ಬಿಜೆಪಿ ಸಂಸದರು ಬಾಯಿಗೆ ಬೀಗ ಹಾಕಿಕೊಂಡಿದ್ದಾರೆ: ಡಿಕೆಶಿ

ಬೆಂಗಳೂರು: ರಾಜ್ಯ ಬಿಜೆಪಿ ಸಂಸದರು ಬಾಯಿಗೆ ಬೀಗ ಹಾಕಿಕೊಂಡಿದ್ದಾರೆ.ಅವರಿಗೆ ಬೀಗ ಗಿಫ್ಟ್ ಮಾಡೋಣ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಂದು ಕೇಂದ್ರ ಜಲ ಸಚಿವ ಶೇಖಾವತ್ ಬೆಂಗಳೂರಿಗೆ ಬಂದಿದ್ದಾರೆ. ಭೂಮಿ ಪೂಜೆ ಪಿಕ್ಸ್ ಮಾಡ್ತಾರೆ ಅಂತ ನಂಬಿದ್ದೇವೆ. ಟೆಂಡರ್ ವಿಷಯ ಆಮೇಲೆ ನೋಡೋಣ. ಎಲ್ಲಾ ಕ್ಲಿಯರ್ ಆಗಿದೆ. ಪರಿಸರ ಇಲಾಖೆ ಹಾಗೂ ಮತ್ತೆಲ್ಲಾ ಕ್ಲಿಯರ್ನ್ಸ್ ಆಗಿರಬಹುದು. ಅವರದ್ದೇ ಸರ್ಕಾರ ಇದೆ, ಆದಷ್ಟು ಬೇಗ ಒಳ್ಳೆ ಕೆಲಸ ಮಾಡಲಿ. ಡಬಲ್ ಇಂಜಿನ್ ಸರ್ಕಾರ ಬಂದರೆ ಎಲ್ಲಾ ಕೆಲಸ ಮಾಡುತ್ತೇವೆ ಎಂದು ಹೇಳಿದ್ದರು. ಇದೇನೂ ಸಪರೇಟ್ ಸರ್ಕಾರ ಅಲ್ಲ. ಶೇಖಾವತ್ ಅವರು ಈ ಹಿಂದೆ ಒಳ್ಳೆ ಕೆಲಸ ಮಾಡಿದ್ದಾರೆ. ಬೇರೆ ರಾಜ್ಯಗಳಲ್ಲಿ ಉತ್ತಮ ಕೆಲಸ ಮಾಡಿದ್ದಾರೆ.ನಮ್ಮ ರಾಜ್ಯದಲ್ಲೂ ಮಾಡಲಿ ಎಂದಿದ್ದಾರೆ. ಇದನ್ನೂ ಓದಿ: ಮತ್ತೆ ಒಂದಾದ ದರ್ಶನ್, ಉಮಾಪತಿ

ಕರ್ನಾಟಕದ ಎಂಪಿ ಗಳು ಬಾಯಿಗೆ ಬೀಗ ಹಾಕಿಕೊಂಡಿದ್ದಾರೆ. ಏನೇನು ಟೆಂಡರ್ ಕರೆದಿದ್ದಾರೆ ಎಂದು ಮಾಹಿತಿ ಕೇಳಿದ್ದೀನಿ. ಮಾಹಿತಿ ಪಡೆದು ಅಸೆಂಬ್ಲಿಯಲ್ಲಿ ಮಾತಾನಾಡುತ್ತೇನೆ ಬಿಜೆಪಿ ಸಂಸದರುಗಳ ಬಾಯಿಗೆ ಬೀಗ ಹಾಕಿ ಕೊಂಡಿದ್ದಾರೆ. ಅವರ ಬಾಯಿಗೆ ಒಂದು ಬೀಗ ಗಿಫ್ಟ್ ಮಾಡಬೇಕು ಎಂದು ವ್ಯಂಗ್ಯಮಾಡಿದ್ದಾರೆ. ಇದನ್ನೂ ಓದಿ: ಅವತ್ತು ನಂದಿನಿ, ಇವತ್ತು ಅರುಣಾ ಕುಮಾರಿ – ಮಹಿಳೆಯೇ ಮೋಸಗಾತಿ ಅಂದ್ರು ನಾಗವರ್ಧನ್

ರಾಜ್ಯದಲ್ಲಿ ಜನ ಸಂಖ್ಯೆ ನಿಯಂತ್ರಣ ಕಾಯ್ದೆ ಜಾರಿ ಹೇಳಿಕೆ ವಿಚಾರವಾಗಿ ಸಿಟಿ ರವಿ ನೀಡಿದ್ದ ಹೇಳಿಕೆ ಕುರಿತಾಗಿ ಡಿಕೆಶಿ ವ್ಯಂಗ್ಯ ಮಾಡಿದ್ದಾರೆ. ಸಿ.ಟಿ.ರವಿ ರಾಷ್ಟ್ರೀಯ ನಾಯಕರು ನಾನು ರಾಜ್ಯದ ಕಾಂಗ್ರೆಸ್ ಅಧ್ಯಕ್ಷ ಅವರು ದೊಡ್ಡವರು ಏನ್ ಹೇಳಿದರು ನಡೆಯುತ್ತದೆ. ದೇಶದ ಬಗ್ಗೆ ದೊಡ್ಡದಾಗಿ ಮಾತನಾಡ್ತಾರೆ. ಮೊದಲು ಅಸೆಂಬ್ಲಿಯಲ್ಲಿ ಬಿಲ್ ಮಂಡನೆ ಮಾಡಲಿ ಎಂದಿದ್ದಾರೆ.

Comments

Leave a Reply

Your email address will not be published. Required fields are marked *