ಬಿಗ್ ಬಾಸ್ ಮನೆಗೆ ಯಾರೆಲ್ಲ ಎಂಟ್ರಿಕೊಟ್ಟಿದ್ದಾರೆ? – ಸ್ಪರ್ಧಿಗಳ ವಿವರ ಇಲ್ಲಿದೆ

ಬೆಂಗಳೂರು: ಕನ್ನಡದ ಬಿಗ್ ಬಾಸ್ 8ನೇ ಆವೃತ್ತಿ ಇಂದಿನಿಂದ ಆರಂಭವಾಗಿದ್ದು. ಒಂಟಿ ಮನೆಗೆ ಒಟ್ಟು 17 ಸ್ಪರ್ಧಿಗಳು ಎಂಟ್ರಿಯಾಗಿದ್ದಾರೆ.

ಕನ್ನಡದ ಬಿಗ್ ಬಾಸ್ 8ನೇ ಆವೃತ್ತಿಗೆ ಹಲವು ಸ್ಟಾರ್ ನಟ, ನಟಿ, ಸೆಲೆಬ್ರಿಟಿಗಳ ಹೆಸರು ಕೇಳಿ ಬರುತ್ತಿತ್ತು. ಸ್ಯಾಂಡಲ್‍ವುಡ್ ಸ್ಟಾರ್ ನಟಿಯರು ಸೆಲೆಟ್ರಿಗಳು ಹಾಗೂ ಇನ್ನಿತರ ಕ್ಷೇತ್ರದಲ್ಲಿ ಗುರುತಿಸಿಕೊಂಡ ಹಲವರ ಹೆಸರು ಕೇಳಿಬರುತ್ತಿತ್ತು. ಆದರೆ ಅಂತಿಮವಾಗಿ ಇದೀಗ ನಟಿ ನಿಧಿ ಸುಬ್ಬಯ್ಯ, ಹಿರಿಯ ನಟ ಶಂಕರ್ ಅಶ್ವಥ್, ಅಗ್ನಿಸಾಕ್ಷಿ ಧಾರಾವಾಹಿ ಖ್ಯಾತಿಯ ವೈಷ್ಣವಿ, ಟಿಕ್‍ಟಾಕ್ ಸ್ಟಾರ್ ಧನುಶ್ರೀ, ಉತ್ತರ ಕನ್ನಡದ ಹಾಡುಗಾರ ವಿಶ್ವನಾಥ್, ಬೈಕ್ ರೈಡರ್ ಅರವಿಂದ್,ಪ್ರವೇಶಿಸಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಮೋಟಿವೇಷನ್ ಮಾತುಗಳನ್ನಾಡುವ ಬ್ರೊ ಗೌಡ, ಬ್ರಹ್ಮಗಂಟು ಧಾರವಾಹಿಯ ನಟಿ ಗೀತಾ ಭಾರತಿ ಭಟ್, ಹಾಸ್ಯ ಕಲಾವಿದ ಮಂಜುಪಾವಗಡ, ಪುಟ್ಟಗೌರಿ ಮದುವೆಯ ಅಜ್ಜಮ್ಮ ಚಂದ್ರಕಲಾ ಮೋಹನ್, ನಟಿ ದಿವ್ಯ, ಯೂಟ್ಯೂಬ್ ನಲ್ಲಿ ಕಾಮಿಡಿ ವಿಡಿಯೋ ಮಾಡುವ ರಘು, ಸ್ಯಾಂಡಲ್ ವುಡ್ ಡ್ರಗ್ಸ್ ಆರೋಪ ಮಾಡಿದ್ದ ಪ್ರಶಾಂತ್ ಸಂಬರ್ಗಿ, ಸೀರಿಯಲ್ ನಟಿ ದಿವ್ಯ ಉರುಡುಗ, ನಟ ರಾಜೀವ್, ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ನಿರ್ಮಿಲಾ ಚನ್ನಪ್ಪ ಎಂಟ್ರಿಕೊಟ್ಟಿದ್ದಾರೆ.

ಕನ್ನಡ ಬಿಗ್‍ಬಾಸ್ ಪ್ರಾರಂಭವಾಗುತ್ತೆ ಎನ್ನುವ ಸುದ್ದಿಯನ್ನು ಕೇಳಿದ ಬಿಗ್‍ಬಾಸ್ ಅಭಿಮಾನಿಗಳು ನಟ್ಟಿಗರು ಸೋಶಿಯಲ್ ಮೀಡಿಯಾದಲ್ಲಿ ಒಂಟಿಮನೆಗೆ ಯಾರು ಹೋಗುತ್ತಾರೆ ಎಂದು ಚರ್ಚೆ ಮಾಡುತ್ತಿದ್ದರು. ಈ ವಿಚಾರಕ್ಕೆ ಇಂದು ತೆರೆಬಿದ್ದಿದ್ದು, ಈ ಮೂಲಕ 100 ದಿನಗಳ ಆಟ ಇಂದಿನಿಂದ ಪ್ರಾರಂಭವಾಗಿದೆ.

Comments

Leave a Reply

Your email address will not be published. Required fields are marked *