ಬುಕ್ ಹಿಡಿದು ಕುಳಿತ ಐರಾ – ನಟಿ ಅನು ಪ್ರಭಾಕರ್ ಮಗಳಿಗೆ ರಾಧಿಕಾ ಧನ್ಯವಾದ

ಬೆಂಗಳೂರು: ನಟಿ ರಾಧಿಕಾ ಪಂಡಿತ್ ಸೋಶಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯರಾಗಿದ್ದು, ತಮ್ಮ ಮಕ್ಕಳ ಫೋಟೋವನ್ನು ಅಭಿಮಾನಿಗಳ ಜೊತೆ ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಇದೀಗ ನಟಿ ರಾಧಿಕಾ ತಮ್ಮ ಮಗಳು ಐರಾಳ ಫೋಟೋವನ್ನು ಹಂಚಿಕೊಂಡಿದ್ದಾರೆ.

ನಟಿ ರಾಧಿಕಾ ಇನ್‍ಸ್ಟಾಗ್ರಾಂನಲ್ಲಿ ಐರಾ ಬುಕ್ ಹಿಡಿದು ಕುಳಿತಿರುವ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ಆ ಫೋಟೋಗೆ, “ನಾನು ಪರೀಕ್ಷೆಗಳ ಸಮಯದಲ್ಲಿಯೂ ಈ ರೀತಿ ಏಕಾಗ್ರತೆಯಿಂದ ಓದಿರಲಿಲ್ಲ. ಫೋನ್ ಅಥವಾ ದೂರದರ್ಶನ ಬದಲಿಗೆ ಅವಳಿಗೆ ನಾನು ಪುಸ್ತಕಗಳನ್ನು ನೀಡಲು ಬಯಸುತ್ತೇನೆ. ಅವಳಿಗೆ ಮನರಂಜನೆಗಾಗಿ ಪುಸ್ತಕಗಳನ್ನು ನೀಡುತ್ತೇನೆ. ಆಗ ಐರಾ ಓದುವ ಅಭ್ಯಾಸವನ್ನು ಬೆಳೆಸಿಕೊಳ್ಳುತ್ತಾಳೆ. ಸಹಜವಾಗಿ ಈಗ ಅವಳು ಫೋಟೋಗಳನ್ನು ನೋಡುತ್ತಿದ್ದಾಳೆ” ಎಂದು ಬರೆದಿದ್ದಾರೆ.

ಅಲ್ಲದೇ ಈ ಸುಂದರವಾದ ಪುಸ್ತಕಗಳಿಗಾಗಿ ಐರಾಳ ಗೆಳತಿ, ಡಾರ್ಲಿಂಗ್ ನಂದನ ಪ್ರಭಾಕರ್ ಮುಖರ್ಜಿ, ನಟಿ ಅನು ಪ್ರಭಾಕರ್ ಮತ್ತು ಪತಿ ರಘು ಮುಖರ್ಜಿಗೆ ಧನ್ಯವಾದ ತಿಳಿಸಿದ್ದಾರೆ. ಯಾಕೆಂದರೆ ಐರಾಳ ಹುಟ್ಟುಹಬ್ಬದ ದಿನ ಅನು ಪ್ರಭಾಕರ್ ಮತ್ತು ಪತಿ ರಘು ಮುಖರ್ಜಿ ಈ ಪುಸ್ತಕಗಳನ್ನು ಐರಾಗೆ ಉಡುಗೊರೆಯಾಗಿ ನೀಡಿದ್ದರು. ಹೀಗಾಗಿ ಅವರಿಗೆ ರಾಧಿಕಾ ಧನ್ಯವಾದ ತಿಳಿಸಿದ್ದಾರೆ.

https://www.instagram.com/p/CC8u6T7nDDw/?igshid=1gf19nxcqv023

ಕೆಲವು ದಿನಗಳ ಹಿಂದೆ ನಟ ರಘು ಮುಖರ್ಜಿ ಕೂಡ ತಮ್ಮ ಮಗಳು ಬುಕ್ ಹಿಡಿದು ಕುಳಿತಿದ್ದ ಫೋಟೋವನ್ನು ಇನ್‍ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದರು.

https://www.instagram.com/p/CDLUWjDA2XR/?igshid=6ni5xezjj11x

ಇತ್ತೀಚೆಗಷ್ಟೆ, “ನಾನು ಸಮುದ್ರವನ್ನು ಮಿಸ್ ಮಾಡುತ್ತಿದ್ದೇನೆ. ನನ್ನ ಮಕ್ಕಳನ್ನು ಪಾರ್ಕಿಗೆ ಕರೆದುಕೊಂಡು ಹೋಗುವುದನ್ನು ಮಿಸ್ ಮಾಡುತ್ತಿದ್ದೇನೆ. ಈ ದಿನಗಳಲ್ಲಿ ಸ್ನೇಹಿತರನ್ನು ಭೇಟಿಯಾಗುವುದನ್ನು ಮಿಸ್ ಮಾಡುತ್ತಿದ್ದೇನೆ. ಇನ್ನೂ ಹಲವಾರು ವಿಚಾರಗಳನ್ನು ಮಿಸ್ ಮಾಡುತ್ತಿದ್ದೇನೆ. ಆದರೆ ನಾವು ಸೇಫ್ ಆಗಿ ಮತ್ತು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಕೊರೊನಾ ನಿವಾರಣೆಯಾಗವವರೆಗೂ ನಾವು ಈ ಯಾವುದನ್ನು ಮಾಡಲು ಆಗುವುದಿಲ್ಲ. ನೀವು ಏನನ್ನೂ ಮಿಸ್ ಮಾಡುತ್ತಿದ್ದೀರಾ? ಎಂದು ಕೆಲವೊಂದು ಫೋಟೋಗಳನ್ನು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಅಪ್ಲೋಡ್ ಮಾಡಿ ಬರೆದುಕೊಂಡಿದ್ದರು.

Comments

Leave a Reply

Your email address will not be published. Required fields are marked *