ಬಿಗ್‍ಬಾಸ್ ಮನೆಯಲ್ಲಿ ಶುಭಾ, ವೈಷ್ಣವಿ ‘ಮೇಕಪ್’ ಮಾತು

ಬೆಂಗಳೂರು: ಬಿಗ್ ಮನೆಯಲ್ಲಿ ಇರುವ ಸ್ಪರ್ಧಿಗಳು ಮನೆಯಲ್ಲಿ ದಿನಕಳೆಯುತ್ತಿದ್ದಂತೆ ಹೊಸತನವನ್ನು ಕಲಿಯುತ್ತಿದ್ದಾರೆ. ಅದರಲ್ಲೂ ಮೇಕಪ್ ಇಲ್ಲದೆ ಹೊರಬರದೆ ಇರುವಂತಹ ಕೆಲ ಸ್ಪರ್ಧಿಗಳು ಇದೀಗ ಮೇಕಪ್ ಮಾಡುವುದಿಲ್ಲವಂತೆ ಹೀಗೆ ತಮ್ಮ ಮೇಕಪ್ ಅನುಭವಗಳನ್ನು ಶುಭಾ ಮತ್ತು ವೈಷ್ಣವಿ ಜೊತೆಗೆ ಕೂತು ಮಾತನಾಡಿಕೊಂಡಿದ್ದಾರೆ.

ಬಿಗ್‍ಮನೆಯಲ್ಲಿ ಆರಂಭದ ದಿನಗಳಲ್ಲಿ ಮೇಕಪ್ ಬಗ್ಗೆ ಭಾರೀ ಸುದ್ದಿಯಾಗುತ್ತಿತ್ತು. ಆ ಬಳಿಕ ಸ್ವಲ್ಪ ಕಡಿಮೆಯಾಗಿತ್ತು ಇದೀಗ ಮೇಕಪ್ ಕುರಿತು ಮತ್ತೆ ಶುಭಾ ಮತ್ತು ವೈಷ್ಣವಿ ಮಾತೆತ್ತಿದ್ದಾರೆ. ಶುಭಾ ಮೊದಲು ಸ್ನಾನ ಮಾಡಿ ಬಂದ ಮೇಲೆ ಮೇಕಪ್ ಹಾಕದೆ ಇರುವಂತಹ ಒಂದು ವಿಷಯ ನನಗೆ ಸರಿಯಾಗಿ ಅರಿವಾಗಿದ್ದು ಈ ವಾರ. ಬಿಗ್ ಮನೆಯಲ್ಲಿ ಇದೀಗ ಮೇಕಪ್ ಇಲ್ಲದೆ ಇರುವಂತಹ ದಿನಗಳನ್ನು ಕಳೆಯುತ್ತಿದ್ದೇವೆ ಇದು ಖುಷಿ ಕೊಟ್ಟಿದೆ ಎಂದರು. ಇದಕ್ಕೆ ವೈಷ್ಣವಿ, ನಾನು ಹೊರಗಡೆ ಹೋಗಬೇಕಾದರೆ ಮೇಕಪ್ ಇಲ್ಲದೆ ಹೋಗುತ್ತಿರಲಿಲ್ಲ. ಅದು ಬೇಕೇ ಬೇಕು ಎನ್ನುವ ಭಾವನೆ ಇತ್ತು. ಆದರೆ ಇಲ್ಲಿಗೆ ಬಂದ ನಂತರ ಆ ಭಾವನೆ ಬದಲಾಗಿದೆ ಎಂದು ಅಭಿಪ್ರಾಯ ಹಂಚಿಕೊಂಡರು.

ನಂತರ ಮಾತು ಮುಂದುವರಿಸಿದ ಶುಭಾ ಬಿಗ್‍ಬಾಸ್‍ಗೆ ಬಂದ ಮೊದಲ ದಿನ ನನಗೆ ಮೇಕಪ್ ಬೇಕೇ ಬೇಕು ಅನಿಸುತ್ತಿತ್ತು ನಂತರದ ದಿನಗಳಲ್ಲಿ ಇದು ಇಲ್ಲದೆ ಇರಬಹುದು ಎಂಬುದನ್ನು ಅರಿತುಕೊಂಡೆ. ಇಲ್ಲಿ ಕಳೆಯುತ್ತಿರುವ ದಿನಗಳು ತುಂಬಾ ಅನುಭವಗಳನ್ನು ಕೊಡುತ್ತಿದೆ. ನಾವು ಇಲ್ಲಿ ಹಲವು ರೀತಿಯಲ್ಲಿ ಹೊಸತನವನ್ನು ಕಲಿಯುತ್ತಿದ್ದೇವೆ ಎಂದರು.

ಇಲ್ಲಿನ ದಿನಗಳು ತುಂಬಾ ಅನುಭಗಳನ್ನು ಕಲಿಸಿಕೊಡುತ್ತಿದೆ. ಇದು ಬಿಗ್‍ಬಾಸ್ ಮನೆಯಲ್ಲಿ ಬಿಟ್ಟು ಬೇರೆ ಎಲ್ಲೂ ಸಿಗಲ್ಲ. ತುಂಬಾ ಖುಷಿಕೊಡುತ್ತಿದೆ ಎಂದು ವೈಷ್ಣವಿ ಮತ್ತು ಶುಭಾ ಒಬ್ಬರಿಗೊಬ್ಬರು ಮಾತು ಹಂಚಿಕೊಂಡರು.

ಪ್ರತಿ ಸ್ಪರ್ಧಿಗಳು ಕೂಡ ಬಿಗ್ ಮನೆಗೆ ಬಂದ ನಂತರ ಹೊಸತನವನ್ನು ಕಲಿಯುತ್ತಿದ್ದಾರೆ. ಇತರೊಂದಿಗೆ ಬೆರೆಯುತ್ತಿದ್ದಾರೆ ಇದೆಲ್ಲದರೊಂದಿಗೆ ಜಗಳ, ಹರಟೆ, ಪ್ರೀತಿ ವಾತ್ಸಲ್ಯ ಎಲ್ಲವೂ ಜೊತೆಯಾಗಿದೆ. ಇದನ್ನು ನೋಡಿ ಬಿಗ್‍ಬಾಸ್ ಅಭಿಮಾನಿಗಳು ಖುಷಿ ಪಡುತ್ತಿದ್ದಾರೆ.

Comments

Leave a Reply

Your email address will not be published. Required fields are marked *