ಬಿಗ್‍ಬಾಸ್ ಮನೆಯಲ್ಲಿ ಬಿಕ್ಕಿ ಬಿಕ್ಕಿ ಅತ್ತ ದಿವ್ಯಾ ಸುರೇಶ್

ನೆಯ ಸದಸ್ಯರಿಗೆ ಗುಟ್ಟೊಂದು ಹೇಳುವ ಟಾಸ್ಕ್ ಮೂಲಕವಾಗಿ ಇಲ್ಲಿಯವರೆಗೂ ಯಾರಿಗೂ ಹೇಳದ ಗುಟ್ಟನ್ನು ಹೇಳಬೇಕಿತ್ತು. ಈ ವೇಳೆ ಸ್ಪರ್ಧಿಗಳು ತಮ್ಮ ಹಿಂದೆ ಇರುವ ನೋವಿನ ಕಥೆಯನ್ನು ಹೇಳಿಕೊಂಡಿದ್ದಾರೆ.

ಮನೆಯವರ ನೋವಿನ ಕಥೆ, ಲವ್, ಕಾಮಿಡಿ, ನಕಲು ಹೊಡೆದಿರುವ ಸ್ಟೋರಿಗಳನ್ನು ಹೇಳಿಕೊಂಡಿದ್ದಾರೆ. ಪ್ರಶಾಂತ್ ಸಂಬರ್ಗಿ ನಕಲು ಮಾಡಿ ಡಿಬಾರ್ ಆದ ಕಥೆ, ಚಂದ್ರಕಲಾ ಚಿಕ್ಕ ವಯಸ್ಸಿನಲ್ಲಿ ತಂದೆಯಿಂದಲೆ ಉಂಟಾದ ಕಿರುಕುಳ, ವೈಷ್ಣವಿ ಲವ್ ಸ್ಟೋರಿ, ಕೋಳಿ ಕದ್ದು ತಿಂದ ಕಥೆ ಹೇಳಿದ್ದಾರೆ. ಈ ವೇಳೆ ದಿವ್ಯಾ ಸುರೇಶ್ ಅವರು ಜೀವನದ ಕಥೆಯನ್ನು ಹೇಳಿದ್ದಾರೆ.

ನಾನು ಸ್ಟ್ರಾಂಗ್ ಆಗಿರುವ ಹಿಂದೆ ಒಂದು ಕಥೆ ಇದೆ. ನಾನು 2ನೇ ತರಗತಿಯಲ್ಲಿ ಇದ್ದೆ. ನಾನು ನಮ್ಮಣ್ಣ ಆಟವಾಡುತ್ತಿದ್ದೆವು. ಯಾವತ್ತೂ ಊಟವನ್ನು ಹಾಕಿ ಕೊಡದ ತಂದೆ ಒಂದು ದಿನ ನನಗೆ, ಅಣ್ಣ ಮತ್ತು ನಮ್ಮ ತಂದೆ ಮೂವರು ಕುಳಿತು ಊಟ ಮಾಡಿದೆವು. ಊಟ ಮಾಡಿದಾಗ ಎಲ್ಲರೂ ವಾಮಿಟ್ ಮಾಡಲು ಪ್ರಾರಂಭಿಸಿದೆವು. ಆಗ ನಮ್ಮ ತಂದೆ ಊಟದಲ್ಲಿ ವಿಷ ಬೇರಿಸಿದ್ದಾರೆ ಎಂದು ತಿಳಿಯಿತ್ತು. ಈ ವೇಳೆ ಅಮ್ಮ ಮನೆಯಲ್ಲಿ ಇರಲಿಲ್ಲ. ನಂತರ ನಮ್ಮನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು. ಹೇಗೋ ಅಂದು ಪ್ರಾಣಾಪಾಯದಿಂದ ಪಾರಾಗಿ ಬಂದೆವು. 2ನೇ ಕ್ಲಾಸ್‍ನಲ್ಲಿಯೇ ನಾನು ಸಾವುಗೆದ್ದು ಬಂದಿದ್ದೇನೆ. ಹೀಗಾಗಿ ನಾನು ಸ್ಟ್ರಾಂಗ್ ಆಗಿ ಇದ್ದೇನೆ ಎಂದು ಹೇಳುತ್ತಾ ಕಣ್ಣೀರು ಹಾಕಿದ್ದಾರೆ.

ಎಲ್ಲರ ಹಿಂದೆ ಒಂದು ನೋವಿನ ಕಥೆ ಇದೆ. ಎಲ್ಲರೂ ಕಷ್ಟವನ್ನು ದಾಟಿಕೊಂಡು ಬಂದಿದ್ದಾರೆ. ಹುಟ್ಟುತ್ತಲೇ ಯಾರಿಗೂ ಸುಖದ ಜೀವನ ಸಿಗುವುದಿಲ್ಲ, ಕಷ್ಟ, ಸುಖಃ, ದುಖಃಗಳನ್ನು ನಾವು ಎದುರಿಸಿ ಧೈರ್ಯವಾಗಿ ದಾಟಿಕೊಂಡು ಬಂದಾಗಲೇ ನಮಗೆ ಒಳ್ಳಯೆ ಜೀವನ ಸಿಗುವುದು ಎಂದು ಮನೆಯ ಸ್ಪರ್ಧಿಗಳ ಕಥೆ ಕೇಳಿದ ಮೇಲೆ ಅನ್ನಿಸದೆ ಇರುವುದಿಲ್ಲ. ಎಲ್ಲರ ಹಿಂದಿನ ಕರುಣಾಜನಕ ಕಥೆಯನ್ನು ಎಳೆಎಳೆಯಾಗಿ ಬಿಚ್ಚುತ್ತಿರುವವರೇ ಬಿಗ್‍ಬಾಸ್.

Comments

Leave a Reply

Your email address will not be published. Required fields are marked *