ಬಿಗ್‍ಬಾಸ್‍ನೂ ಬಿಟ್ಟಿಲ್ಲ ಶುಭಾ ಸಿಟ್ಟು

ಬಿಗ್‍ಬಾಸ್ ಮನೆಯ ಸ್ಪರ್ಧಿಗಳು ಮನೆಯಲ್ಲಿ ಜಗಳ, ಮುನಿಸು ಮಾಡಿಕೊಂಡು ಮಾತು ಬಿಟ್ಟು ಮತ್ತೆ ಮಾತನಾಡುವುದನ್ನು ನಾವು ಬಿಗ್ ಮನೆಯ ನೊಡಿದ್ದೇವೆ. ಆದರೆ ಬಿಗ್‍ಬಾಸ್ ಮನೆಯ ಸ್ಪರ್ಧಿಯೊಬ್ಬರು ಬಿಗ್‍ಬಾಸ್ ಜೊತೆಗೆ ಮಾತುಬಿಟ್ಟಿದ್ದಾರೆ.

ಬಿಗ್ ಮನೆಯಲ್ಲಿ ನಡೆಯುವ ಡ್ರಾಮಾಗಳಿಗೇನು ಕಮ್ಮಿ ಇಲ್ಲ. ಆದರೆ ಈ ಸ್ಪರ್ಧಿ ಬಿಗ್‍ಬಾಸ್ ಜೊತೆಗೆ ಮಾಡುತ್ತಿರುವ ಡ್ರಾಮಾ ಬಿಗ್‍ಬಾಸ್‍ಗೂ ನಗು ತರಿಸುವಂತಿದೆ. ಬಿಗ್ ಮನೆಯ ಸ್ಪರ್ಧಿ ಶುಭಾ ಆಗಾಗ ಚಿಕ್ಕ ಮಕ್ಕಳಂತೆ ಮಾಡುತ್ತಾ ಇರುವುದನ್ನು ನಾವು ಈ ಹಿಂದೆಯು ನೋಡಿದ್ದೇವೆ. ಆದರೆ ಶುಭಾ ಬಿಗ್‍ಬಾಸ್ ಜೊತೆಗೆ ಮಾತು ಬಿಟ್ಟಿದ್ದಾರೆ.

ಶುಭಾ ಪೂಂಜಾ ಯಾವುದೋ ಕಾರಣಕ್ಕೆ ಬಿಗ್‍ಬಾಸ್ ಜೊತೆಗೆ ಮಾತುಬಿಟ್ಟಿದ್ದಾರೆ. ನಾನು ಬಿಗ್‍ಬಾಸ್ ನಿಮ್ಮ ಜೊತೆಗೆ ಮಾತನಾಡುವುದಿಲ್ಲ ಆನೆ ಮೇಲೆ .. ಒಂಟೆ ಮೇಲೆ ಟೂ.. ಟೂ ಎಂದು ಬಿಗ್‍ಬಾಸ್‍ಗೆ ಹೇಳಿದ್ದಾರೆ. ನನಗೆ ನಿಮ್ಮ ಮೇಲೆ ಸೀರಿಯಸ್ ಸಿಟ್ಟು ಇದೆ ಬಿಗ್‍ಬಾಸ್ ಎಂದು ಶುಭಾ ಹೇಳಿದ್ದಾರೆ.

 ಬಿಗ್‍ಬಾಸ್‍ನು ಬಿಡಲ್ಲ ಶುಭಾ ಎಂದು ರಾಜೀವ್ ಹೇಳಿದ್ದಾರೆ. ಚಕ್ರವರ್ತಿ ಬಾ ಶುಭಾ ಬಿಗ್‍ಬಾಸ್ ಜೊತೆಗೆ ಮಾತನಾಡೋಣ ಎಂದು ಕರೆಯುತ್ತಾರೆ. ಆಗ ಶುಭಾ ನಾನು ಅವರೊಂದಿಗೆ ಮಾತು ಬಿಟ್ಟಿದ್ದೇನೆ. ನಾನು ಮಾತನಾಡಲ್ಲ ಎಂದು ಹೇಳಿದ್ದಾರೆ. ಆಗ ಬಿಗ್ ಬಾಸ್ ಶುಭಾ ನಿಮ್ಮ ಮೈಕ್ ಸರಿಯಾಗಿ ಹಾಕಿಕೊಳ್ಳಿ ಎಂದು ಹೇಳಿದ್ದಾರೆ. ಶುಭಾ ಸಿಟ್ಟಿನಿಂದ ನಾನು ನಿಮ್ಮ ಜೊತೆಗೆ ಮಾತನಾಡಲ್ಲ, ನೀವು ಮಾತನಾಡಬೇಡಿ ಎಂದು ಮುದ್ದು ಮುದ್ದಾಗಿ ಹೇಳಿದ್ದಾರೆ.

ಬಿಗ್‍ಬಾಸ್ ಮನೆಯಲ್ಲಿ ಶುಭಾ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಾಗುತ್ತಲೇ ಇರುತ್ತಾರೆ. ಮಳೆ ಬಂದಿದೆ ನಾನು ನೆನಯಬೇಕು ಎಂದು ಬಿಗ್‍ಬಾಸ್ ಬಳಿ ಹಠ ಮಾಡಿ ಕಣ್ಣೀರು ಹಾಕಿದ್ದರು. ಇದೀಗ ಬಿಗ್‍ಬಾಸ್ ಜೊತೆಗೆ ಮಾತುಬಿಟ್ಟಿದ್ದಾರೆ. ಯಾವ ಕಾರಣಕ್ಕಾಗಿ ಬಿಗ್‍ಬಾಸ್ ಜೊತೆಗೆ ಮಾತುಬಿಟ್ಟಿದ್ದಾರೆ ಎನ್ನುವುದು ಇಂದಿನ ಸಂಚಿಕೆಯಲ್ಲಿ ತಿಳಿಯಬೇಕಿದೆ.

Comments

Leave a Reply

Your email address will not be published. Required fields are marked *