ಬಿಗ್ ಬಾಸ್ ಎಲಿಮಿನೇಷನ್ – ಬಿಕ್ಕಿ ಬಿಕ್ಕಿ ಅತ್ತ ಸಂಬರಗಿ

ಬಿಗ್‍ಬಾಸ್ ಮನೆಯಲ್ಲಿ ಒಂದು ಫೋನ್ ಬೂತ್ ಇಡಲಾಗಿದೆ. ಫೋನ್ ಮನೆಗೆ ಬಂದಿರುವುದರಿಂದ ಖುಷಿಪಟ್ಟಿದ್ದ ಮನೆಂದಿಗೆ ಇದೇ ಫೋನು ತಲೆ ನೋವು ತರಿಸಿದೆ. ಫೋನ್ ಕರೆ ಸ್ವೀಕರಿಸಿದ ಸಂಬರಗಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

ಶುಭಾ ಪೂಂಜಾ, ದಿವ್ಯಾ ಉರುಡುಗ, ಪ್ರಶಾಂತ್ ಸಂಬರಗಿ, ಶಮಂತ್ ಬ್ರೋ ಗೌಡ, ಚಕ್ರವರ್ತಿ ಚಂದ್ರಚೂಡ್ ಅವರು ಫೋನ್‍ನಲ್ಲಿ ಮಾತನಾಡಿದ್ದಾರೆ. ಇಷ್ಟು ಜನರಲ್ಲಿ ಒಬ್ಬರಿಗೆ ಈಗ ಬಿಗ್‍ಬಾಸ್ ಪಯಣ ಕೊನೆ ಆಗಲಿದೆ ಎಂದು ಸೂಚನೆ ನೀಡಲಾಗಿದೆ.

ವೀಕೆಂಡ್‍ನಲ್ಲಿ ಎಲಿಮಿನೇಟ್ ಆದವರನ್ನು ಸುದೀಪ್ ಅವರು ವೇದಿಕೆಗೆ ಕರೆಸಿ ಮಾತನಾಡಿಸುತ್ತಾರೆ. ಬಿಗ್‍ಬಾಸ್ ಮನೆಯ ಅನುಭವವನ್ನು ಹಂಚಿಕೊಳ್ಳಲು ಅವಕಾಶ ನೀಡುತ್ತಾರೆ. ಆದರೆ ಇದು ಮಿಡ್‍ವೀಕ್ ಎಲಿಮಿನೇಷನ್ ಆದಕಾರಣ ಸುದೀಪ್ ಅನುಪಸ್ಥಿತಿಯಲ್ಲೇ ಸ್ಪರ್ಧಿಗಳು ಔಟ್ ಆಗಬೇಕಾಗುತ್ತದೆ. ಹಾಗಾಗಿ ಇರಿಸಲಾಗಿರುವ ಟೆಲಿಫೋನ್ ಬೂತ್ ಮೂಲಕವೇ ಸ್ಪರ್ಧಿಗಳ ತಮ್ಮ ಅನುಭವ ಹಂಚಿಕೊಳ್ಳಲು ಬಿಗ್‍ಬಾಸ್ ಅವಕಾಶ ನೀಡಿದ್ದಾರೆ.

ಇನ್ನು ಎರಡು ನಿಮಿಷಗಳಲ್ಲಿ ಮುಖ್ಯದ್ವಾರ ತೆರೆದರೆ ನಿಮ್ಮ ಪ್ರಯಾಣ ಮುಕ್ತಾಯವಾಗಿದೆ ಎಂದು ಅರ್ಥ ಎಂದು ಬಿಗ್‍ಬಾಸ್ ಧ್ವನಿ ಕೇಳಿಸಿದೆ. ಫೋನ್ ಬೂತ್‍ನಲ್ಲಿ ಮಾತನಾಡಿ ಬಂದ ಪ್ರಶಾಂತ್ ಸಂಬರಗಿ ಅವರು ಸಿಕ್ಕಾಪಟ್ಟೆ ಎಮೋಷನಲ್ ಆಗಿದ್ದಾರೆ. ಚಿಕ್ಕ ಮಕ್ಕಳಂತೆ ಅವರು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

 

ಬಿಗ್‍ಬಾಸ್ ಕನ್ನಡ ಸೀಸನ್ 8ರ ಫಿನಾಲೆ ಸಮೀಪಿಸುತ್ತಿದೆ. ಕೊನೇ ದಿನಗಳು ಹತ್ತಿರ ಆಗುತ್ತಿದ್ದಂತೆಯೇ ದೊಡ್ಮನೆಯಲ್ಲಿ ರೋಚಕತೆ ಹೆಚ್ಚಿದೆ. ಬಿಗ್‍ಬಾಸ್ ಎರಡನೇ ಇನ್ನಿಂಗ್ಸ್‌ನಲ್ಲಿ ಸ್ಪರ್ಧಿಗಳಿಗೆ ಹೊಸ ಹೊಸ ಟ್ವಿಸ್ಟ್​ಗಳನ್ನು ನೀಡಿದೆ. ಬಿಗ್‍ಬಾಸ್ ವೀಕ್ಷಕರು ಯಾವ ಸ್ಪರ್ಧಿ ಮನೆಯಿಂದ ಆಚೆ ಹೋಗುತ್ತಾರೆ ಎಂದು ನೋಡಲು ಕಾಯುತ್ತಿದ್ದಾರೆ.

Comments

Leave a Reply

Your email address will not be published. Required fields are marked *