ಬಿಎಸ್‍ವೈ, ವಿಜಯೇಂದ್ರಗೆ ಹೈಕೋರ್ಟ್ ನೋಟಿಸ್

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹಾಗೂ ಅವರ ಕುಟುಂಬದ ವಿರುದ್ಧ ಭ್ರಷ್ಟಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ 7 ಜನರಿಗೆ ನೋಟಿಸ್ ನೀಡಿದೆ. ಪ್ರಾಸಿಕ್ಯೂಷನ್ ಗೆ ರಾಜ್ಯಪಾಲರ ಪೂರ್ವಾನುಮತಿ ಸಿಗದಿದ್ದಕ್ಕೆ ಕೇಸ್ ವಜಾ ಹಿನ್ನೆಲೆಯಲ್ಲಿ ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿದ್ದ ಅರ್ಜಿ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ ಇಂದು ನಡೆಸಿತು.

ವಿಚಾರಣೆ ಕೈಗೆತ್ತಿಕೊಂಡ ಏಕಸದಸ್ಯ ಪೀಠ ಕೆಲವೊಂದು ಮಾಹಿತಿಗಳನ್ನು ಆಲಿಸಿದ ಬಳಿಕ ಬಿಎಸ್ ಯಡಿಯೂರಪ್ಪ ಸೇರಿ ಪ್ರತಿವಾದಿಗಳಿಗೆ ಹೈಕೋರ್ಟ್ ನೋಟಿಸ್ ನೀಡಿತು. ಬಿಎಸ್ ಯಡಿಯೂರಪ್ಪ, ಬಿ.ವೈ.ವಿಜಯೇಂದ್ರ, ಶಶಿಧರ ಮರಡಿ ಸಂಜಯ್ ಶ್ರೀ, ಚಂದ್ರಕಾಂತ ರಾಮಲಿಂಗಮ್, ಎಸ್.ಟಿ.ಸೋಮಶೇಖರ್, ಡಾ.ಜಿ.ಸಿ.ಪ್ರಕಾಶ್, ಕೆ.ರವಿ, ವಿರುಪಾಕ್ಷಪ್ಪ ಯಮಕನಮರಡಿಗೆ ನೋಟಿಸ್ ನೀಡಲಾಗಿದೆ. ಇದನ್ನೂ ಓದಿ: ಸಿಎಂ, ವಿಜಯೇಂದ್ರ, 7 ಮಂದಿ ಆಪ್ತರ ವಿರುದ್ಧ ದೂರು

ಇಂದು ವಾದ ಮಂಡಿಸುವಾಗ ಯಡಿಯೂರಪ್ಪ ಅವರು ಈಗ ಸಿಎಂ ಸ್ಥಾನದಲ್ಲಿ ಇಲ್ಲ. ಹೀಗಾಗಿ ಪೂರ್ವಾನುಮತಿ ಅಗತ್ಯವಿಲ್ಲವೆಂದು ಟಿ.ಜೆ. ಅಬ್ರಹಾಂ ಪರ ವಕೀಲರು ವಾದ ಮಂಡಿಸಿದ್ದರು. ಪೂರ್ವಾನುಮತಿ ಕುರಿತಾಗಿ ವಾದ ಆಲಿಸಬೇಕಾದ ಅಗತ್ಯ ಹಿನ್ನೆಲೆಯಲ್ಲಿ ಈಗ ನೋಟಿಸ್ ಜಾರಿ ಮಾಡಿದೆ.

Comments

Leave a Reply

Your email address will not be published. Required fields are marked *