ಬಾಯ್‍ಫ್ರೆಂಡ್ ಜೊತೆಗೆ ಲಾಕ್ ಆದ ಶ್ರುತಿ ಹಾಸನ್

ಚೆನ್ನೈ: ಕಮಲ್ ಹಾಸನ್ ಪುತ್ರಿ ಶ್ರುತಿ ಹಾಸನ್ ತಮ್ಮ ಬಾಯ್‍ಫ್ರೆಂಡ್ ಶಂತನು ಹಜಾರಿಕಾ ಅವರ ಜೊತೆಗೆ ಕೊರೊನಾ ಲಾಕ್‍ಡೌನ್ ಸಮಯದಲ್ಲಿ ಒಟ್ಟಿಗೆ ಸಮಯ ಕಳೆಯುವ ಮೂಲಕವಾಗಿ ಸುದ್ದಿಯಾಗಿದ್ದಾರೆ.

ಶ್ರುತಿ ಹಾಸನ್ ಲಾಕ್‍ಡೌನ್ ಸಮಯದಲ್ಲಿ ಒಂದಿಷ್ಟು ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಈ ಬಾರಿ ಅವರೊಬ್ಬರೇ ಇಲ್ಲ. ಶಂತನು ಸಹ ಇದ್ದಾರೆ. ಕಳೆದ ವರ್ಷ ಲಾಕ್‍ಡೌನ್ ಸಮಯದಲ್ಲಿ ಮನೆಯಲ್ಲಿ ಒಂಟಿಯಾಗಿದ್ದ ಶ್ರುತಿ ಜತೆಗೆ, ಈ ಬಾರಿ ಅವರ ಬಾಯ್‍ಫ್ರೆಂಡ್ ಶಂತನು ಸೇರಿಕೊಂಡಿದ್ದಾರೆ. ಶಂತನು ಜತೆಗಿರುವ ಕೆಲವು ಫೋಟೋಗಳನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡು ಲಾಕ್‍ಡೌನ್ ವಿಥ್ ಮೈ ಬೆಸ್ಟಿ ಎಂಬ ಕ್ಯಾಪ್ಶನ್ ಕೊಟ್ಟಿದ್ದಾರೆ.

 

View this post on Instagram

 

A post shared by Shruti Haasan (@shrutzhaasan)

ಶ್ರುತಿ ಹಾಸನ್ ತಮ್ಮ ಬಾಯ್‍ಫ್ರೆಂಡ್ ಶಂತನು ಅನ್ನು ಸೋಶಿಯಲ್ ಮೀಡಿಯಾ ಮೂಲಕವಾಗಿ ಪರಿಚಯಿಸಿದ್ದರು. ಶಂತನು ತಮ್ಮ ಜೀವನದಲ್ಲಿ ಎಂಟ್ರಿಯಾದ ಮೇಲೆ ಸಾಕಷ್ಟು ಬದಲಾವಣೆಯಾಗಿದೆ ಎಂದು ಹೇಳಿಕೊಂಡಿದ್ದರು.

ಲಾಕ್‍ಡೌನ್ ಮುಗಿಯುವುದನ್ನೇ ಕಾಯುತ್ತಿದ್ದೇನೆ. ನನಗೆ ನಮ್ಮಪ್ಪ, ಅಮ್ಮಾ ಪಾಕೆಟ್ ಮನಿ ಕೊಡುವುದಿಲ್ಲ. ನಮ್ಮನ್ನು ನಾವೇ ನೋಡಿಕೊಳ್ಳಬೇಕು. ಒಂದಿಷ್ಟು ಕಮಿಟ್‍ಮೆಂಟ್‍ಗಳಿರುವುದರಿಂದ ಕೆಲಸ ಮಾಡಲೇಕೇಕಿದೆ. ಆದಷ್ಟು ಬೇಗ ಲಾಕ್‍ಡೌನ್ ಮುಗಿಯುವುದಕ್ಕೆ ಕಾಯುತ್ತಿದ್ದೇನೆ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.

Comments

Leave a Reply

Your email address will not be published. Required fields are marked *