ಬಿಗ್‍ಬಾಸ್ ಸೆಕೆಂಡ್ ಇನ್ನಿಂಗ್ಸ್‌ನಲ್ಲಿ ಮೊದಲು ಹೊರ ಹೋಗುವ ಸ್ಪರ್ಧಿ ಯಾರು ಗೊತ್ತಾ?

ಬಿಗ್‍ಬಾಸ್ ಸೆಕೆಂಡ್ ಇನ್ನಿಂಗ್ಸ್‌ನಲ್ಲಿ 12 ಮಂದಿ ಸ್ಪರ್ಧಿಗಳು ಮನೆಗೆ ಎಂಟ್ರಿಕೊಟ್ಟಿದ್ದಾರೆ. ಮೊದಲವಾರ ಎಲಿಮಿನೇಷನ್ ನಿಂದ ತಪ್ಪಿಸಿಕೊಂಡಿರುವ ಸ್ಪರ್ಧಿಗಳಿಗೆ ಇಂದು ಎಲಿಮಿನೇಷನ್ ಭಯ ಶುರುವಾಗಿದೆ.

ಇಂದು ಬಿಗ್‍ಬಾಸ್ ಮನೆಯ ಜರ್ನಿಯನ್ನು ಮುಗಿಸಿ ಒಬ್ಬ ಸ್ಪರ್ಧಿ ಆಚೆ ಹೋಗಲಿದ್ದಾರೆ. ಯಾರು ಹೋಗಲಿದ್ದಾರೆ ಎನ್ನುವುದರ ಕುರಿತಾಗಿ ಸೋಶಿಯಲ್ ಮೀಡಿಯಾದಲ್ಲಿ ಬಿಸಿ ಬಿಸಿ ಚರ್ಚೆ ಶುರುವಾಗಿದೆ. ಪ್ರಶಾಂತ್ ಸಂಬರಗಿ, ಚಕ್ರವರ್ತಿ ಚಂದ್ರಚೂಡ್, ರಘು ಗೌಡ, ನಿಧಿ ಸುಬ್ಬಯ್ಯ, ಮಂಜು ಪಾವಗಡ, ದಿವ್ಯಾ ಸುರೇಶ್ ಮತ್ತು ಪ್ರಿಯಾಂಕಾ ತಿಮ್ಮೇಶ್ ನಾಮಿನೇಟ್ ಆಗಿದ್ದಾರೆ.

ಮಂಜು ಪಾವಗಡ ಹೋದವಾರ ಕ್ಯಾಪ್ಟನ್ ಆಗಿದ್ದರಿಂದ ಅವರಿಗೆ ಎಲಿಮಿನೇಷನ್ ಅನ್ವಯ ಆಗುವುದಿಲ್ಲ. ಹೀಗಾಗಿ ಈ ವಾರ ಅವರು ಸೇಫ್. ರಘು ಗೌಡ ಹಾಗೂ ದಿವ್ಯಾ ಸುರೇಶ್ ಅತ್ಯುತ್ತಮವಾಗಿ ಆಟವಾಡಿ ಮನೆಯವರ ಮೆಚ್ಚುಗೆ ಪಡೆದಿದ್ದಾರೆ. ಹೀಗಾಗಿ ಅವರು ಹೊರ ಹೋಗೋದು ಬಹುತೇಕ ಅನುಮಾನ ಆದರೂ ಬಿಗ್‍ಬಾಸ್ ವೀಕ್ಷಕರು ಈ ಇಬ್ಬರಲ್ಲಿ ಇಬ್ಬರನ್ನು ಕೈ ಹಿಡಿಯುತ್ತಾರ ಎಂಬುದನ್ನು ಕಾದು ನೋಡಬೇಕಿದೆ.

ನಿಧಿ, ಪ್ರಶಾಂತ್ ಸಂಬರಗಿ ವೀಕ್ಷಕರನ್ನು  ಎಂಟರ್​ಟೇನ್ ಮಾಡುತ್ತಿದ್ದಾರೆ. ಈವಾರ ನಿಧಿ ತಮ್ಮ ನೇರವಾದ ಮಾತಿನಿಂದ, ಜಗಳ, ಮುನಿಸಿನಿಂದ ಹೆಚ್ಚಾಗಿ ಸುದ್ದಿಯಾಗಿದ್ದಾರೆ. ಚಕ್ರವರ್ತಿ ಚಂದ್ರಚೂಡ್, ಸಂಬರಗಿ ಮಧ್ಯೆ ನಡೆದಿರುವ ಜಗಳ ಈ ವಾರದ ಹೈಲೇಟ್ ಆಗಿತ್ತು. ಆದರೆ ಚಕ್ರವರ್ತಿಯ ವರ್ತನೆ ಸಾಕಷ್ಟು ಜನರಿಗೆ ಇಷ್ಟವಾಗಿಲ್ಲ. ಹಲವು ಸ್ಪಧಿಘಳ ಜೊತೆಗೆ ಜಗಳ ಮಾಡಿದ್ದಾರೆ. ಪ್ರಶಾಂತ್ ಗೇಮ್ ಬಿಟ್ಟ್ರೆ ಬೇರೆಯಾವುದೇ ರೀತಿಯಿಂದಲೂ ಸುದ್ದಿಯಾಗಿಲ್ಲ. ಪ್ರಿಯಾಂಕಾ ತಮ್ಮ ಆಟವನ್ನು ಆಡುತ್ತಿದ್ದಾರೆ. ಆದರೆ ಇವರ ಆಟ ಬಿಗ್‍ಬಾಸ್ ವೀಕ್ಷಕರಿಗೆ ಇಷ್ಟವಾಗುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.

ಹಿಂದಿನ ವಾರ ಎಲಿಮಿನೇಷನ್ ಇರಲಿಲ್ಲ. ಈ ವಾರ ಮನೆಯಿಂದ ಒಬ್ಬರು ಹೊರಗೆ ಹೋಗುವುದು ಪಕ್ಕಾ ಆಗಿದೆ. ಯಾರು ಮನೆಯಿಂದ ಆಚೆಹೋಗುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ. ಈ ವಾರ ಕಿಚ್ಚ ಸ್ಪರ್ಧಿಗಳಿಗೆ ಯಾವೆಲ್ಲ ವಿಚಾರವಾಗಿ ಕಿವಿಮಾತು ಹೇಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

Comments

Leave a Reply

Your email address will not be published. Required fields are marked *