೊರೊನಾ ರಣಕೇಕೆ ಮುಂದುವರಿದಿದ್ದು ಇಂದು 3,552 ಪ್ರಕರಣಗಳು ವರದಿಯಾಗಿವೆ. ಕೇವಲ ಬೆಂಗಳೂರು ನಗರದಲ್ಲಿ ಕೊರೊನಾದಿಂದಾಗಿ 2,391 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 175, ಬಳ್ಳಾರಿ 366, ಬೆಳಗಾವಿ 201, ಬೆಂಗಳೂರು ಗ್ರಾಮಾಂತರ 211, ಬೆಂಗಳೂರು ನಗರ 3,552, ಬೀದರ್ 101, ಚಾಮರಾಜನಗರ 60, ಚಿಕ್ಕಬಳ್ಳಾಪುರ 101, ಚಿಕ್ಕಮಗಳೂರು 159, ಚಿತ್ರದುರ್ಗ 227, ದಕ್ಷಿಣ ಕನ್ನಡ 401, ದಾವಣಗೆರೆ 267, ಧಾರವಾಡ 239, ಗದಗ 49, ಹಾಸನ 324, ಹಾವೇರಿ 213, ಕಲಬುರಗಿ 222, ಕೊಡಗು 27, ಕೋಲಾರ 53, ಕೊಪ್ಪಳ 183, ಮಂಡ್ಯ 193, ಮೈಸೂರು 637, ರಾಯಚೂರು 131, ರಾಮನಗರ 81, ಶಿವಮೊಗ್ಗ 155, ತುಮಕೂರು 304, ಉಡುಪಿ 169, ಉತ್ತರ ಕನ್ನಡ 130, ವಿಜಯಪುರ 58 ಮತ್ತು ಯಾದಗಿರಿಯಲ್ಲಿ 151 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.
ಇಂದಿನ 12/09/2020 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.@CMofKarnataka @BSYBJP @DVSadanandGowda @SureshAngadi_ @MoHFW_INDIA @UNDP_India @WHOSEARO @UNICEFIndia @sriramulubjp @drashwathcn @BSBommaihttps://t.co/blIS832vkL pic.twitter.com/xOrXgI8p1Y
— Karnataka Health Department (@DHFWKA) September 12, 2020

Leave a Reply