ಬಸ್, ಟೆಂಪೋ ನಡುವೆ ಭೀಕರ ಅಪಘಾತ – ಸ್ಥಳದಲ್ಲೇ ನಾಲ್ವರು ಸಾವು, ಇಬ್ಬರ ಸ್ಥಿತಿ ಗಂಭೀರ

Tumkuru

ತುಮಕೂರು: ತುಮಕೂರಿನ ಹೆಗ್ಗೆರೆ ಸಮೀಪದ ಗೊಲ್ಲಹಳ್ಳಿ ಬಳಿ ಖಾಸಗಿ ಬಸ್ ಹಾಗೂ ಟೆಂಪೋ ನಡುವೆ ಭೀಕರ ಅಪಘಾತ ಸಂಭವಿಸಿ ಸ್ಥಳದಲ್ಲಿಯೇ ನಾಲ್ವರು ಸಾವನ್ನಪ್ಪಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ.

Tumkuru

ಈ ಕುರಿತಂತೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಧ್ಯಮದವರೊಂದಿಗೆ ಮಾತನಾಡಿದ ಎಸ್‍ಪಿ ರಾಹುಲ್ ಕುಮಾರ್, ಮುಂಜಾನೆ ಮಂಜು ಮುಸುಕಿದ ವಾತಾವರಣ ಇದ್ದದ್ದರಿಂದ ಅಪಘಾತ ಸಂಭವಿಸಿರಬಹುದು. ಘಟನೆಯಲ್ಲಿ ಟೆಂಪೋದಲಿದ್ದ ನಾಲ್ವರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಖಾಸಗಿ ಬಸ್ಸಿನಲ್ಲಿದ್ದ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇದೀಗ ಅವರಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇದನ್ನೂ ಓದಿ: 1 ರಿಂದ 5ನೇ ತರಗತಿ ಆರಂಭಕ್ಕೆ ಅಗತ್ಯವುಳ್ಳ ಎಲ್ಲಾ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ: ಬಿ.ಸಿ.ನಾಗೇಶ್

Tumkuru

ಮೃತರನ್ನು ಚಿಕ್ಕನಾಯಕನಹಳ್ಳಿ ಮೂಲದ ರ‍್ಶನ್, ತುರುವೇಕೆರೆ ಮೂಲದವರಾದ ಕವಿತಾ, ಕೃಷ್ಣಮರ‍್ತಿ ಹಾಗೂ ದಿವಾಕರ್ ಎಂದು ಗುರುತಿಸಲಾಗಿದೆ. ಖಾಸಗಿ ಬಸ್ಸು ಶಿವಮೊಗ್ಗದಿಂದ ಬೆಂಗಳೂರು ಕಡೆಗೆ ಹೋಗುತಿದ್ದು, ಗೂಡ್ಸ್ ಆಟೋ ತುಮಕೂರಿಂದ ತುರುವೇಕೆರೆ ಕಡೆಗೆ ತೆರಳುತಿತ್ತು.  ಇದನ್ನೂ ಓದಿ: ಕಟ್ಟಡ ಕಾರ್ಮಿಕರ ಕಾರ್ಡ್ ದುರುಪಯೋಗವಾದರೆ ಕ್ರಮ: ಸಿಎಂ

ಟೆಂಪೋದಲ್ಲಿ 5 ಮಂದಿ ಪ್ರಯಾಣಿಸುತ್ತಿದ್ದು, ಖಾಸಗಿ ಬಸ್ಸಿನಲ್ಲಿ ಒಟ್ಟು 22 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಅದೃಷ್ಟವಶಾತ್ ಬಸ್ಸಿನಲ್ಲಿ ಇದ್ದವರಿಗೆ ಹೆಚ್ಚಾಗಿ ಯಾವುದೇ ತೊಂದರೆ ಆಗಿಲ್ಲ ಎಂದಿದ್ದಾರೆ. ಇದನ್ನೂ ಓದಿ: ದೇವರ ನಾಡು ಕೇರಳದಲ್ಲಿ ಜಲಪ್ರಳಯ – ಜಲಾಸುರನ ಆಟಕ್ಕೆ 6 ಸಾವು, 15 ಮಂದಿ ನಾಪತ್ತೆ

Comments

Leave a Reply

Your email address will not be published. Required fields are marked *