ಬೆಂಗಳೂರಿನ ಮರಗಳ ಮಾರಣ ಹೋಮ ಸಿದ್ಧತೆಗೆ ರಮ್ಯಾ ವಿರೋಧ

ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ರಮ್ಯಾ ಬೆಂಗಳೂರಿನಲ್ಲಿ 6,000 ಮರಗಳ ಮಾರಣ ಹೋಮದ ಯೋಜನೆಯನ್ನು ವಿರೋಧಿಸಿ ಸಹಿ ಸಂಗ್ರಹಕ್ಕೆ ಮನವಿ ಮಾಡಿದ್ದಾರೆ.

ಹೆಬ್ಬಾಳ-ನಾಗವಾರ ಕಣಿವೆ ವ್ಯಾಪ್ತಿಯ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಸರ್ಕಾರ ಕೈಗೆತ್ತಿಕೊಂಡಿದೆ. ಈ ಯೋಜನೆ ಅಡಿಯಲ್ಲಿ ಯಲಹಂಕದ ಸಿಂಗನಾಯಕನಹಳ್ಳಿ ಕೆರೆ ಅಭಿವೃದ್ಧಿಗೆ ಸಣ್ಣ ನೀರಾವರಿ ಇಲಾಖೆ ಮುಂದಾಗಿದೆ. ಈ ಯೋಜನೆಗೆ 6 ಸಾವಿರಕ್ಕೂ ಅಧಿಕ ಮರಗಳನ್ನು ಕತ್ತರಿಸಲಾಗುತ್ತಿದೆ. ಇದು ಈಗ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಮರ ಕಡಿಯುವುದು ಏಕೆ ಇದರಿಂದ ಪರಿಸರ ಮತ್ತಷ್ಟು ಹಾಳಾಗಲಿದೆ ಎನ್ನುವ ಮಾತುಗಳನ್ನು ಪರಿಸರವಾದಿಗಳು ಹೇಳಿದ್ದಾರೆ. ಹೀಗಾಗಿ ನಟಿ ರಮ್ಯಾ ಈ ಕುರಿತಾಗಿ ಇನ್‍ಸ್ಟಾಗ್ರಾಮ್‍ನಲ್ಲಿ ಜಾಗೃತಿಯನ್ನು ಮೂಡಿಸುತ್ತಿದ್ದಾರೆ.

ಪರಿಸರ ಪರ ಕಾಳಜಿ ಹೊಂದಿರುವ ಅನೇಕರು ಮರವನ್ನು ಕತ್ತರಿಸುವುದಕ್ಕೆ ವಿರೋಧಿಸಿ ಸಹಿ ಸಂಗ್ರಹಿಸುತ್ತಿದ್ದಾರೆ. ಬೆಂಗಳೂರಿನ ಮರಗಳನ್ನು ಉಳಿಸುವ ಆಂದೋಲನವನ್ನು ರಮ್ಯಾ ಬೆಂಬಲಿಸಿದ್ದಾರೆ. ಅಲ್ಲದೆ, ಅಭಿಮಾನಿಗಳ ಬಳಿ ಸಹಿ ಹಾಕುವಂತೆ ಕೋರಿದ್ದಾರೆ. ಸಿನಿಮಾ ರಾಜಕೀಯದಿಂದ ದೂರ ಇರುವ ರಮ್ಯಾ ಅವರು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿರುತ್ತಾರೆ.

Comments

Leave a Reply

Your email address will not be published. Required fields are marked *