ಬೀದಿನಾಯಿ ಬಾಯಲ್ಲಿ ನವಜಾತ ಶಿಶುವಿನ ಶವ- ಕಂಗಾಲಾದ ರೋಗಿಗಳು

ಭುವನೇಶ್ವರ: ಸರ್ಕಾರಿ ಆಸ್ಪತ್ರೆಯಲ್ಲಿ ಇಟ್ಟಿದ್ದ ನವಜಾತ ಶಿಶುವಿನ ಮೃತ ದೇಹವನ್ನು ಬೀದಿನಾಯಿ ಕಚ್ಚಿಕೊಂಡು ಓಡಿದ ಘಟನೆ ಒಡಿಶಾದ ಭದ್ರಾಕ್ ಜಿಲ್ಲೆಯಲ್ಲಿ ನಡೆದಿದೆ.

ಬೀದಿನಾಯಿಯೊಂದು ಏಕಾಏಕಿ ಆಸ್ಪತ್ರೆ ಒಳಗೆ ನುಗ್ಗಿ ಬಂದು ನವಜಾತ ಶಿಶುವಿನ ಮೃತದೇಹವನ್ನು ಹೊತ್ತುಕೊಂಡು ಹೋಗಿದೆ. ಇದನ್ನು ಗಮನಿಸಿದ ಆಸ್ಪತ್ರೆ ಸಿಬ್ಬಂದಿ ಮತ್ತು ಆಸ್ಪತ್ರೆಯಲ್ಲಿದ್ದ ರೋಗಿಗಳು ಭಯಗೊಂಡಿದ್ದಾರೆ. ನಾಯಿಯನ್ನು ಅಟ್ಟಿಸಿಕೊಂಡು ಹೋದಾಗ ಶವವನ್ನು ಎಸೆದು ಶ್ವಾನ ಓಡಿ ಹೋಗಿದೆ.

ನಾಯಿಯ ಬಾಯಿಯಲ್ಲಿ ಮಗುವನ್ನು ನೋಡಿದಾಗ ಮಗು ಜೀವಂತವಾಗಿದೆ ಎಂದು ಭಾವಿಸಿ ನಾಯಿಯನ್ನು ಓಡಿಸಿಕೊಂಡು ಹೋದೆವು. ಆದರೆ ಅದು ಮಗುವಿನ ಶವವಾಗಿತ್ತು. ಆಸ್ಪತ್ರೆಯ ಆವರಣದ ಒಳಗಡೆಯೇ ಇಂತಹ ಘಟನೆ ನಡೆಯುತ್ತಿದ್ದರೆ ನಾವು ಮಕ್ಕಳನ್ನು ಚಿಕಿತ್ಸೆಗೆ ಕರೆದುಕೊಂಡು ಬರುವುದು ಹೇಗೆ ಎಂದು ಜನಸಾಮಾನ್ಯರು ಹೇಳಿದ್ದಾರೆ.

ನಾಯಿ ಆಸ್ಪತ್ರ ಒಳಗಡೆ ಪ್ರವೇಶ ಮಾಡಿದ್ದು ಹೇಗೆ? ಆಸ್ಪತ್ರೆ ಸಿಬ್ಬಂದಿಯ ನಿರ್ಲಕ್ಷ್ಯ ಈ ಅವಘಡಕ್ಕೆ ಕಾರಣನಾ ಎಂಬುದು ತನಿಖೆಯಿಂದ ತಿಳಿದು ಬರಬೇಕಿದೆ. ಭದ್ರಕ್ ಜಿಲ್ಲಾ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

Comments

Leave a Reply

Your email address will not be published. Required fields are marked *