ಬಿಗ್‍ಬಾಸ್ ಜರ್ನಿ ನೆನಪಿಸಿಕೊಂಡು ಬಿಕ್ಕಿ ಬಿಕ್ಕಿ ಅತ್ತರು

ಬಿಗ್‍ಬಾಸ್ ಜರ್ನಿಯನ್ನು ಸ್ಪರ್ಧಿಗಳೆಲ್ಲರು ಒಟ್ಟಾಗಿ ಮುಗಿಸುತ್ತಿದ್ದಾರೆ. ಇದೇ ಮೊದಲ ಬಾರಿ ಇಂತಹ ಒಂದು ಸಂದರ್ಭವನ್ನು ಬಿಗ್‍ಬಾಸ್ ಎದುರಿಸುತ್ತಿರುವುದು. ಬಿಗ್‍ಬಾಸ್ ಮನೆಯ ಜರ್ನಿ ವೀಡಿಯೋವನ್ನು ನೋಡಿ ಸ್ಪರ್ಧಿಗಳು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

ಬಿಗ್‍ಬಾಸ್ ಮನೆ ಖಾಲಿ ಖಾಲಿಯಾಗುತ್ತಿದೆ. ಒಬ್ಬೊಬ್ಬರಾಗಿಯೇ ಒಂದೊಂದು ವಾರ ಹೊರಗೆ ಬರುತ್ತಿದ್ದ ಆಟಕ್ಕೆ ತೆರೆ ಬಿದ್ದು ಎಲ್ಲಾ ಸ್ಪರ್ಧಿಗಳು ಒಟ್ಟಾಗಿ ಹೊರಗೆ ಬರುತ್ತಿದ್ದಾರೆ. ಸ್ಪರ್ಧಿಗಳ 73ನೇ ದಿನದ ಜರ್ನಿಯ ವೀಡಿಯೋವನ್ನು ನೋಡಿ ಸ್ಪರ್ಧಿಗಳ ಭಾವನೆ ತೀವ್ರತೆ ಹೆಚ್ಚಾಗಿದೆ. ಅವರ ಜೀವನದ ಕೆಲವು ಕಥೆ, ನೋವು, ಅವರ ಪ್ಯಾಮಿಲಿ ನೆನೆಪಿಸಕೊಂಡು ಕಣ್ಣೀರು ಹಾಕಿರುವುದನ್ನು ರಿವೈಂಡ್ ಮಾಡಿ ನೋಡಿದಾಗ ಮತ್ತೊಮ್ಮೆ ಅವರಿಗೆ ತಿಳಿಯದೆ ಕಣ್ಣೀರು ಜಾರಿದೆ.

ನೋವನ್ನು ಹೇಳಿಕೊಂಡ ಆ ಕ್ಷಣ, ಪ್ರೀತಿಯಂದ ಕಣ್ಣೀರು ಹಾಕಿದ ಆ ನೋವಿನಲ್ಲಿ ಇರುವ ಪ್ರೀತಿಯ ನೆನಪು, ತಂದೆ-ಮಗಳ ಸಂಬಂಧ, ಮನೆಯವರನ್ನು ನೆನೆಪಿಸಿಕೊಂಡು ಹಾಕಿದ ಆ ಕಣ್ಣೀರು, ಹೊಸದಾಗಿ ಸಿಕ್ಕ ಸ್ನೇಹ, ಆ ಕ್ಷಣಕ್ಕೆ ಆಗಿರುವ ನೋವು, ಜೀವನದಲ್ಲಿ ನಡೆದು ಬಂದಿರುವ ಹಾದಿ ಹೇಳಿಕೊಂಡು ದುಃಖಿಸಿದ ಆ ನೆನೆಪು, ಮನೆಯಲ್ಲಿ ಕಳೆದ ಕೆಲವು ಕ್ಷಣಗಳನ್ನು ನೋಡುತ್ತಾ ಸ್ಪರ್ಧಿಗಳು ಮಾತ್ರ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

ವೀಡಿಯೋದಲ್ಲಿ ಈ ಎಲ್ಲಾ ಕ್ಷಣಗಳನ್ನು ನೋಡುತ್ತಾ ಸ್ಪರ್ಧಿಗಳು ಕಣ್ಣೀರು ಹಾಕಿದ್ದಾರೆ. ಕಣ್ಮಣಿ ಏನಾದರೂ ಹೇಳುವುದು ಇದೆಯಾ ಎಂದು ಪ್ರಶ್ನಿಸಿದಾಗ ಸ್ಪರ್ಧಿಗಳು ಮೌನಕ್ಕೆ ಶರಣಾಗಿದ್ದಾರೆ. ನಾವು ಎಷ್ಟೇ ಜಗಳ ಮಾಡಿದರು ನಾವೆಲ್ಲ ತುಂಬಾ ಚೆನ್ನಾಗಿದ್ದೇವೆ. ನಾನು ಅಳುವುದೇ ಇಲ್ಲ ಎಂದು ಅಂದುಕೊಂಡಿದ್ದೆ. ಆದರೆ ಬಿಗ್‍ಬಾಸ್ ಮನೆಯಲ್ಲಿ ಕಣ್ಣೀರು ಹಾಕಿದ್ದೇವೆ. ಬಿಗ್‍ಬಾಸ್ ಮನೆಯ ಸ್ಪೇಷಾಲಿಟಿನೆ ಅದು ಸಂಬಂಧಗಳನ್ನು ಇನ್ನಷ್ಟು ಗಟ್ಟಿ ಮಾಡುತ್ತದೆ ಎಂದು ಹೇಳುತ್ತಾ ಸ್ಪರ್ಧಿಗಳು ಬೇಸರವನ್ನು ವ್ಯಕ್ತಪಡಿಸಿದ್ದಾರೆ.

ಸುದೀಪ್ ಅವರು ವಾರಾಂತ್ಯದ ಕಾರ್ಯಕ್ರಮದಲ್ಲಿ ಬರದಿರುವುದು ನೋಡಿ ನಮಗೆ ಏನೋ ಸರಿ ಇಲ್ಲ ಎಂದು ನಮಗೆ ಅನ್ನಿಸಿತ್ತು. ಅದೇ ನಮಗೆ ನಿಜವಾಗಿದೆ ಎಂದು ಹೇಳುತ್ತಾ ಸ್ಪರ್ಧಿಗಳು ಒಬ್ಬರನ್ನೊಬ್ಬರು ತಬ್ಬಿಕೊಂಡು ಸಮಾಧಾನ ಮಾಡುತ್ತಾ ಕಣ್ಣಿರು ಹಾಕಿದ್ದಾರೆ.

Comments

Leave a Reply

Your email address will not be published. Required fields are marked *