ರಮಲ್ಲಾ: ಫ್ರಿಡ್ಜ್ ಒಳಗಡೆ ಇರುವ ವ್ಯಕ್ತಿ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಬೇಸರವನ್ನು ಕಳೆಯಲು ಸಯೀದ್ ಎಂಬ ಪ್ಯಾಲೇಸ್ಟಿನಿಯನ್ ವ್ಯಕ್ತಿ, ಬಿಡುವಿನ ಸಮಯದಲ್ಲಿ ರೆಫ್ರಿಜರೇಟರ್ ಬಾಗಿಲುಗಳ ಮೇಲೆ ಫೋಟೋಶಾಪ್ ಮಾಡಿ ಫೋಟೋಗಳನ್ನು ಅಂಟಿಸಿದ್ದಾರೆ, ಈ ಫೋಟೋಗಳನ್ನು ನೋಡಿದರೆ ಆತ ರೆಫ್ರಿಜರೇಟರ್ ಒಳಗಡೆ ಇದ್ದಂತೆ ಕಾಣಿಸುತ್ತದೆ.

ಈ ವಿಚಾರವಾಗಿ ಸಯೀದ್, ನನಗೆ ಬೇಸರವಾದಾಗ ನಾನು ಫ್ರಿಡ್ಜ್ ಮೇಲೆ ಮಾಡಿರುವ ಫೋಟೋಶಾಪ್‍ಗಳನ್ನು ನೋಡುತ್ತೇನೆ. ಆಗ ನಾನು ಫ್ರಿಡ್ಜ್ ಮೇಲೆಯೇ ಇರುವಂತೆ ಕಾಣಿಸುತ್ತದೆ ಎಂದು ಕ್ಯಾಪ್ಷನ್ ಹಾಕಿಕೊಂಡಿದ್ದಾರೆ. ಅಲ್ಲದೆ ಶೇರ್ ಮಾಡಿರುವ ಈ ಎರಡು ಫೋಟೋಗಳಲ್ಲಿ, ಒಂದು ಕ್ಯಾಮೆರಾದಲ್ಲಿ ಫೋಟೋ ಕ್ಲಿಕ್ಕಿಸಿಕೊಳ್ಳುವಂತೆ ಕಾಣಿಸುತ್ತಿದ್ದರೆ, ಮತ್ತೊಂದರಲ್ಲಿ ಸಯೀದ್ ಕೆಲವು ವಸ್ತುಗಳ ಮೇಲೆ ಕುಳಿತುಕೊಂಡಿರುವಂತೆ ಕಾಣಿಸುತ್ತದೆ.
https://twitter.com/SaeedDiCaprio/status/1369690655795126283
ಸದ್ಯ ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆಯೇ ಈವರೆಗೂ 7,29,600 ಲೈಕ್ಸ್ ಮತ್ತು 73,700 ಕಮೆಂಟ್ಸ್ ಬಂದಿದೆ.

Leave a Reply