ಬಟ್ಟೆ ವ್ಯಾಪಾರಿ, ಪಿಗ್ಮಿ ಕಲೆಕ್ಟರ್​ಗೆ ಕೊರೊನಾ-ಹಾವೇರಿಗೆ ಚಿಕ್ಕಪೇಟೆಯ ಸೋಂಕು!

-ಹಾವೇರಿ ಜಿಲ್ಲೆಯಲ್ಲಿ 44ಕ್ಕೇರಿದ ಸೋಂಕಿತರ ಸಂಖ್ಯೆ

ಹಾವೇರಿ: ಜಿಲ್ಲೆಯಲ್ಲಿ ಇವತ್ತು ಇಬ್ಬರಿಗೆ ಕೊರೊನಾ ಸೋಂಕು ಧೃಡಪಟ್ಟಿದೆ.

ಹಾವೇರಿ ಜಿಲ್ಲೆ ರಾಣೆಬೆನ್ನೂರಿನ 38 ವಷ್ದ ಬಟ್ಟೆ ವ್ಯಾಪಾರಿ (ರೋಗಿ-9411) ದೃಢಪಟ್ಟ ಕೊರೊನಾ ಸೋಂಕು ಧೃಡಪಟ್ಟಿದೆ. ಜೂನ್ 9ರಂದು ಬೆಂಗಳೂರಿನ ಚಿಕ್ಕಪೇಟೆಗೆ ಬಟ್ಟೆ ಖರೀದಿಗೆ ಹೋಗಿ ಜೂನ್ 11ರಂದು ಮರಳಿ ರಾಣೆಬೆನ್ನೂರಿಗೆ ಹಿಂದಿರುಗಿದ್ದರು. ಮತ್ತೆ ಜೂನ್ 17 ರಂದು ದಾವಣಗೆರೆಗೆ ಬಟ್ಟೆ ಖರೀದಿಸಲು ಸೋಂಕಿತ ಹೋಗಿ ಬಂದಿದ್ದಾರೆ. ಶೀತ, ಕೆಮ್ಮು, ಜ್ವರ, ಸುಸ್ತಿನಿಂದ ಬಳಲುತ್ತಿದ್ದರಿಂದ ಜೂನ್ 20ರಂದು ಕೋವಿಡ್-19 ಪರೀಕ್ಷೆಗೆ ಒಳಗಾಗಿದ್ದರು. ಇಂದು ಬಂದ ಸೋಂಕು ತಗುಲಿರೋದು ದೃಢಪಟ್ಟಿದೆ.

ಶಿಗ್ಗಾಂವಿ ಪಟ್ಟಣದ 37 ವರ್ಷದ ಪಿಗ್ಮಿ ಕಲೆಕ್ಟರ್ (ರೋಗಿ 9412) ಸೋಂಕು ದೃಢಪಟ್ಟಿದೆ. ರೋಗಿ 8292ರ ಸಂಪರ್ಕದಿಂದ ಪಿಗ್ಮಿ ಕಲೆಕ್ಟರ್ ಗೆ ಸೋಂಕು ತಗುಲಿದೆ. ಪಟ್ಟಣದಲ್ಲಿ ಪಿಗ್ಮಿ ಕಲೆಕ್ಟ್ ಮಾಡಿ ಕಿತ್ತೂರು ರಾಣಿ ಚೆನ್ನಮ್ಮ ಕೋ-ಆಪರೇಟಿವ್ ಸೊಸೈಟಿಯಲ್ಲಿ ಹಣ ಜಮಾ ಮಾಡುತ್ತಿದ್ದರು. ಸೋಂಕಿತ ಅಲ್ಲದೆ ಪಿಗ್ಮಿ ಕಲೆಕ್ಷನ್ ಜೊತೆಗೆ ಹೋಲ್ ಸೇಲ್ ಅಂಗಡಿಗಳಿಗೆ ಸಕ್ಕರೆ ಸರಬರಾಜು ಮಾಡುತ್ತಿದ್ದ ಎಂದು ತಿಳಿದು ಬಂದಿದೆ.

ಶಿಗ್ಗಾಂವಿ ಪಟ್ಟಣದ 6 ಹೋಲ್ ಸೇಲ್ ಅಂಗಡಿ, ಬಂಕಾಪುರ ಹಾಗೂ ಹೂಲಗೂರು ಗ್ರಾಮಗಳಿಗೆ ಸಕ್ಕರೆ ಸರಬರಾಜು ಮಾಡುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈ ಇಬ್ಬರು ಸೋಂಕಿತರು ವಾಸ ಮಾಡುತ್ತಿದ್ದ ಮನೆ ಹಾಗೂ ಅಂಗಡಿಗಳನ್ನ ಸೀಲ್‍ಡೌನ್ ಮಾಡಲಾಗಿದೆ. ನೂರು ಮೀಟರ್ ಪ್ರದೇಶವನ್ನ ಕಂಟೈನ್‍ಮೆಂಟ್ ಝೋನ್ ಎಂದು ಘೋಷಣೆ ಮಾಡಿದೆ. ಒಟ್ಟು ಹಾವೇರಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 44 ಕ್ಕೆ ಏರಿಕೆಯಾಗಿದೆ.

Comments

Leave a Reply

Your email address will not be published. Required fields are marked *