ಫ್ಯಾಂಟಮ್ ಲೋಕದ ವಿಕ್ರಾಂತ್ ರೋಣನಿಂದ ಗುಡ್ ನ್ಯೂಸ್

ಬೆಂಗಳೂರು: ಫ್ಯಾಂಟಮ್ ಹೆಸರು ಕೇಳಿದೊಡನೆ ಅದ್ಭುತ ಕಲ್ಪನೆಯ ಲೋಕದ ಝಲಕ್ ಕಣ್ಮುಂದೆ ಬರುತ್ತೆ. ಅಷ್ಟರ ಮಟ್ಟಿಗೆ ಫ್ಯಾಂಟಮ್ ಸಿನಿಮಾದ ಪೋಸ್ಟರ್, ವಿಕ್ರಾಂತ್ ರೋಣನ ಕಣ್ಣೋಟ, ಕೋಟೆ ಮುಂದೆ ಗನ್ ಹಿಡಿದು ಕುಳಿತ ಸುದೀಪ್ ಲುಕ್ ನೆನಪಿಗೆ ಬರುತ್ತೆ. ಇದೀಗ ಫ್ಯಾಂಟಮ್ ಚಿತ್ರತಂಡ ಹೊಸದಾದ ಸಿಹಿ ಸುದ್ದಿ ನೀಡಲು ಸಿದ್ಧಗೊಂಡಿದೆ.

ಹೌದು, ಇಂದು ಬೆಳಗ್ಗೆಯಿಂದಲೇ ಸೋಶಿಯಲ್ ಮೀಡಿಯಾದಲ್ಲಿ ಫ್ಯಾಂಟಮ್ ಸದ್ದು ಮಾಡುತ್ತಿದೆ. ಇದೇ ಜನವರಿ 21ಕ್ಕೆ ಚಿತ್ರತಂಡದಿಂದ ದೊಡ್ಡ ಘೋಷಣೆಯೊಂದು ಹೊರ ಬೀಳಲಿದೆ. ಹೀಗಂತ ಖುದ್ದು ಫ್ಯಾಂಟಮ್ ಲೋಕದ ಸೃಷ್ಟಿಕರ್ತ ಅನೂಪ್ ಭಂಡಾರಿ, ರಹಸ್ಯಗಳನ್ನ ತನ್ನ ಮಡಿಲೊಳಗೆ ಬಚ್ಚಿಟ್ಟುಕೊಂಡಿರುವ ದುನಿಯಾದ ಹೆಬ್ಬುಲಿ ವಿಕ್ರಾಂತ್ ರೋಣ ಸುದೀಪ್ ಹೇಳಿದ್ದಾರೆ.

ಇನ್ನೂ ಈ ಅನೌನ್ಸ್ ಜೊತೆ ಹೆಗಲ ಮೇಲೆ ಗನ್ ಹಿಡಿದು, ಬೆರಳಲ್ಲಿ ಟಿಗರ್ ಹಿಡಿದು ಮಾಸ್ಕ್ ತೊಟ್ಟ ವಿಕ್ರಾಂತ್ ರೋಣನ ಲುಕ್ ಸಹ ಔಟ್ ಆಗಿದೆ. ದೊಡ್ಡ ಅನೌನ್ಸ್‍ಮೆಂಟ್ ಮುಂಚೆನೇ ಕಿಚ್ಚನ ಬಳಗಕ್ಕೆ ಊಟಕ್ಕೆ ಮೊದಲೇ ಜಿಲೇಬಿ ಸಿಕ್ಕಂತಾಗಿದೆ. ಪಕ್ಕಾ 90ರ ದಶಕದ ಹೀರೋಗಳ ಸ್ಟೈಲಿನಲ್ಲಿ ಕ್ಯಾಪ್, ಜಾಕೆಟ್ ಕಾಣಿಸಿಕೊಂಡಿರುವ ಸುದೀಪ್ ಕಣ್ಣುಗಳು ನೋಡುಗರನ್ನ ಸೆಳೆಯುತ್ತಿವೆ.

ಇತ್ತೀಚೆಗಷ್ಟೇ ಸಿನಿಮಾದ ಚಿತ್ರೀಕರಣ ಮುಕ್ತಾಯಗೊಂಡಿರುವ ಬಗ್ಗೆ ಚಿತ್ರತಂಡ ಹೇಳಿತ್ತು. ಜನವರಿ 21ರಂದು ಸಿನಿಮಾದ ಟೀಸರ್ ರಿಲೀಸ್ ದಿನಾಂಕ ಅನೌನ್ಸ್ ಮಾಡಬಹುದು ಅಂತ ಪೈಲ್ವಾನ್ ಅಖಾಡದಲ್ಲಿ ಚರ್ಚೆಗಳು ನಡೆಯುತ್ತಿವೆ. ಅದೇನು ಸಸ್ಪೆನ್ಸ್ ಅಂತ ತಿಳಿದುಕೊಳ್ಳಬೇಕಾದ್ರೆ ಜನವರಿ 21ರವರೆಗೆ ಕಾಯಲೇಬೇಕು.

Comments

Leave a Reply

Your email address will not be published. Required fields are marked *