ಬಾಡಿಗೆ ಹಣ ಕೇಳಿದ್ದಕ್ಕೆ ವೃದ್ಧ ದಂಪತಿಗೆ ಇನಿಯನ ಜೊತೆ ಸೇರಿ ಬೆದರಿಕೆ

– ಒಂದೂವರೆ ಕೋಟಿ ಬಾಡಿಗೆ ಹಣ ಕೊಡದ ಕೇಡಿ
– ಇಬ್ರು ಗಂಡಂದಿರಿಗೆ ಬೆದರಿಕೆ ಹಾಕಿ ಮತ್ತೊಬ್ಬನ ಜೊತೆ ಸಂಬಂಧ

ಬೆಂಗಳೂರು: ಬಾಡಿಗೆ ಹಣ ಕೇಳಿದ್ದಕ್ಕೆ ಇನಿಯನೊಂದಿಗೆ ವೃದ್ಧ ದಂಪತಿಗೆ ಬೆದರಿಕೆ ಹಾಕಿದ್ದ ಜೋಡಿಯನ್ನ ಹೆಚ್‍ಎಎಲ್ ಪೊಲೀಸರು ಬಂಧಿಸಿದ್ದಾರೆ.

ವಿಶಾಲ್ ಮತ್ತು ಭುವನಾ ಬಂಧಿತ ಜೋಡಿ. ಹಲವು ವರ್ಷಗಳ ಹಿಂದೆ ವೃದ್ಧ ದಂಪತಿ ಹೆಚ್‍ಎಎಲ್ ಬಳಿಯ ಕುಂದ್ಲಹಳ್ಳಿಯ ಬಳಿಯ ಕಟ್ಟಡವನ್ನ ಭುವನಾಗೆ ಪಿಜಿ ನಡೆಸಲು ಬಾಡಿಗೆಗೆ ನೀಡಿದ್ದರು. ಸ್ವಲ್ಪ ದಿನ ಪಿಜಿ ನಡೆಸಿದ ಭುವನಾ 2019 ಡಿಸೆಂಬರ್ ನಿಂದ ಬಾಡಿಗೆ ಹಣ ನೀಡದೇ ವೃದ್ಧ ದಂಪತಿಗೆ ಕಿರುಕುಳ ನೀಡಿದ್ದಾಳೆ. ಅಂದಿನಿಂದ ಇದುವರೆಗೂ ಕಟ್ಟಡದ ವಿದ್ಯುತ್ ಮತ್ತು ವಾಟರ್ ಬಿಲ್ ಸಹ ಪಾವತಿ ಮಾಡಿಲ್ಲ.

ಭುವನಾ ಬಾಡಿಗೆ ಹಣ ನೀಡದ ಹಿನ್ನೆಲೆ ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯದ ಸೂಚನೆ ಮೇರೆಗೆ ಹೆಚ್‍ಎಎಲ್ ಪೊಲೀಸರು ಭುವನಾ ಮತ್ತು ಆಕೆಯ ಸಂಗಾತಿ ವಿಶಾಲ್ ನನ್ನು ಬಂಧಿಸಿದ್ದಾರೆ. ಇವರಿಬ್ಬರ ಜೊತೆ ರೌಡಿಶೀಟರ್ ಸಹ ದಂಪತಿಗೆ ಕಿರುಕುಳ ನೀಡುತ್ತಿದ್ದನು.

ಭುವನಾ ಮೊದಲಿಗೆ ಅಮಿತ್ ಎಂಬಾತನನ್ನು ಮದುವೆಯಾಗಿದ್ದಳು. ಕೆಲ ದಿನಗಳ ಬಳಿಕ ಅಮಿತ್ ನಿಂದ ದೂರವಾದ ಭುವನಾ ಅಮೆರಿಕಾದ ಕ್ಲಾಡ್ ಅಲೋಕ್ ಜೊತೆ ಮದುವೆಯಾಗಿದ್ದಳು. ಇದೀಗ ಗಂಡಂದಿರಿಂದ ದೂರವಾಗಿ ಭುವನಾ ಇಬ್ಬರಿಗೂ ಕಿರುಕುಳ ನೀಡುತ್ತಿದ್ದು, ದೆಹಲಿ ಮೂಲದ ವಿಶಾಲ್ ಜೊತೆ ವಾಸವಾಗಿದ್ದಾಳೆ. ಇನಿಯ ವಿಶಾಲ್ ಜೊತೆಗೂಡಿ ವೃದ್ಧ ದಂಪತಿಗೆ ಹಣ ನೀಡದೇ ಕಿರುಕುಳ ನೀಡುತ್ತಿದ್ದಳು. ಇದೇ ರೀತಿ ಹಲವರಿಗೆ ವಂಚಿಸಿರುವ ಆರೋಪಗಳು ಭುವನಾ ವಿರುದ್ಧ ಕೇಳಿ ಬಂದಿವೆ.

Comments

Leave a Reply

Your email address will not be published. Required fields are marked *