ಬಿಜೆಪಿಯವರು ಲಿಂಗಾಯತ ಸಮುದಾಯವನ್ನು ತಮ್ಮ ಆಸ್ತಿ ಅಂತ ತಿಳಿದುಕೊಂಡಿದ್ದಾರೆ: ಡಿಕೆಶಿ

ಕಲಬುರಗಿ: ಬಿಜೆಪಿಯವರು ಲಿಂಗಾಯತ ಸಮುದಾಯವನ್ನು ತಮ್ಮ ಆಸ್ತಿ ಅಂತ ತಿಳಿದುಕೊಂಡಿದ್ದಾರೆ. ಆದರೆ ಕಾಂಗ್ರೆಸ್ಸಿನಲ್ಲಿ ಸಹ ಹಲವು ಜನ ಪ್ರಭಾವಿ ಲಿಂಗಾಯತ ಮುಖಂಡರಿದ್ದಾರೆ ಅಂತ ಕಲಬುರಗಿ ವಿಮಾನ ನಿಲ್ದಾಣದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಸದ್ಯ ಚುನಾವಣೆ ಹತ್ತಿರವಿಲ್ಲದ ಹಿನ್ನೆಲೆಯಲ್ಲಿ ರಾಜಕೀಯ ಸಭೆಗಳಿಗೆ ಅವಕಾಶ ಇಲ್ಲ. ಆದ್ದರಿಂದ ಜನರ ಬಳಿ ಹೋಗಿ ಅವರ ಸಮಸ್ಯೆ ಕೇಳುತ್ತಿದ್ದೇನೆ. ಸರ್ಕಾರದ ಕೋವಿಡ್ ಪರಿಹಾರ ಜನರಿಗೆ ಸಿಕ್ಕಿಲ್ಲ. ಬಹಳ ಜನ ಲಿಂಗಾಯತ ಶಾಸಕರು ಮತ್ತು ಕಾರ್ಯಕರ್ತರು ಕಾಂಗ್ರೆಸ್ ಬರಲು ಸಿದ್ಧರಾಗಿದ್ದಾರೆ. ನಮ್ಮ ಬಳಿ ಸಹ ಎಂ.ಬಿ ಪಾಟೀಲ್, ಈಶ್ವರ್ ಖಂಡ್ರೆ ಸೇರಿದಂತೆ ಅನೇಕರು ಆ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. ಬಿಜೆಪಿಯವರು ಲಿಂಗಾಯತ ಸಮುದಾಯವನ್ನು ತಮ್ಮ ಆಸ್ತಿ ಅಂತ ತಿಳಿದುಕೊಂಡಿದ್ದಾರೆ. ಕಾಂಗ್ರೆಸ್ಸಿನಲ್ಲಿ ಬಹಳಷ್ಟು ಜನ ಲಿಂಗಾಯತರಿದ್ದಾರೆ ಎಂದರು.

ಸಿಎಂ ಸ್ಥಾನಕ್ಕೆ ಕಾಂಗ್ರೆಸ್ಸಿನಲ್ಲಿ ಮ್ಯೂಸಿಕಲ್ ಚೇರ್ ಆಟ ನಡೆದಿದೆ ಅಂತ ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ಹೇಳಿಕೆಗೆ ಡಿಕೆಶಿ ತೀರುಗೇಟು ನೀಡಿದ್ದು, ಸದ್ಯ ಬಿಜೆಪಿಯಲ್ಲಿ ಮ್ಯೂಸಿಕಲ್ ಚೇರ್ ಆಟ ನಡೆದಿದೆ. ಇದನ್ನೂ ಓದಿ: ಜುಲೈ 26ರ ಬಳಿಕ ಪದತ್ಯಾಗ ಮಾಡ್ತಾರಾ ಸಿಎಂ ಯಡಿಯೂಪ್ಪ?

ಇತ್ತ ಕಲಬುರಗಿ ವಿಮಾನ ನಿಲ್ದಾಣದಲ್ಲಿ ಡಿಕೆಶಿ ಆಗಮಿಸುತ್ತಿದ್ದಂತೆ ಬೆಂಬಲಿಗರು ಮುಂದಿನ ಸಿಎಂ ಡಿಕೆ.ಶಿವಕುಮಾರ್ ಅಂತಾ ಜೈಕಾರ ಘೋಷಣೆ ಹಾಕಿದ್ದರು. ಕಾರ್ಯಕರ್ತರ ಘೋಷಣೆಯಿಂದ ಡಿಕೆಶಿ ಮುಗುಳ್ನಗುತ್ತಲೇ ಕಾರಿನತ್ತ ಹೋಗಿ ಕಾರ್ಯಕರ್ತರ ಕಡೆ ಸಂತಸದಲ್ಲಿಯೇ ಕೈಬೀಸಿದರು.

Comments

Leave a Reply

Your email address will not be published. Required fields are marked *