ಪ್ರಿಯತಮನನ್ನು ಪರಿಚಯಿಸಿದ ನಟಿ ಕಾವ್ಯ ಗೌಡ

ಬೆಂಗಳೂರು: ಕಿರುತೆರೆಯಲ್ಲಿ ನಟಿಸಿ ಎಲ್ಲರ ಮನೆಮಾತಾಗಿರುವ ಕಾವ್ಯ ಗೌಡ ತಮ್ಮದೆ ಆಗಿರುವ ವಿಶಿಷ್ಟವಾದ ಅಭಿನಯದ ಮೂಲಕವಾಗಿ ಎಲ್ಲರ ಗಮನವನ್ನು ಸೆಳೆದಿದ್ದರು. ಇದೀಗ ಮದುವೆಯಾಗುವ ಹುಡುಗನ ಫೋಟೋವನ್ನು ರಿವೀಲ್ ಮಾಡಿದ್ದಾರೆ.

ತಾವು ಮದುವೆಯಾಗುತ್ತಿರುವ ಹುಡುಗನ ಕುರಿತಾಗಿ ತುಂಬಾ ಪ್ರಿತಿಯಿಂದ ಬರೆದುಕೊಂಡಿದ್ದಾರೆ. ಹಾಗೇ ದುಬೈನಲ್ಲಿ ಪ್ರಿಯಕರನೊಂದಿಗೆ ತಗೆದಿರುವ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಹುಡುಗನ ಕುರಿತಾಗಿ ಹೆಚ್ಚಿ ಮಾಹಿತಿ ಇಲ್ಲ. ಕಾವ್ಯಾ ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಶುಭಾಶಯಗಳ ಸುರಿಮಳೆಗೈದಿದ್ದಾರೆ.

ನಿನ್ನೊಂದಿಗೆ ನನ್ನ ಹೊಸ ಜೀವನ ಶುರು ಮಾಡಲು ನಾನು ಕಾಯುತ್ತಿದ್ದೇನೆ. ನಿನ್ನ ಜೊತೆಗೆ ಕಳೆದ ಕ್ಷಣಗಳು ನನ್ನ ಜೀವನದ ಸುಂದರ ಕ್ಷಣಗಳಾಗಿವೆ. ನಿನ್ನಂತಹ ಉತ್ತಮ ವ್ಯಕ್ತಿಯನ್ನು ನಾನು ನನ್ನ ಜೀವನದಲ್ಲಿ ನೋಡಿಲ್ಲ. ನಿನ್ನ ಮುಗ್ಧತೆ, ತಾಳ್ಮೆ, ಪ್ರೀತಿ, ಕಾಳಜಿ ಎಲ್ಲ ನೋಡಿದರೆ ನಾನು ವಿಶ್ವದ ತುತ್ತತುದಿಯಲ್ಲಿದ್ದೇನೆ ಅಂತ ಅನಿಸತ್ತೆ. ನೀನು ಉತ್ತಮ ವ್ಯಕ್ತಿ. ನಾನು ಕಣ್ಣು ಮುಚ್ಚಿಯೂ ನಿನ್ನ ಜೊತೆಗೆ ಜೀವನ ಕಳೆಯುತ್ತೇನೆ ಅಂತ ನಂಬಿಕೆಯಿದೆ. ನನ್ನ ಜೀವನವನ್ನು ಇನ್ನಷ್ಟು ಸುಂದರ ಮಾಡಿರೋದಕ್ಕೆ, ವರ್ಣಮಯ ಮಾಡಿರೋದಕ್ಕೆ ಧನ್ಯವಾದಗಳು.

ನಿನ್ನ ಜೊತೆಗೆ ಪ್ರತಿಕ್ಷಣ ಇರುತ್ತೇನೆ ಅಂತ ವಚನ ನೀಡುತ್ತೇನೆ. ನಿನ್ನ ಕನಸಿಗಾಗಿ ನಾನು ಕೂಡ ಹೋರಾಡುವೆ. ನಿನ್ನ ಹಾದಿಯಲ್ಲಿ ಏನು ಬರತ್ತೆ ಅನ್ನೋದು ಮುಖ್ಯವಲ್ಲ, ನಾನು ನಿನ್ನ ಪರ ನಿಂತುಕೊಳ್ಳುವೆ. ನಾನು ಸಾಯಿ ಬಾಬಾರನ್ನು ನಂಬುತ್ತೇನೆ, ಅವರು ಎಂದಿಗೂ ನನ್ನನ್ನು ಕೆಳಗೆ ಬೀಳಲು ಬಿಡಲ್ಲ.

ಜೀವನದಲ್ಲಿ ಏನಾದರೂ ಉತ್ತಮವಾಗಿರೋದು ಸಿಗೋಕೆ ಕಾಯಬೇಕಂತೆ ಅಂತ ಹೇಳ್ತಾರೆ. ನೀನು ಸಿಗುವ ತನಕ ನಾನು ಕಾದಿರುವುದಕ್ಕೆ ಖುಷಿಯಿದೆ. ಇಂತಹ ಅದ್ಭುತ ವ್ಯಕ್ತಿ ಭೇಟಿ ಮಾಡೋಕೆ ಅವಕಾಶ ನೀಡಿದ ಜಗತ್ತಿಗೆ ಧನ್ಯವಾದಗಳು. ಜಗತ್ತು ನೀಡಿದ ದೊಡ್ಡ ಉಡುಗೊರೆ ನೀನು. ನಿನ್ನ ಜೊತೆ ಜೀವನ ಕಳೆಯಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ಸಾಯಿಬಾಬಾಗೆ ಯಾವಾಗಲೂ ನಾನು ಋಣಿಯಾಗಿರುವೆ ಎಂದು ಬರೆದುಕೊಂಡು ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *