ಬೆಂಗಳೂರಲ್ಲಿ ಅನ್‍ಲಾಕ್ ಅನಿವಾರ್ಯ: ಗೌರವ್ ಗುಪ್ತಾ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಅನ್‍ಲಾಕ್ ಅನಿವಾರ್ಯ ಎಂದು ಬಿಬಿಎಂಪಿ ಕಮಿಷನರ್ ಗೌರವ್ ಗುಪ್ತಾ ಅಭಿಪ್ರಾಯಪಟ್ಟಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಲ್ಲಿ ಅನ್ ಲಾಕ್ ಗೆ ಸಿದ್ಧವಾಗಬೇಕು. ಎರಡು ತಿಂಗಳು ಎಲ್ಲರೂ ನೊಂದಿದ್ದಾರೆ. ಹಂತ ಹಂತವಾಗಿ ಅನ್ ಲಾಕ್ ಆಗಲೇಬೇಕಾಗಿದೆ. ಎಲ್ಲ ವಲಯಗಳಲ್ಲೂ ಆನ್ ಲಾಕ್ ಆಗಬೇಕಿದೆ. ಉದ್ದಿಮೆಗಳು ಆರ್ಥಿಕ ಚೇತರಿಕೆ ಕಾಣಲು ಅಗತ್ಯ ಇದೆ ಎಂದರು.

ಲಾಕ್ ಡೌನ್ ಸಡಿಲಿಕೆ ಹಂತ ಹಂತವಾಗಿ ಮಾಡಬೇಕು. ಕೇಸ್ ಪ್ರಮಾಣ ಕಡಿಮೆ ಆಗಬೇಕು, ತಳಮಟ್ಟದಲ್ಲಿ ಸೋಂಕಿತರು ಐಸೋಲೇಷನ್ ಆಗಬೇಕು. ಸದ್ಯದ ಸ್ಥಿತಿಯಲ್ಲಿ ಎರಡೂ ಆಗ್ತಾ ಇದೆ. ಸಾಮಾಜಿಕ ಜೀವನದ ಬಗ್ಗೆ ನಮಗೆ ಕಾಳಜಿ ಇದೆ. ಹಂತ ಹಂತವಾಗಿ ರಿಲೀಫ್ ಮಾಡಿದರೆ ಉತ್ತಮ ಎಂದು ಹೇಳುವ ಮೂಲಕ ಸರ್ಕಾರಕ್ಕೆ ಮಾಹಿತಿ ನೀಡಿದರು.

 ಒಟ್ಟಿನಲ್ಲಿ ಜೂನ್ 7ರಂದು ಪ್ರಸ್ತುತ ಇರುವ ಲಾಕ್ ಡೌನ್ ಕೊನೆಗೊಳ್ಳಲಿದ್ದು, ಇತ್ತ ತಜ್ಞರು ಲಾಕ್ ಡೌನ್ ಮುಂದುವರಿಸಿ ಎಂದು ಹೇಳುತ್ತಿದ್ದಾರೆ. ಆದರೆ ಸರ್ಕಾರ ಮುಂದೆ ಯಾವ ನಿರ್ಧಾರ ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

Comments

Leave a Reply

Your email address will not be published. Required fields are marked *