ಬಿಗ್ ಬಾಸ್ ಮನೆಯಲ್ಲಿನ ಸ್ಪರ್ಧಿಗಳ ಮೊದಲ ಸಂಪಾದನೆ ಎಷ್ಟು ಗೊತ್ತಾ?

ಣ ಗಳಿಸುವ ಟಾಸ್ಕ್‍ನ್ನು ಬಿಗ್ ಬಾಸ್ ಸ್ಪರ್ಧಿಗಳು ಆಡಿದ್ದಾರೆ. ಇದೇ ವಿಚಾರವಾಗಿ ಕಿಚ್ಚ ಸುದೀಪ್ ಸ್ಪರ್ಧಿಗಳ ಬಳಿ ಪ್ರಶ್ನೆ ಕೇಳಿದ್ದು, ಈ ವೇಳೆ ಸ್ಪರ್ಧಿಗಳ ಮೊದಲ ಸಂಪಾದನೆ ಕುರಿತ ಸೀಕ್ರೇಟ್ ಹೊರ ಬಿದ್ದಿದೆ.

ಹೌದು ಬಿಗ್ ಬಾಸ್ ಸ್ಪರ್ಧಿಗಳು ತಾವು ಗಳಿಸಿದ ಮೊದಲ ಸಂಪಾದನೆ ಕುರಿತು ಮಾಹಿತಿ ಬಿಚ್ಚಿಟ್ಟಿದ್ದಾರೆ. ಕಿಚ್ಚ ಸುದೀಪ್ ಅವರು ಎಲ್ಲ ಸ್ಪರ್ಧಿಗಳನ್ನು ಈ ಕುರಿತು ಸ್ಪರ್ಧಿಗಳನ್ನು ಪ್ರಶ್ನಿಸಿದ್ದು, ಲೈಫಲ್ಲಿ ನೀವು ಮಾಡಿದ ಹಣದ ಟಾಸ್ಕ್ ಬಗ್ಗೆ ಹೇಳಿ. ಜೀವನದಲ್ಲಿ ಹಣ ಗಳಿಸುವುದು ಒಂದುಕಡೆಯಾದರೆ, ಇದ್ದ ಹಣವನ್ನು ಉಳಿಸುವುದು ಇನ್ನೊಂದು ಟ್ಯಾಲೆಂಟ್, ಎರಡೂ ಕಷ್ಟದ ಕೆಲಸವೇ ಎಂದು ಹೇಳಿದ್ದಾರೆ. ಬಳಿಕ ವೈಷ್ಣವಿ ತಮ್ಮ ಜೀವನದ ಮೊದಲ ಸಂಪಾದನೆ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ.

ನೀವು ಮೊದಲ ದುಡಿದ ಸಂಬಳ ಎಷ್ಟು, ಅದನ್ನು ಸಂಪಾದಿಸಲು ಎಷ್ಟು ಸಮಯ ಆಯ್ತು, ಅದನ್ನು ಹೇಗೆ ಖರ್ಚು ಮಾಡಿದಿರಿ ಎಂದು ಪ್ರಶ್ನಿಸಿದ್ದಾರೆ ಇದಕ್ಕೆ ಉತ್ತರಿಸಿದ ವೈಷ್ಣವಿ, ನಾನು ಕ್ಲಾಸಿಕಲ್ ಡ್ಯಾನ್ಸ್ ಮಾಡುತ್ತಿದ್ದೆ, ನನ್ನ ಫಸ್ಟ್ ಶೋಗೆ 1,500 ರೂ.ಚೆಕ್ ನಿಡಿದ್ದರು. ಅದನ್ನು ನಾನು ತಂದೆಗೆ ನೀಡಿದ್ದೆ. ಆಗ 7ನೇ ತರಗತಿಯಲ್ಲಿದ್ದೆ ಎಂದು ಹೇಳಿದ್ದಾರೆ.

ಬಳಿಕ ಶುಭಾ ಅವರು ನಾನು ಆ್ಯಡ್ ಏಜೆನ್ಸಿಯಲ್ಲಿ ಇಂಟರ್ನ್‍ಶಿಪ್ ಮಾಡಿದೆ, ತಿಂಗಳಿಗೆ 2000 ರೂ. ಸಿಗುತ್ತಿತ್ತು. ಅದು ಪೆಟ್ರೋಲ್‍ಗೇ ಹೊಯಿತು ಎಂದಿದ್ದಾರೆ. ಪ್ರಶಾಂತ್ ಮಾತನಾಡಿ, ಟೆಲಿಕಾಂ ಕಂಪನಿಯಲ್ಲಿ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಸಿಕ್ಕಿತು. 3000 ರೂ. ಸಂಬಳ ಸಿಗುತ್ತಿತ್ತು. 2,500 ರೂ. ಮನೆಗೆ ಕೊಡುತ್ತಿದ್ದೆ. 500 ರೂ.ನಾನು ಇಟ್ಟುಕೊಳ್ಳುತ್ತಿದ್ದೆ ಎಂದಿದ್ದಾರೆ.

ಬಳಿಕ ಶಮಂತ್ ಉತ್ತರಿಸಿ, ನಾನು ಕಾಲೇಜ್ ಆದಮೇಲೆ ಇಂಟರ್‍ಶಿಪ್ ಮಾಡುತ್ತಿದ್ದೆ, ಆಗ ತಿಂಗಳಿಗೆ 3000 ರೂ. ನೀಡಿದ್ದರು. ಅದರಲ್ಲಿ ಮೈಕ್ ಖರೀದಿಸಿದ್ದೆ, ಅದೂ ಇನ್ನು ಹಾಗೇ ಇದೆ ಎಂದಿದ್ದಾರೆ. ಬಳಿಕ ಅರವಿಂದ್ ಮಾತನಾಡಿ, ನನ್ನ ಮೊದಲ ಸಂಬಳ 3,500 ರೂ. ಅದು 3 ತಿಂಗಳಿಗೆ ಒಂದು ಸಲ ನೀಡುತ್ತಿದ್ದರು. 9000ದಲ್ಲಿ ಟಿಡಿಎಸ್ ಕಟ್ ಆಗಿ ಹಣ ಬಂತು ಅದರಲ್ಲಿ, ಅರ್ಧ ದುಡ್ಡಲ್ಲಿ ಬೈಕ್‍ಗೆ ಸ್ಪೇರ್ಸ್ ತೆಗೆದುಕೊಂಡೆ. ಉಳಿದಿದ್ದು, ಚಿಕ್ಕ ಪಾರ್ಟಿ, ಅಮೇಲೆ ಬಟ್ಟೆ ತೆಗೆದುಕೊಂಡೆ ಎಂದಿದ್ದಾರೆ.

ನಾನು 6ನೇ ತರಗತಿ ಇದ್ದಾಗ ಊರಿಗೆ ಟೆಲಿಫಿಲಂ ಶೂಟಿಂಗ್‍ಗೆ ಸುಮಿತ್ರಾ ಭಾವೆ ಹಾಗೂ ಅವರ ತಂಡ ಬಂದಿತ್ತು. ಇದರಲ್ಲಿ 2 ದಿನ ಚಿಕ್ಕ ಹುಡುಗಿಯ ಪಾತ್ರ ಮಾಡಬೇಕಿತ್ತು. ಅದಕ್ಕೆ ನನ್ನ ಕರೆದುಕೊಂಡು ಹೋಗಿದ್ದರು. ಈ ವೇಳೆ 500ರೂ. ನೀಡಿದ್ದರು. ಅದು ನನ್ನ ಮೊದಲ ಸಂಪಾದನೆ. ಇದರಲ್ಲಿ ನನ್ನ ಕಡೆಯಿಂದ ಮನೆಯವರಿಗೆ ಚಿಕನ್ ತರಲು ಹಣ ನಿಡಿದ್ದೆ ಎಂದಿದ್ದಾರೆ. ಹೀಗೆ ಹಲವರು ತಮ್ಮ ಮೊದಲ ಸಂಪಾದನೆ ಕುರಿತು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *