ಬಿಗ್‍ಬಾಸ್ ಕಾರ್ಯಕ್ರಮ ಆರಂಭವಾದಾಗಿನಿಂದಲೂ ದೊಡ್ಮನೆಯಲ್ಲಿ ಹಳ್ಳಿಹೈದ ಮಂಜುದೇ ಹವಾ. ದೊಡ್ಮನೆಗೆ ಬಂದ ಕೆಲವೇ ದಿನಗಳಲ್ಲಿ ದಿವ್ಯಾ ಸುರೇಶ್‍ರನ್ನು ಪಟಾಯಿಸಿದ್ದ ಮಂಜು, ಮನೆಮಂದಿ ಮನಸ್ಸನ್ನು ಗೆದ್ದಿದ್ದಾರೆ. ಎಲ್ಲೆ ಹೋದರೂ, ಬಂದರೂ ಮಂಜು ಜಪ ಮಾಡುವ ದೊಡ್ಮನೆ ಸದಸ್ಯರು, ನಿಜಕ್ಕೂ ಮಂಜುರನ್ನು ಎಷ್ಟು ಇಷ್ಟಪಡುತ್ತಾರೆ ಎಂದು ಕಿಚ್ಚ ತುಲಾಭಾರ ಕಾರ್ಯಕ್ರಮ ನಡೆಸಿದ್ದಾರೆ.

ಅದರ ಅನುಸಾರ ತಕ್ಕಡಿಯ ಒಂದು ಭಾಗದಲ್ಲಿ ಮಂಜು ಕುಳಿತುಕೊಳ್ಳುತ್ತಾರೆ. ಇನ್ನೊಂದು ಭಾಗದಲ್ಲಿ ಮನೆಯ ಸದಸ್ಯರು ಬಹಳ ಇಷ್ಟಪಡುವಂತಹ ವಸ್ತುಗಳನ್ನು ತಂದು ಅದರೊಳಗೆ ಇಡಬೇಕು. ಅದು ವಸ್ತುವಾದರೂ ಸರಿ, ವ್ಯಕ್ತಿಯಾದರೂ ಸರಿ ಮತ್ತೆ ನಿಮಗೆ ವಾಪಸ್ ಸಿಗಲ್ಲ ಅಂತ ಸುದೀಪ್ ಸೂಚಿಸುತ್ತಾರೆ.

ಅದರಂತೆ ರಾಜೀವ್, ಅರವಿಂದ್ ತಾವು ಇಷ್ಟಪಡುವಂತಹ ಡಂಬಲ್ಸ್ ಹಾಕುತ್ತಾರೆ. ನಿಧಿ ಬೆಲ್ಟ್, ವೈಷ್ಣವಿ ಯೋಗ ಮ್ಯಾಟ್, ವಿಶ್ವನಾಥ್ ಶೂ, ರಘು ಪಫ್ಯೂಮ್, ಶುಭ ಪೂಂಜಾ ಬಾಯಿಲ್ಡ್ ರೈಸ್, ಪ್ರಶಾಂತ್ ಸಂಬರ್ಗಿ ಕಾಫಿ ಕಪ್, ದಿವ್ಯಾ ಉರುಡುಗ ಜಾಕೆಟ್ ಹಾಗೂ ಶೂ, ಗೀತಾ ಡ್ರಸ್, ಶಂಕರ್ ಅಶ್ವತ್ ಕರ್ಪೂರ, ಶಮಂತ್ ಭೀಮ್ ಬ್ಯಾಗ್, ಚಂದ್ರಕಲಾ ಟೀ ಕಪ್ ಇಡುತ್ತಾರೆ. ಆದರೆ ಎಲ್ಲರ ಮಧ್ಯೆ ದಿವ್ಯಾ ಸುರೇಶ್ ಮಾತ್ರ ನಾನು ಶಮಂತ್‍ನನ್ನು ಆ ಸ್ಥಳದಲ್ಲಿ ಕೂರಿಸಲು ಇಷ್ಟಪಡುತ್ತೇನೆ. ನನಗೆ ಅವರೆಂದರೆ ಇಷ್ಟವಿಲ್ಲ ಎಂದು ನೇರವಾಗಿ ನುಡಿಯುತ್ತಾರೆ.

ಬಳಿಕ ನೀವು ಹಾಕಿರುವ ವಸ್ತುಗಳನ್ನು ಮತ್ತೆ ಉಪಯೋಗಿಸುವಂತಿಲ್ಲ ಎಂದು ಕಿಚ್ಚ ಸೂಚಿಸಿದಾಗ, ಅರವಿಂದ್ ನನಗೆ ಡಂಬಲ್ಸ್ ಎಂದರೆ ಬಹಳ ಇಷ್ಟ. ಒಂದು ದಿನ ಡಂಬಲ್ಸ್ ಇಲ್ಲದೇ ವರ್ಕ್ ಔಟ್ ಮಾಡದಿರಲು ಸಾಧ್ಯವಿಲ್ಲ. ಹಾಗಾಗಿ ಅದನ್ನು ಹಿಂಪಡೆಯುತ್ತೇನೆ ಎಂದು ಹೇಳುತ್ತಾರೆ. ಶುಭ ಪೂಂಜಾ ಕೂಡ ನನಗೆ ಬಾಯಿಲ್ಡ್ ರೈಸ್ ಅಂದರೆ ಇಷ್ಟ ಹಾಗಾಗಿ ಅದನ್ನು ಹಿಂಪಡೆದು ಅದರ ಬದಲಿಗೆ ಶೂ ಇಡುತ್ತೇನೆ ಎಂದು ಹೇಳುತ್ತಾರೆ.

ಹೀಗೆ ಮನೆಯ ಸದಸ್ಯರು ಮಂಜುರನ್ನು ಎಷ್ಟು ಪ್ರೀತಿಸುತ್ತಾರೆ ಎಂಬುವುದಕ್ಕೆ ತಾವು ಇಷ್ಟಪಡುವಂತಹ ವಸ್ತುಗಳನ್ನು ತಕ್ಕಡಿಯಲ್ಲಿ ಇಡುವ ಮೂಲಕ ತೋರಿಸುತ್ತಾರೆ. ಕೊನೆಗೆ ಸುದೀಪ್ ಅವರು ಮಂಜು ಅವರನ್ನು ತಕ್ಕಡಿಯಿಂದ ನಿದಾನವಾಗಿ ಇಳಿಯುವಂತೆ ಹೇಳಿದ್ದು, ಎಲ್ಲರೂ ಒಟ್ಟಾಗಿ ಕುಳಿತುಕೊಳ್ಳುತ್ತಾರೆ.

Leave a Reply