ಬಾಯಿ ಮುಚ್ಚಿದರೆ ಸರಿ- ಚಕ್ರವರ್ತಿಗೆ ಪ್ರಿಯಾಂಕಾ ಅವಾಜ್

ಬಿಗ್‍ಬಾಸ್ ಮನೆಲಿ ಸೈಲೆಂಟ್ ಆಗಿದ್ದ ಪ್ರಿಯಾಂಕ ತಿಮ್ಮೇಶ್ ಇದೀಗ ಜೋರು ಧ್ವನಿಯಲ್ಲಿ ಚಕ್ರವರ್ತಿ ಅವರಿಗೆ ಅವಾಜ್ ಹಾಕಿದ್ದಾರೆ. ಬಿಗ್‍ಬಾಸ್ ಮನೆಯಲ್ಲಿ ಜಗಳದ ಬೆಂಕಿ ಹೊತ್ತಿ ಉರಿಯುತ್ತಿದೆ.

ಅವರು ನೇರವಾಗಿಲ್ಲ. ನಾಟಕೀಯ, ಸ್ಕೋಪ್ ತಗೆದುಕೂಳ್ಳುತ್ತಿದ್ದೀಯಾ? ಎಂದು ನನಗೆ ಹೇಗೆ ಹೇಳುತ್ತಿರುತ್ತಿರಾ ಎಂದು ಪ್ರಿಯಾಂಕಾ ಸುದೀಪ್ ಮುಂದೆ ಹೇಳಿಕೊಂಡಿದ್ದರು. ಕಟ್ಟೆಪಂಚಾಯ್ತಿಯಲ್ಲಿ ಈ ವಿಷಯನ್ನು ಇತ್ಯರ್ಥಮಾಡಿ ಸುದೀಪ್ ರಾಜಿ ಮಾಡಿದ್ದರು. ಈ ಹಿಂದೆ ಚಕ್ರವರ್ತಿ ಮತ್ತು, ಪ್ರಿಯಾಂಕಾ ನಡುವೆ ಹಲವು ಸಣ್ಣ ಸಣ್ಣ ವಿಚಾರಗಳಿಗೆ ಜಗಳವಾಗಿತ್ತು. ಆದರೆ ಇದೇ ವಿಷಯಗಳನ್ನು ಮತ್ತೇ ಕೆದಕಿಕೊಂಡು ಇಬ್ಬರು ಕಿತ್ತಾಟ ನಡೆಸಿದ್ದಾರೆ. ಕಾಲು ಕೆದರಿಕೊಂಡು ಜಗಳ ಮಾಡುವ ಚಕ್ರವರ್ತಿ ವಿರುದ್ಧವಾಗಿ ಪ್ರಿಯಾಂಕ ತಿರುಗಿ ಬಿದ್ದಿದ್ದಾರೆ.

ಸಾಧ್ಯವಾದಷ್ಟು ಸೈಲೆಂಟ್ ಆಗಿಯೇ ಇದ್ದ ಪ್ರಿಯಾಂಕಾ ಯಾರು ಏನೇ ಹೇಳಿದರೂ ಅದನ್ನು ತಾಳ್ಮೆಯಿಂದ ನಿಭಾಯಿಸಿಕೊಂಡು ಸಾಗುತ್ತಿದ್ದರು. ಚಕ್ರವರ್ತಿ ಅವರ ಮಾತಿನಿಂದ ಆಗಾಗ ಪ್ರಿಯಾಂಕಾ ಅವರನ್ನು ಕೆಣಕುತ್ತಿದ್ದರು. ಇದೇ ಮೊದಲ ಬಾರಿಗೆ ಪ್ರಿಯಾಂಕಾ ತಿಮ್ಮೇಶ್ ಅವರು ದೊಡ್ಮನೆಯೊಳಗೆ ಉಗ್ರಾವತಾರ ತೋರಿದ್ದಾರೆ. ತಮ್ಮ ಬಗ್ಗೆ ಇಲ್ಲಸಲ್ಲದ ಮಾತನಾಡಿದ ಚಕ್ರವರ್ತಿ ಚಂದ್ರಚೂಡ್‍ಗೆ ಖಡಕ್ ಆಗಿ ವಾನಿರ್ಂಗ್ ನೀಡಿದ್ದಾರೆ.

ಪ್ರಿಯಾಂಕಾ ಕಣ್ಣೀರು ಹಾಕುತ್ತಾ ನಾನು ಮತ್ತು ಶಮಂತ್ ಏನೇ ಮಾಡಿದರೂ ಅದನ್ನು ಕೇಳೋಕೆ ಇವರು ಯಾರು? ಎಂದು ಅಳುತ್ತಲೇ ತಮ್ಮ ನೋವನ್ನು ಪ್ರಶಂತ್, ಶಮಂತ್ ಬಳಿ ಹೇಳಿಕೊಳ್ಳುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ಚಕ್ರವರ್ತಿ ಮತ್ತೆ ಪ್ರತ್ಯುತ್ತರ ನೀಡಲು ಬಂದಾಗ ಅವರ ಪ್ರಿಯಾಂಕಾ ತಾಳ್ಮೆಯ ಕಟ್ಟೆ ಒಡೆದಿದೆ. ಜೋರಾಗಿ ಕಿರುಚಾಡಿ ಪ್ರಿಯಾಂಕಾ ಚಕ್ರವರ್ತಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಕಣ್ಣಲ್ಲಿ ನೀರು ಹಾಕಿಕೊಂಡು ನನ್ನ ಬಗ್ಗೆ ಕೆಟ್ಟದಾಗಿ ಮಾತನಾಡಿದರೆ ಅದೆಲ್ಲ ನಿಜವಾಗುವುದಿಲ್ಲ ಎಂದು ಚಕ್ರವರ್ತಿ ಏರು ಧ್ವನಿಯಲ್ಲಿ ಮಾತನಾಡಿದರು. ಅದಕ್ಕೆ ತಿರುಗೇಟು ನೀಡಿದ ಪ್ರಿಯಾಂಕಾ, ನಾನು ಕಣ್ಣೀರು ಹಾಕಿಕೊಂಡು ನಾಟಕ ಮಾಡುತ್ತಿಲ್ಲ. ಬಾಯಿ ಮುಚ್ಚಿದರೆ ಸರಿ ಎಂದು ಕಿರುಚಾಡಿ ಹಾಗೇ ಸಿಟ್ಟಿನಿಂದ ಚಕ್ರವರ್ತಿ ಅವರ ಬಳಿ ಹೋಗಿದ್ದಾರೆ. ಆಗ ಮನೆ ಮಂದಿ ತಡೆದು ನಿಲ್ಲಿಸುವ ಪ್ರಯತ್ನವನ್ನು ಮಾಡಿದ್ದಾರೆ.

Comments

Leave a Reply

Your email address will not be published. Required fields are marked *