ಬಿಹಾರದಲ್ಲಿ ಮಹಾಮೈತ್ರಿಗೆ ಜಯ – ಎನ್‌ಡಿಎಗೆ ಸೋಲು

ಪಾಟ್ನಾ: ಬಿಹಾರ ವಿಧಾಸಭಾ ಚುನಾವಣೆಯಲ್ಲಿ ಈ ಬಾರಿ ಯುಪಿಎ ಮಹಾಮೈತ್ರಿ ಅಧಿಕಾರಕ್ಕೆ  ಬರುವ ಸಾಧ್ಯತೆಯಿದೆ ಎಂದು ಸಮೀಕ್ಷೆಗಳು ಹೇಳಿವೆ.

ಒಟ್ಟು 243 ಸ್ಥಾನಗಳಿದ್ದು ಬಹುಮತಕ್ಕೆ 122 ಸ್ಥಾನಗಳ ಅಗತ್ಯವಿದೆ. ಟೈಮ್ಸ್‌ ನೌ ಸಿ ವೋಟರ್‌ ಸಮೀಕ್ಷೆಯಲ್ಲಿ ಮಹಾಮೈತ್ರಿ 120, ನಿತೀಶ್‌ ಕುಮಾರ್‌ ನೇತೃತ್ವದ ಎನ್‌ಡಿಎ 116, ಚಿರಾಗ್‌ ಪಾಸ್ವಾನ್‌ ನೇತೃತ್ವದ ಲೋಕಜನ ಶಕ್ತಿ 1 ಇತರರು 6 ಸ್ಥಾನ ಗೆಲ್ಲಲ್ಲಿದ್ದಾರೆ ಎಂದು ಹೇಳಿದೆ.

ರಿಪಬ್ಲಿಕ್‌ ಟಿವಿ ಜನ್‌ ಕೀ ಬಾತ್‌ ಸಮೀಕ್ಷೆ ಯುಪಿಎಗೆ 118-138 ಸ್ಥಾನ, 91-117 ಸ್ಥಾನ ಆಡಳಿತರೂಢ ಎನ್‌ಡಿಎ ಸರ್ಕಾರಕ್ಕೆ ಸಿಗಲಿದೆ ಎಂದು ತಿಳಿಸಿದೆ.

ಮೂರು ಹಂತದಲ್ಲಿ ನಡೆದ ಚುನಾವಣೆ ಇಂದು ಸಂಜೆ 6 ಗಂಟೆಗೆ ಮುಕ್ತಾಯವಾಗಿದ್ದು, ನ.10 ರಂದು ಫಲಿತಾಂಶ ಪ್ರಕಟವಾಗಲಿದೆ.

2015ರ ಚುನಾವಣೆಯ ಸಂದರ್ಭದಲ್ಲಿ ಜೆಡಿಯು, ಆರ್‌ಜೆಡಿ , ಕಾಂಗ್ರೆಸ್ ಸೇರಿಕೊಂಡು ಮಹಾಘಟಬಂಧನ್ ಮಾಡಿಕೊಂಡಿತ್ತು. ಪರಿಣಾಮ 243 ಕ್ಷೇತ್ರಗಳ ಪೈಕಿ ಆರ್‌ಜೆಡಿ 80, ಜೆಡಿಯು 71, ಬಿಜೆಪಿ 53, ಕಾಂಗ್ರೆಸ್ 27, ಇತರರು 12 ಸ್ಥಾನಗಳಲ್ಲಿ ಜಯಗಳಿಸಿದ್ದರು. ಚುನಾವಣೆಯಲ್ಲಿ ಮಹಾಘಟಬಂಧನ್ ಯಶಸ್ವಿಯಾದ ಕಾರಣ ಎರಡು ಪಕ್ಷಗಳ ಬೆಂಬಲ ಪಡೆದು ನಿತೀಶ್ ಕುಮಾರ್ ಸಿಎಂ ಪಟ್ಟವನ್ನು ಏರಿದ್ದರು. ಆದರೆ ಮಹಾಮೈತ್ರಿಯಲ್ಲಿ ಭಿನ್ನಾಭಿಪ್ರಾಯ ವ್ಯಕ್ತಗಿದ್ದರಿಂದ 2017ರಲ್ಲಿ ಜೆಡಿಯು, ಬಿಜೆಪಿ ಮೈತ್ರಿ ಅಧಿಕಾರಕ್ಕೆ ಬಂದಿತ್ತು.

https://twitter.com/TimesNow/status/1325070719038812160

Comments

Leave a Reply

Your email address will not be published. Required fields are marked *