ಬೀದಿ ಶ್ವಾನಗಳಿಗೆ ಆಹಾರ ಹಾಕಿದ್ದಕ್ಕೆ ಮಹಿಳೆ ವಿರುದ್ಧ ವ್ಯಕ್ತಿ ಕಿಡಿ

ಮುಂಬೈ: ಬೀದಿನಾಯಿಗಳಿಗೆ ಆಹಾರ ನೀಡಿದ್ದಕ್ಕೆ ವ್ಯಕ್ತಿಯೋರ್ವ ಮಹಿಳೆ ವಿರುದ್ಧ ಕಿಡಿಕಾರಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವೀಡಿಯೋವನ್ನು ಟೆಡ್ ದಿ ಸ್ಟೋನರ್ ಎಂಬವರು ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಮುಂಬೈನ ಬೊರಿವಾಲಿ ಪ್ರದೇಶದ ಯೋಗಿ ನಗರದಲ್ಲಿ ವ್ಯಕ್ತಿಯೋರ್ವ ಬೀದಿ ಬದಿಯ ಶ್ವಾನಗಳಿಗೆ ಆಹಾರ ನೀಡಿದ್ದಕ್ಕಾಗಿ ಆಕ್ರೋಶ ವ್ಯಕ್ತಪಡಿಸಿದ್ದಾನೆ.

ವೀಡಿಯೋದಲ್ಲಿ ಮಹಿಳೆಯೊಬ್ಬಳು, ಬ್ಲೂ ಕಲರ್ ಟಿ-ಶರ್ಟ್ ಹಾಕಿರುವ ವ್ಯಕ್ತಿಗೆ ನೀವು ಮುಗ್ಧ ಪ್ರಾಣಿಗಳನ್ನು ಹೊಡೆಯುವ ಹಾಗೆ ಇಲ್ಲ ಎಂದು ತಿಳಿಸುತ್ತಾಳೆ. ಅದಕ್ಕೆ ವ್ಯಕ್ತಿ ನನಗೆ ಏನು ಮಾಡಬೇಕು ಎಂಬುದು ತಿಳಿದಿದೆ. ನಿನ್ನಿಂದ ಕಲಿಯುವ ಅಗತ್ಯವಿಲ್ಲ. ನನ್ನ ಜೊತೆ ಹಾಗೂ ನನ್ನ ವಾಚ್ ಮ್ಯಾನ್ ಜೊತೆ ನೀನು ಮಾತನಾಡಬೇಡ ಎಂದು ಹೇಳುತ್ತಾನೆ.

ನಂತರ ಮಹಿಳೆ ವಾಚ್ ಮ್ಯಾನ್‍ಗೆ ಶ್ವಾನಗಳು ಅಸಹಾಯಕ ಅವುಗಳಿಗೆ ಹೊಡೆಯಬೇಡಿ ಎಂದಾಗ ವ್ಯಕ್ತಿ ಶ್ವಾನಗಳು ಅಸಹಾಯಕವೆಂದರೆ ನಿನ್ನ ಮನೆಗೆ ಕರೆದೊಯ್ದು, ನಿನಗೆ ಬೇಕಾದನ್ನು ಮಾಡು ಎಂದು ಹೇಳುತ್ತಾನೆ. ಬಳಿಕ ಮಹಿಳೆ ನಿಮ್ಮ ಮಕ್ಕಳಿಗೂ ನೀವು ಹೀಗೆ ಹೊಡೆಯುತ್ತೀರಾ ಎಂದು ಪ್ರಶ್ನಿಸುತ್ತಾಳೆ. ಇದರಿಂದ ಕೋಪಗೊಂಡ ವ್ಯಕ್ತಿ, ನನ್ನ ಮಕ್ಕಳನ್ನು ಶ್ವಾನಕ್ಕೆ ಹೋಲಿಸಬೇಡ. ಶ್ವಾನಕ್ಕೂ ಮನುಷ್ಯರಿಗೂ ವ್ಯತ್ಯಾಸವಿದೆ. ಮಾತನಾಡುವಾಗ ನಿನ್ನ ನಾಲಿಗೆ ಮೇಲೆ ಹಿಡಿತ ಇರಲಿ ಎಂದು ಕಿಡಿಕಾರುತ್ತಾನೆ.

ಈ ವೇಳೆ ಮಹಿಳೆ ನೀವು ಮಾಡುತ್ತಿರುವುದು ತಪ್ಪು ಎಂದು ಪ್ರತಿವಾದಿಸಿದಾಗ, ವ್ಯಕ್ತಿ ಮತ್ತಷ್ಟು ಆಕ್ರೋಶಗೊಂಡು ಮಹಿಳೆ ಸಮೀಪ ಬಂದು ನೀನು ಮಾಡುತ್ತಿರುವುದು ತಪ್ಪು. ಹೀಗೆ ಮಾತನಾಡುತ್ತಿದ್ದರೆ ಕಪಾಳಕ್ಕೆ ಹೊಡೆಯುತ್ತೇನೆ ಎಂದು ಹೇಳುತ್ತಾನೆ. ಬಳಿಕ ತನ್ನ ವಾಚ್ ಮ್ಯಾನ್‍ಗೆ ನನ್ನ ಕಟ್ಟಡದಲ್ಲಿ ಯಾವುದಾದರೂ ಶ್ವಾನ ಕಂಡರೆ ಅದನ್ನು ಕೋಲಿನಿಂದ ಹೊಡೆದು ಓಡಿಸದಿದ್ದರೆ, ನಿನ್ನನ್ನು ಬಿಡುವುದಿಲ್ಲ ಎಂದು ಬೆದರಿಕೆ ಹಾಕುತ್ತಾನೆ.

 

View this post on Instagram

 

A post shared by Ted The Stoner (@tedthestoner)

ಈ ವೀಡಿಯೋ ವೈರಲ್ ಆಗುತ್ತಿದಂತೆಯೇ ಸೋಶಿಯಲ್ ಮೀಡಿಯಾದಲ್ಲಿ ಸುಮಾರು 980ಸಾವಿರ ವಿವ್ಸ್ ಪಡೆದುಕೊಂಡಿದೆ. ಪ್ರಾಣಿ ಪ್ರಿಯರು ವ್ಯಕ್ತಿ ವಿರುದ್ಧ ಕಮೆಂಟ್ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *