ಬಿಗ್‍ಬಾಸ್ ಮನೆಯಲ್ಲಿ ಶೈನ್ ಆಗುತ್ತಿರುವ ಶಮಂತ್!

ಬಿಗ್‍ಬಾಸ್ ಕಾರ್ಯಕ್ರಮಕ್ಕೆ ಬಂದ ಎಲ್ಲ ಸದಸ್ಯರು ಒಂದೊಂದು ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದಾರೆ. ಈ ಎಲ್ಲರ ಮಧ್ಯೆ ಡಿಫರೆಂಟ್ ಆಗಿ ‘ಬಾ ಗುರು’ ಡೈಲಾಗ್ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಫುಲ್ ಫೇಮಸ್ ಆಗಿದ್ದ ಶಮಂತ್ ಕೂಡ ಒಬ್ಬರು.

ಹಲವಾರು ಪ್ರತಿಭೆ ಹೊಂದಿರುವ ‘ಬ್ರೋ ಗೌಡ’ ಶಮಂತ್ ಬಿಗ್‍ಬಾಸ್ ಮನೆಗೆ ಎಂಟ್ರಿ ಕೊಟ್ಟಾಗಲಿಂದಲೂ ಆದ್ಯಾಕೋ ಸೈಲೆಂಟ್ ಆಗಿದ್ದರು. ಹೀಗಾಗಿ ಮನೆಯ ಎಲ್ಲ ಸ್ಪರ್ಧಿಗಳು ಶಮಂತ್ ಮಾತನಾಡುವುದಿಲ್ಲ, ಸೈಲೆಂಟ್, ಬೆರೆಯುವುದು ಕಡಿಮೆ ಹೀಗೆ ಹಲವಾರು ರೀಸನ್ ಹೇಳುತ್ತಿದ್ದರು. ಆದ್ರೆ ಇದೀಗ ಮನೆಯ ಎಲ್ಲಾ ಸದಸ್ಯರ ಆರೋಪಗಳಿಗೆ ಸೆಡ್ಡು ಹೊಡೆಯುವಂತೆ ಶಮಂತ್ ಈ ವಾರ ಬಿಗ್‍ಬಾಸ್ ಮನೆಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ.

ಯೆಸ್, ಇಷ್ಟು ದಿನ ಸೈಲೆಂಟ್ ಆಗಿದ್ದ ಶಮಂತ್ ಇದೀಗ ರೊಚ್ಚಿಗೆದ್ದು ನಾನು ಯಾರಿಗೂ ಕಡಿಮೆ ಇಲ್ಲ ಎಂಬುವಂತೆ ಎಂರ್ಟಟೈನ್ ಮೆಂಟ್ ನೀಡಲು ಸ್ಟಾರ್ಟ್ ಮಾಡಿದ್ದಾರೆ. ನಿನ್ನೆ ಶಮಂತ್ ಬೆಡ್ ರೂಮ್ ಏರಿಯಾದಲ್ಲಿ ಮನೆಯ ಕೆಲವು ಮಂದಿ ಹೇಗೆ ನಡೆಯುತ್ತಾರೆ ಎಂಬುವುದನ್ನು ಅಭಿನಯ ಮಾಡಿ ತೋರಿಸಿದ್ದಾರೆ.

ಮೊದಲಿಗೆ ವೈಷ್ಣವಿ ನಡಿಗೆ ತೋರಿಸಿದ ಶಮಂತ್, ಬಳಿಕ ನಿಧಿ ಕೈ ಕಟ್ಟಿ ನಡೆದುಕೊಂಡು ಹೋಗುವಂತೆ ನಡೆಯುತ್ತಾರೆ. ನಂತರ ಚಕ್ರವರ್ತಿ ಜೇಬಿನಲ್ಲಿ ಕೈ ಹಿಡಿದುಕೊಂಡು ನಡೆದುಕೊಂಡು ಹೋಗುವಂತೆ ಹೋಗುತ್ತಾರೆ. ಇದಾದ ಬಳಿಕ ಅರವಿಂದ್, ಪ್ರಶಾಂತ್ ಸಂಬರ್ಗಿ, ಮಂಜು, ವಿಶ್ವನಾಥ್, ಶುಭ ಪೂಂಜಾ ನಡೆಯುವುದನ್ನು ತೋರಿಸಿದ್ದಾರೆ. ಅಲ್ಲದೇ ಇತ್ತೀಚೆಗೆ ಎಕೋ ವಾಯ್ಸ್‍ನಲ್ಲಿ ಮಾತನಾಡುವ ಮೂಲಕ ಮನೆಯ ಸದಸ್ಯರ ಮನಗೆದ್ದಿದ್ದರು.

ಒಟ್ಟಾರೆ ಎಲೆಮರಿ ಕಾಯಿಯಂತೆ ಪ್ರತಿಭೆಗಳನ್ನು ತಮ್ಮಳೊಗೆ ಅಡವಿಸಿಕೊಂಡಿದ್ದ ಶಮಂತ್ ಇದೀಗ ಗರಿಗೆದರಿದ ನವಿಲಿನಂತೆ ಮಿಂಚುತ್ತಿದ್ದಾರೆ ಎಂದರೆ ತಪ್ಪಾಗಲಾರದು.

Comments

Leave a Reply

Your email address will not be published. Required fields are marked *