ಬೆಂಗಳೂರು ಗ್ಯಾಂಗ್ ರೇಪ್ ಕೇಸ್ – ಆರೋಪಿಗಳ ಬಳಿ ಸಾವಿರಕ್ಕೂ ಹೆಚ್ಚು ವಿಡಿಯೋ ಪತ್ತೆ

ಬೆಂಗಳೂರು: ಬಾಂಗ್ಲಾದೇಶ ಯುವತಿ ಮೇಲೆ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಆರೋಪಿಗಳ ಬಳಿ ಸಾವಿರಕ್ಕೂ ಹೆಚ್ಚು ವಿಡಿಯೋ ಸಿಕ್ಕಿವೆ.

ಬಾಂಗ್ಲಾದೇಶದ ಯುವತಿ ಮೇಲೆ ಗ್ಯಾಂಗ್ ರೇಪ್ ಪ್ರಕರಣ ಇಡೀ ದೇಶದ ಗಮನ ಸೆಳೆದಿತ್ತು. ಯುವತಿಯೊಬ್ಬಳ ಮೇಲೆ ಹಲ್ಲೆ ಮಾಡಿ ಗ್ಯಾಂಗ್ ರೇಪ್ ಮಾಡಿದ್ದ ವಿಡಿಯೋ ದೇಶದಲ್ಲಿ ವೈರಲ್ ಆಗುತ್ತಿದ್ದಂತೆ ತನಿಖೆಗಿಳಿದ ಪೊಲೀಸರು, ಅದು ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ ನಡೆದಿದೆ ಎನ್ನುವುದನ್ನು ಪತ್ತೆ ಮಾಡಿದ್ದರು. ತಕ್ಷಣ ಪ್ರಕರಣ ದಾಖಲಿಸಿಕೊಂಡು ಹತ್ತಕ್ಕೂ ಹೆಚ್ಚು ಜನ ಆರೋಪಿಗಳನ್ನು ಬಂಧಿಸಿದ್ದರು. ಇದನ್ನೂ ಓದಿ: ಗ್ಯಾಂಗ್ ರೇಪ್ ಪ್ರಕರಣ – ಟಿಕ್‍ಟಾಕ್ ಸ್ಟಾರ್‌ನಿಂದ ಬೆಂಗಳೂರಿಗೆ ಯುವತಿಯರ ಸಪ್ಲೈ..!

ವಿಚಾರಣೆ ವೇಳೆ ಗ್ಯಾಂಗ್ ರೇಪ್ ಮಾಡಿದ ಯುವಕರ ಮೊಬೈಲ್ ಪರಿಶೀಲನೆ ವೇಳೆ ಪೊಲೀಸರಿಗೆ ಮತ್ತಷ್ಟು ವಿಚಾರಗಳು ಬಯಲಿಗೆ ಬಂದಿದೆ. ಆರೋಪಿಗಳ ಮೊಬೈಲಿನಲ್ಲಿ ಯುವಕ – ಯುವತಿಯರು, ಅರೆಬೆತ್ತಲೆಯಾಗಿ ಡಾನ್ಸ್ ಮಾಡಿರುವ ಸಾವಿರಕ್ಕೂ ಹೆಚ್ಚು ವಿಡಿಯೋಗಳು ಪತ್ತೆಯಾಗಿವೆ.

ಕೆಲವು ಮನೆಯಲ್ಲೇ ಕುಡಿದ ವೇಳೆ ಡಾನ್ಸ್ ಮಾಡಿ ವಿಡಿಯೋ ಮಾಡಿದ್ದರೆ ಇನ್ನೂ ಕೆಲವು, ಡಾನ್ಸ್ ಬಾರ್, ಪಬ್, ಸೇರಿದಂತೆ ಬೇರೆ ಬೇರೆ ಕಡೆಗಳಲ್ಲಿ ಅಶ್ಲೀಲವಾಗಿ ಡಾನ್ಸ್ ಮಾಡಿರುವ ವಿಡಿಯೋಗಳು ಪತ್ತೆಯಾಗಿವೆ. ಇದನ್ನೂ ಓದಿ: ನಿಲ್ಲಿಸದೇ ಇದ್ರೆ ಗಾಡಿ ಒಳಗಡೆ ಮೂತ್ರ ಮಾಡ್ತೀನಿ – ಗ್ಯಾಂಗ್ ರೇಪ್ ಆರೋಪಿಗೆ ಗುಂಡೇಟು

ಸಂತ್ರಸ್ತ ಯುವತಿ ಮತ್ತು ಆರೋಪಿಗಳು ಸೇರಿದಂತೆ ಹತ್ತಾರು ಜನ ಯುವಕ – ಯುವತಿಯರು ಬಾಂಗ್ಲಾದೇಶ ದೇಶದಿಂದ ಅಕ್ರಮವಾಗಿ ವಲಸೆ ಬಂದಿದ್ದು, ಎಲ್ಲರೂ ಕೂಡ ವೇಶ್ಯಾವಾಟಿಕೆ ದಂಧೆಯಲ್ಲಿ ಭಾಗಿಯಾಗಿದ್ದರು ಎಂಬ ವಿಚಾರ ಪೊಲೀಸರ ತನಿಖೆ ವೇಳೆ ಬಹಿರಂಗವಾಗಿದೆ.

ಬಾಂಗ್ಲಾದೇಶದಿಂದ ಯುವತಿಯರನ್ನು ಕರೆತರುತ್ತಿದ್ದ ಕೆಲ ಯುವಕರು, ನಗರದ ಕೆಲ ಪ್ರತಿಷ್ಠಿತ ಲೇಔಟ್ ಗಳಲ್ಲಿ ಬಾಡಿಗೆ ಮನೆ ಮಾಡಿಕೊಂಡು ಅಲ್ಲಿ ಕೆಲ ಅಕ್ರಮ ಚಟುವಟಿಕೆ ನಡೆಸುತ್ತಿದ್ದರು. ಇದೇ ವಿಚಾರದ ಹಣ ಹಂಚಿಕೆ ವಿಚಾರಕ್ಕೆ ಗಲಾಟೆ ನಡೆದು, ಯುವತಿ ಮೇಲೆ ಹಲ್ಲೆ ಗ್ಯಾಂಗ್ ರೇಪ್ ಮಾಡಿ, ಆ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಡಲಾಗಿತ್ತು.

ಈ ರೀತಿ ಅಕ್ರಮವಾಗಿ ಬಾಂಗ್ಲಾದೇಶ, ಸೇರಿದಂತೆ ವಿವಿಧ ದೇಶಗಳಿಂದ ಬೆಂಗಳೂರಿಗೆ ಬಂದು ನೆಲೆಸಿರುವರ ವಿರುದ್ಧ ಪೊಲೀಸರು ಈಗ ವಿಶೇಷ ಕಾರ್ಯಾಚರಣೆಗೆ ಇಳಿದಿದ್ದಾರೆ.

Comments

Leave a Reply

Your email address will not be published. Required fields are marked *