ಪ್ರೇಮಿಗಳ ದಿನ ಮದುವೆಯಾಗಿರುವುದು ಮರೆಯಲಾಗದ ನೆನಪು – ಕೃಷ್ಣ

ಬೆಂಗಳೂರು: ಕೃಷ್ಣ ಅವರ ಆಸೆಯಂತೆ ಈಜುಕೊಳದ ಮಧ್ಯೆ ನಿರ್ಮಿಸಿರುವ ಕಲರ್ ಫುಲ್ ಮಂಟಪದಲ್ಲಿ ಸಪ್ತಪದಿ ತುಳಿದಿರುವುದು ಸಂತೋಷವಾಗಿದೆ. ಪ್ರೇಮಿಗಳದಿನ ಮದುವೆಯಾಗಿದ್ದು ಮರೆಯಲು ಸಾಧ್ಯವಿಲ್ಲ ಎಂದು ಮಿಲನ ನಾಗರಾಜ್ ಹೇಳಿದ್ದಾರೆ.

ವಿವಾಹದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ನವದಂಪತಿ, 7 ವರ್ಷಗಳ ಪ್ರೀತಿಗೆ ಒಂದು ಅರ್ಥ ಸಿಕ್ಕಂತ್ತಾಗಿದೆ. ಫ್ಯಾಮಿಲಿ ಮತ್ತು ಸ್ನೇಹಿತರು ಮದುವೆ ಯಾವಾಗ ಎಂದು ಕೇಳುತ್ತಿದ್ದರು. ಇದೀಗ ಫೈನಲ್ ಆಗಿ ಮದುವೆ ಆಗಿರುವುದು ಸಂತೋಷವಾಗಿದೆ. ಮದುವೆ ಕುರಿತಾಗಿ ನಾವು ಪ್ಲ್ಯಾನ್ ಮಾಡಿದಂತೆ ಎಲ್ಲವೂ ಆಗಿದೆ. ನಾವು ಮದುವೆಗೆ ಕರೆದಿರುವ ಎಲ್ಲರೂ ಬಂದು ಆಶಿರ್ವಾದ ಮಾಡಿದ್ದಾರೆ ತುಂಬಾ ಸಂತೋಷವಾಗಿದೆ ಎಂದು ಹೇಳಿದ್ದಾರೆ.

ಮದುವೆ ಮಂಟಪಕ್ಕೆ ಬರುತ್ತಿದ್ದಂತೆ ಹೊಸತರವಾಗಿರಬೇಕು ಎಂದು ಯೋಚಿಸಿದ್ದೇವು. ಮೆಹಂದಿ ಮತ್ತು ಧಾರೆಗೆ ಮೊದಲೆ ಕಲರ್ ಹೇಗೆ ಇರಬೇಕು ಎಂದೆಲ್ಲಾ ಯೋಚಿಸಿದ್ದೆವು. ನಾವು ಅಂದುಕೊಂಡಂತೆ ಎಲ್ಲಾ ಆಗಿದೆ. ಮದುವೆಯಾಗಿರುವುದು ಸಂತೋಷವಾಗಿದೆ ಎಂದು ಹೇಳಿದ್ದಾರೆ.

ಸಿನಿಮಾದವರಾದ ಕಾರಣ ಏನಾದರೂ ಹೊಸತನ ಇರಬೇಕೆಂಬ ಕಾರಣಕ್ಕೆ ಈಜುಕೊಳದ ಮಧ್ಯೆ ಮದುವೆಯಾಗಿದ್ದೇವೆ. ಪ್ರತಿ ವರ್ಷ ಪ್ರೇಮಿಗಳದಿನ ಏನಾದರೂ ಇರಬೇಕಿತ್ತು ಅಂದುಕೊಳ್ಳುತ್ತಿದ್ದೆನು. ಇದೀಗ ನಾವಿಬ್ಬರು ಮದುವೆಯಾಗಿದ್ದೇವೆ ಈ ದಿನ ಮರೆಯಲಾದ ದಿನವಾಗಿದೆ ನಮಗೆ. ಇವತ್ತು ಕ್ರೇಜಿಸ್ಟಾರ್ ರವೀಚಂದ್ರ ಸರ್ ಮದುವೆ ಆಗಿರುವ ದಿನವೂ ಆಗಿದೆ. ಇವತ್ತಿನ ದಿನವೇ ಇಬ್ಬರೂ ವಿವಾಹ ವಾಗುತ್ತಿರುವುದು ಇನ್ನಷ್ಟು ನಮ್ಮ ಖುಷಿಯನ್ನು ಹೆಚ್ಚಿಸಿದೆ. ಮುಂದೆ ಇಬ್ಬರು ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತೇವೆ ಎಂದು ಕೃಷ್ಣಾ ಹೇಳಿದ್ದಾರೆ.

Comments

Leave a Reply

Your email address will not be published. Required fields are marked *