ಬನಿಯನ್, ನಿಕ್ಕರ್‌ನಲ್ಲೇ ರೈಲಿನಲ್ಲಿ ಓಡಾಡಿ ಸಮಜಾಯಿಷಿ ನೀಡಿದ ಶಾಸಕ

ನವದೆಹಲಿ: ಶಾಸಕರೊಬ್ಬರು ಬನಿಯನ್ ಹಾಗೂ ನಿಕ್ಕರ್ ನಲ್ಲೇ ರೈಲಿನೊಳಗೆ ಓಡಾಡಿ ಸುದ್ದಿಯಾಗುತ್ತಿದ್ದಂತೆಯೇ ಸಮಜಾಯಿಷಿ ನೀಡಿದ ಘಟನೆ ನವದೆಹಲಿಯಲ್ಲಿ ನಡೆದಿದೆ.

ಶಾಸಕರನ್ನು ಗೋಪಾಲ್ ಮಂಡಲ್ ಎಂದು ಗುರುತಿಸಲಾಗಿದ್ದು, ಇವರು ಬಿಹಾರದ ಆಡಳಿತ ಪಕ್ಷ ಜೆಡಿಯು ಶಾಸಕರಾಗಿದ್ದಾರೆ. ಈ ಘಟನೆ ತೇಜಸ್ ರಾಜಧಾನಿ ಎಕ್ಸ್ ಪ್ರೆಸ್ ಟ್ರೈನಿನಲ್ಲಿ ಗುರುವಾರ ನಡೆದಿದೆ. ಇದನ್ನೂ ಓದಿ: ಸ್ವರ್ಗದ ಬಾಗಿಲನ್ನು ತೆಗೆದುಕೊಟ್ಟ ಯುವರಾಜನೇ ರಾಯನ್: ಮೇಘನಾ ರಾಜ್

ಶಾಸಕರು ಪಾಟ್ನಾದಿಂದ ನವದೆಹಲಿಗೆ ಪ್ರಯಾಣ ಬೆಳೆಸಿದ್ದರು. ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದ ಸಂದರ್ಭದಲ್ಲಿ ಶಾಸಕರು ಬಿಳಿ ಬಣ್ಣದ ಬನಿಯನ್ ಹಾಗೂ ಕೇವಲ ಅಂಡರ್ ವೇರ್ ತೊಟ್ಟು ಓಡಾಡಿದ್ದಾರೆ. ಇದನ್ನು ಗಮನಿಸಿದ ಇತರ ಪ್ರಯಾಣಿಕರು ಶಾಸಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೆ ಶಾಸಕರ ನಡವಳಿಕೆ ಗಮನಿಸಿರುವ ಸಹಪ್ರಯಾಣಿಕರು ದೂರು ಕೂಡ ನೀಡಿದ್ದಾರೆ. ರೈಲ್ವೇ ಪೊಲೀಸ್ ಮತ್ತು ಟಿಟಿಇ ಅಧಿಕಾರಿಗಳು ಎರಡೂ ಕಡೆಯವರ ಮನವೊಲಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ ಪ್ರಸಂಗ ನಡೆದಿದೆ. ಇದನ್ನೂ ಓದಿ: ಸುಂದರ್ ರಾಜ್, ಸರ್ಜಾ ಫ್ಯಾಮಿಲಿ ಸದಾ ಒಂದಾಗಿರುತ್ತದೆ: ಧ್ರುವ ಸರ್ಜಾ

ಇತ್ತ ಈ ಬಗ್ಗೆ ಸಮಜಾಯಿಷಿ ನೀಡಿದ ಶಾಸಕರು, ಪ್ರಯಾಣದ ವೇಳೆ ನನ್ನ ಹೊಟ್ಟೆ ಕೆಟ್ಟಿತ್ತು. ಹೀಗಾಗಿ ಒಳ ಉಡುಪುಗಳನ್ನು ಮಾತ್ರ ಧರಿಸಿದ್ದೆ ಎಂದು  ಸ್ಪಷ್ಟನೆ ನೀಡಿದ್ದಾರೆ.

Comments

Leave a Reply

Your email address will not be published. Required fields are marked *