ಫ್ಲ್ಯಾಟ್ ಇಎಂಐ ಸುಶಾಂತ್ ಪಾವತಿಸಿಲ್ಲ: ಅಂಕಿತಾ ಲೋಖಂಡೆ

-ಬ್ಯಾಂಕ್ ಸ್ಟೇಟಮೆಂಟ್ ಫೋಟೋ ಹಂಚಿಕೊಂಡ ನಟಿ

ಮುಂಬೈ: ನಟ ಸುಶಾಂತ್ ಸಿಂಗ್ ರಜಪೂತ್ ನಾನು ಖರೀದಿಸಿದ ಫ್ಲ್ಯಾಟ್ ಇಎಂಐ ಪಾವತಿಸಿಲ್ಲ ಎಂದು ನಟಿ ಅಂಕಿತಾ ಲೋಖಂಡೆ ಹೇಳಿದ್ದು, ಬ್ಯಾಂಕ್ ಸ್ಟೇಟಮೆಂಟ್ ಫೋಟೋಗಳನ್ನು ಇನ್‍ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಸದ್ಯ ಅಂಕಿತಾ ವಾಸವಾಗಿರುವ ಫ್ಲ್ಯಾಟ್ ಇಎಂಐ ಸುಶಾಂತ್ ಖಾತೆಯಿಂದ ಪಾವತಿ ಆಗಿದೆ ಎಂದು ಸುದ್ದಿಗಳು ಬಿತ್ತರವಾದ ಹಿನ್ನೆಲೆಯಲ್ಲಿ ಅಂಕಿತಾ ತಮ್ಮ ಬ್ಯಾಂಕ್ ವ್ಯವಹಾರ ಹಾಗೂ ಫ್ಲ್ಯಾಟ್ ಖರೀದಿಯ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ.

https://www.instagram.com/p/CD4Tsc5BNhP/

ನಾನು ಎಲ್ಲ ಗೊಂದಲಗಳಿಗೆ ತೆರೆ ಎಳೆಯಲು ಮತ್ತು ಪಾರದರ್ಶಕವಾಗಿರಲು ಇಚ್ಛಿಸುತ್ತೇನೆ. ನಾನು ವಾಸವಾಗಿರುವ ಫ್ಲ್ಯಾಟ್ ಇಎಂಐ ನನ್ನ ಬ್ಯಾಂಕ್ ಖಾತೆಯಿಂದಲೇ (01/012019 ರಿಂದ 01/03/2020) ಪಾವತಿಸಿದ್ದೇನೆ. ಸುಶಾಂತ್ ಸಾವಿಗೆ ನ್ಯಾಯ ಸಿಗಲಿ ಎಂಬದಕ್ಕೆ ನನ್ನ ಧ್ವನಿ ಎತ್ತಿದ್ದೇನೆ ಎಂದು ಅಂಕಿತಾ ಇನ್‍ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಪೊಲೀಸರಿಗೆ ದೂರು ನೀಡಿದ ಸುಶಾಂತ್ ಮಾಜಿ ಮ್ಯಾನೇಜರ್ ದಿಶಾ ತಂದೆ

https://www.instagram.com/p/CD4T4fEBcJs/

ಸುಶಾಂತ್ ಖಾತೆಯಿಂದಲೇ ಅಂಕಿತಾ ವಾಸವಾಗಿರುವ ಫ್ಲ್ಯಾಟ್ ಇಎಂಐ ಕಡಿತಗೊಂಡಿದೆ. ಆ ಫ್ಲ್ಯಾಟ್ ಸುಶಾಂತ್ ಹೆಸರಿನಲ್ಲಿ ರಿಜಿಸ್ಟರ್ ಆಗಿದೆ ಎಂದು ಸುದ್ದಿಸಂಸ್ಥೆ ವರದಿ ಮಾಡಿತ್ತು. ಸುಶಾಂತ್ ಜೊತೆ ಮೊದಲು ಕೆಲಸ ಮಾಡಿದ್ದ ರಜತ್ ಮೇವಾಟಿ, ಪಂಕಜ್ ದುಬೆ ಮತ್ತು ದೀಪೇಶ್ ಸಾವಂತ್ ಮೂವರನ್ನು ಇಡಿ ವಿಚಾರಣೆ ನಡೆಸಿದೆ. ಮುಂದಿನ ವಾರ ಸುಶಾಂತ್ ಕುಟುಂಸ್ಥರನ್ನ ಇಡಿ ವಿಚಾರಣೆ ನಡೆಸಲಿದೆ. ಈಗಾಗಲೇ ಸುಶಾಂತ್ ಗೆಳತಿ, ನಟಿ ರಿಯಾ ಚಕ್ರವರ್ತಿಯನ್ನು ಎರಡು ಬಾರಿ ಇಡಿ ವಿಚಾರಣೆ ನಡೆಸಿದೆ. ಇದನ್ನೂ ಓದಿ: ಸುಶಾಂತ್ ಖಾತೆಯಿಂದ ರಿಯಾ ಅಕೌಂಟ್‍ಗೆ ಹೋಗಿದ್ದ ಹಣ ಪತ್ತೆ ಹಚ್ಚಿದ ಇಡಿ

Comments

Leave a Reply

Your email address will not be published. Required fields are marked *