ಬೆಂಗಳೂರಿನಲ್ಲಿ ಶತಕದಂಚಿಗೆ ತಲುಪಿದ ಪೆಟ್ರೋಲ್ ಬೆಲೆ

petrol

ಬೆಂಗಳೂರು: ಪೆಟ್ರೋಲ್ ಬೆಲೆ ಬೆಂಗಳೂರಿನಲ್ಲಿ ಶತಕದಂಚಿಗೆ ತಲುಪಿದೆ. ಬೆಂಗಳೂರಲ್ಲಿ ಲೀಟರ್ ಪೆಟ್ರೋಲ್ ಬರೋಬ್ಬರಿ 98 ರೂಪಾಯಿ 19 ಪೈಸೆಯಾಗಿದೆ. ಹಾಗೆಯೇ ಲೀಟರ್ ಡಿಸೇಲ್ ಗೆ 90 ರೂಪಾಯಿ 84 ಪೈಸೆಯಾಗಿದೆ. ಕಳೆದ ಒಂದು ವಾರದಿಂದ ಪೈಸೆ ಪೈಸೆ ಲೆಕ್ಕದಲ್ಲಿ ಪೆಟ್ರೋಲ್ ಮತು ಡೀಸೆಲ್ ಬೆಲೆ ಹೆಚ್ಚಾಗುತ್ತಿದೆ.

ಕೊರೊನಾ ಲಾಕ್‍ಡೌನ್ ನಿಂದಾಗಿ ಜನಸಾಮಾನ್ಯರು ಬದುಕೋದು ಕಷ್ಟವಾಗಿದೆ. ಸಾಕಷ್ಟು ಜನಕ್ಕೆ ಆರ್ಥಿಕ ಹೊಡೆತ ಬಿದ್ದಿದೆ. ಇದರ ನಡುವೆ ಪೆಟ್ರೋಲ್, ಡಿಸೇಲ್ ಬೆಲೆಗಳು ಗಗನಕ್ಕೇರುತ್ತಿವೆ. ಅದ್ರಲ್ಲೂ ಪೆಟ್ರೋಲ್ ಬೆಲೆಯಂತೂ ಶತಕದ ಸನಿಹದಲ್ಲಿದೆ. ಈಗಾಗಲೇ ದೇಶದ ಕೆಲ ನಗರಗಳಲ್ಲಿ ಪೆಟ್ರೋಲ್ ಬೆಲೆ 100 ರೂಪಾಯಿ ಗಡಿ ದಾಟಿದೆ.

ದೇಶದಲ್ಲಿ ಕೊರೊನಾ ಎರಡನೇ ಅಲೆ ಮಾರುಕಟ್ಟೆಯ ಮೇಲೆ ನೇರ ಪರಿಣಾಮ ಬೀರಿದೆ. ಕೊರೊನಾ ನಿಯಂತ್ರಣಕ್ಕಾಗಿ ರಾಜ್ಯಗಳು ಲಾಕ್‍ಡೌನ್ ಆಗಿದ್ದರಿಂದ ಇಂಧನ ಮಾರಾಟದಲ್ಲಿ ಇಳಿಕೆಯಾಗಿದೆ. ಕಳೆದ ಒಂದು ತಿಂಗಳಿಗೆ ಹೋಲಿಕೆ ಮಾಡಿದ್ರೆ ಶೇ.17ರಷ್ಟು ಇಂಧನ ಮಾರಾಟದಲ್ಲಿ ಇಳಿಕೆಯಾಗಿದೆ. ಮೇ ತಿಂಗಳಿನಲ್ಲಿ ಪೆಟ್ರೋಲ್ ಬರೋಬ್ಬರಿ 17.9 ಲಕ್ಷ ಟನ್ ನಷ್ಟು ಇಳಿಕೆ ಕಂಡಿದೆ.

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ನಿರಂತರವಾಗಿ ಏರಿಕೆಯಾಗ್ತಿದೆ. ಜನವರಿಯಲ್ಲಿ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರಲ್ ಗೆ 54.79 ಡಾಲರ್ ನಷ್ಟಿತ್ತು. ಇದೀಗ ಶೇ.22ರಷ್ಟು ಏರಿಕೆಯಾಗಿದ್ದು, ಪ್ರತಿ ಬ್ಯಾರಲ್ 66.98 ಡಾಲರ್ ಗೆ ತಲುಪಿದೆ.

Comments

Leave a Reply

Your email address will not be published. Required fields are marked *