ಬೆಂಗಳೂರಿಗರೇ ಎಚ್ಚರ- ಸೋಂಕಿತ ಮಗಳ ಸಂಪರ್ಕದಲ್ಲಿದ್ದ ತಾಯಿಗೂ ಬ್ರಿಟನ್ ವೈರಸ್

– ಬೆಂಗಳೂರಿನಲ್ಲಿಯೇ ಇದ್ದ ಮಹಿಳೆಗೆ ಬ್ರಿಟನ್ ವೈರಸ್
– ಬಿಬಿಎಂಪಿಯಿಂದ ಮನೆಗೆ ಸ್ಯಾನಿಟೈಸ್

ಬೆಂಗಳೂರು: ಬ್ರಿಟನ್ ನಿಂದ ಬಂದ ಸೋಂಕಿತ ಮಗಳ ಸಂಪರ್ಕದಲ್ಲಿದ್ದ ತಾಯಿಯ ವರದಿಯೂ ಪಾಸಿಟಿವ್ ಬಂದಿದ್ದು, ಬೆಂಗಳೂರಿನಲ್ಲಿ ಹೊಸ ತಳಿಯ ಆತಂಕ ಹೆಚ್ಚಾಗಿದೆ. ಸದ್ಯ ಮಹಿಳೆಯ ಆರೋಗ್ಯದಲ್ಲಿ ಏರುಪೇರು ಕಂಡು ಬಂದ ಹಿನ್ನೆಲೆ ಆಸ್ಪತ್ರೆಗೆ ದಾಖಲಿಸಲಾಗಿದೆ.

ಡಿಸೆಂಬರ್ 19ಕ್ಕೆ ಮಹಿಳೆ ತಂದೆಯ ಅನಾರೋಗ್ಯ ಹಿನ್ನೆಲೆ ಬ್ರಿಟನ್ ನಿಂದ ಬೆಂಗಳೂರಿನ ರಾಜಾಜಿನಗರದ 1ನೇ ಬ್ಲಾಕ್ ನಲ್ಲಿರುವ ಪೋಷಕರ ಮನೆಗೆ ಬಂದಿದ್ದರು. ಈ ಮಹಿಳೆಗೆ ಹೊಸ ರೂಪಾಂತರ ಸೋಂಕು ಕಾಣಿಸಿಕೊಂಡಿತ್ತು. ಮಹಿಳೆಯ ಪ್ರಾಥಮಿಕ ಸಂಪರ್ಕದಲ್ಲಿದ್ದ ತಾಯಿಯಲ್ಲಿ ಬ್ರಿಟನ್ ಕೊರೊನಾ ವೈರಸ್ ಪಾಸಿಟಿವ್ ಬಂದಿದೆ. ಇದೇ ಮನೆಯಲ್ಲಿರುವ ಇನ್ನಿಬ್ಬರಿಗೂ ಆರ್.ಟಿ-ಪಿಸಿಆರ್ ಪರೀಕ್ಷೆಯಲ್ಲಿ ಕೊರೊನಾ ಸೋಂಕು ತಗುಲಿದ್ದು, ಇಬ್ಬರ ಮಾದರಿಗಳನ್ನ ಜೆನೆಟಿಕ್ ಸೀಕ್ವೆನ್ಸ್ ಪರೀಕ್ಷೆಗೆ ಕಳುಹಿಸಲಾಗಿದೆ.

ನಿನ್ನೆಯೇ ಪಾಸಿಟಿವ್ ತಲುಪಿರುವ ವರದಿ ಬಂದ್ರೂ ಬಿಬಿಎಂಪಿ ಇದುವರೆಗೂ ಮನೆಯನ್ನ ಸೀಲ್‍ಡೌನ್ ಮಾಡಿಲ್ಲ. ಮನೆಯ ಮುಂದೆ ಫಲಕ ಹಾಕುವ ಕೆಲಸವೂ ಮಾಡಿಲ್ಲ. ಇಂದು ಬೆಳಗ್ಗೆ ಬಿಬಿಎಂಪಿ ಮನೆಯ ಮುಂಭಾಗ ಸ್ಯಾನಿಟೈಸ್ ಮಾಡಿದ್ದಾರೆ.

ಬೆಂಗಳೂರು ಒಂದರಲ್ಲಿಯೇ 6 ಜನರಿಗೆ ಬ್ರಿಟನ್ ವೈರಸ್ ಕನ್ಫರ್ಮ್ ಆಗಿದೆ. ಈ ಹಿನ್ನೆಲೆಯಲ್ಲಿ ಇದೀಗ ಮತ್ತೆ ಬ್ರಿಟನ್ ವೈರಸ್ ಆತಂಕ ಶುರುವಾಗಿದೆ. ಬೆಂಗಳೂರಿನಲ್ಲಿ 6 ಜನರಿಗೆ ಬ್ರಿಟನ್ ಬೆನ್ನಲ್ಲೇ ಇನ್ನಷ್ಟು ರಿಸಲ್ಟ್ ಬರುವುದು ಬಾಕಿ ಇದೆ. ಸೋಂಕಿತ ಆರು ಜನರಲ್ಲಿ ಐವರು ಬ್ರಿಟನ್ ಟ್ರಾವೆಲ್ ಹಿಸ್ಟರಿ ಹೊಂದಿದ್ದು, ಒಬ್ಬರು ಪ್ರಾಥಮಿಕ ಸಂಪರ್ಕಿತರಾಗಿದ್ದಾರೆ.

Comments

Leave a Reply

Your email address will not be published. Required fields are marked *