ಫಿಟ್ನೆಸ್ ಮಂತ್ರ – ಕಿಚ್ಚನ ಖಡಕ್ ವರ್ಕೌಟ್‍ಗೆ ಅಭಿಮಾನಿಗಳು ಫಿದಾ

ಬೆಂಗಳೂರು: ಕಿಚ್ಚ ಸುದೀಪ್ ಅವರು ಖಡಕ್ ಆಗಿ ವರ್ಕೌಟ್ ಮಾಡಿರುವ ಫೋಟೋ ಜೊತೆಗೆ ತಮ್ಮ ಫಿಟ್ನೆಸ್ ಮಂತ್ರವನ್ನು ರಿವೀಲ್ ಮಾಡಿದ್ದು, ಅಭಿಮಾನಿಗಳು ಕಿಚ್ಚನ ಬೇರ್ ಬಾಡಿ ನೋಡಿ ಫಿದಾ ಆಗಿದ್ದಾರೆ.

ಹೀರೋಗಳು ಎಂದಮೇಲೆ ತಮ್ಮ ಫಿಟ್ನೆಸ್ ಕಡೆ ಗಮನಕೊಡಲೇಬೇಕು. ಇದಕ್ಕಾಗಿ ದಿನಾ ಬೆಳಗ್ಗೆ ಎದ್ದು ರಗಡ್ ಆಗಿ ವ್ಯಾಯಾಮ ಮಾಡಿ ತಮ್ಮ ದೇಹವನ್ನು ದಂಡಿಸಲೇಬೇಕು. ಈಗ ಕಿಚ್ಚ ಸುದೀಪ್ ಅವರು ಕೂಡ ಖಡಕ್ ಆಗಿ ವ್ಯಾಯಾಮ ಮಾಡಿದ್ದು, ಆ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಸುದ್ದಿಯಾಗಿದ್ದಾರೆ.

ತಾವು ವರ್ಕೌಟ್ ಮಾಡಿ ದಂಡಿಸಿರುವ ದೇಹದ ಹಿಂಬದಿಯ ಫೋಟೋವನ್ನು ಹಂಚಿಕೊಂಡಿರುವ ಕಿಚ್ಚ, ಒಳ್ಳೆಯ ಆಹಾರ, ಡಿಸೆಂಟ್ ಲೈಫ್‍ಸ್ಟೈಲ್, ಅಲ್ಪ ಪ್ರಮಾಣದ ಶಿಸ್ತು ಇವುಗಳ ಜೊತೆಗೆ ತುಂಬಾ ದಿನಗಳ ನಂತರ ಮತ್ತೆ ಒಳ್ಳೆಯ ವರ್ಕೌಟ್ ಮಾಡಿದ್ದೇನೆ ಎಂದು ಬರೆದುಕೊಳ್ಳುವ ಮೂಲಕ ತಮ್ಮ ಫಿಟ್ನೆಸ್ ಮಂತ್ರವನ್ನು ರೀವಿಲ್ ಮಾಡಿದ್ದಾರೆ. ಜೊತೆಗೆ ಫ್ಯಾಂಟಮ್ ಸಿನಿಮಾದ ಚಿತ್ರೀಕರಣದಲ್ಲಿ ಕಳೆದ ಒಂದು ತಿಂಗಳಿನಿಂದ ನಿರತವಾಗಿದ್ದು, ಕೊನೆಯ ಹಂತಕ್ಕೆ ತಲುಪ್ಪಿದ್ದೇವೆ ಎಂದು ತಿಳಿಸಿದ್ದಾರೆ.

ಕೊರೊನಾದಿಂದ ಸ್ಥಗಿತವಾಗಿದ್ದ ಫ್ಯಾಂಟಮ್ ಚಿತ್ರೀಕರಣ ಅನ್‍ಲಾಕ್ ಬಳಿಕ ಆರಂಭಗೊಂಡಿತ್ತು. ಕೊರೊನಾ ಆತಂಕದ ನಡುವೆಯೂ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಿದ ಚಿತ್ರತಂಡ ಶೂಟಿಂಗ್ ಮುಗಿಸಿದೆ. ಸುದೀಪ್ ಮತ್ತು ನಟಿ ಅಪರ್ಣಾ ಬಲ್ಲಾಳ್ ಹುಟ್ಟುಹಬ್ಬದಂದು ಚಿತ್ರದಲ್ಲಿಯ ಇಬ್ಬರ ಲುಕ್ ರಿವೀಲ್ ಮಾಡಿತ್ತು. ಹಾಗೆಯೇ ದಟ್ಟ ಕಾನನದ ನಡುವೆ ಸುದೀಪ್ ದೋಣಿಯಲ್ಲಿ ಹೊರಟ ಧಗಿಧಗಿಸುವ ನೋಟ ಸ್ಯಾಂಡಲ್‍ವುಡ್ ಅಂಗಳದಲ್ಲಿ ಸಂಚಲನ ಸೃಷ್ಟಿಸಿತ್ತು.

ಈ ಚಿತ್ರವನ್ನು ರಂಗಿತರಂಗ ಖ್ಯಾತಿಯ ಅನೂಪ್ ಭಂಡಾರಿಯವರು ನಿರ್ದೇಶನ ಮಾಡುತ್ತಿದ್ದಾರೆ. ಜಾಕ್ ಮಂಜು ಅವರು ಈ ಸಿನಿಮಾಗೆ ಬಂಡವಾಳ ಹಾಕಿದ್ದಾರೆ. ಈ ಸಿನಿಮಾಗೆ ಅಜ್ನೀಶ್ ಲೋಕ್‍ನಾಥ್ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಸಿನಿಮಾ ಆರಂಭವಾದ ಇಲ್ಲಿಯವರೆಗೂ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುತ್ತದೆ. ಜೊತೆಗೆ ಚಿತ್ರತಂಡ ಒಂದೇ ಒಂದೇ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಚಿತ್ರದ ಮೇಲಿನ ಕೂತೂಹಲವನ್ನು ಹೆಚ್ಚಿಸುತ್ತಾ ಬರುತ್ತಿದೆ.

Comments

Leave a Reply

Your email address will not be published. Required fields are marked *