ಪ್ರಿಯಕರನ ‘ಆ’ ಒಂದು ಮಾತು ಕೇಳಿ ಕಣ್ಣೀರಿಟ್ಟ ಶುಭಾ

ಬಿಗ್‍ಬಾಸ್ ಮನೆ ಸೇರಿರುವ ಶುಭಾ ತಮ್ಮ ಪ್ರಿಯಕರನನ್ನು ನೆನಪು ಮಾಡಿಕೊಳ್ಳದ ದಿನವಿಲ್ಲ. ಮನೆಯ ಸದಸ್ಯರ ಜೊತೆಯಲ್ಲಿ ಹುಡುಗನ ಕುರಿತಾಗಿ ಹೇಳಿ ಕೊಳ್ಳುತ್ತಿರುತ್ತಾರೆ. ಆದರೆ ಪ್ರಿಯಕರ ಆ ಒಂದು ಮಾತನ್ನು ಕೇಳಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

ಹೌದು ಬಿಗ್‍ಬಾಸ್ ಮನೆಯಲ್ಲಿ ಪ್ರತಿಯೊಬ್ಬ ಸದಸ್ಯರ ಮನೆಯಿಂದ ಪ್ರೀತಿಯ ಸಂದೇಶ ಮತ್ತು ಫೋನ್ ಕಾಲ್‍ಗಳು ಬರುತ್ತಿವೆ. ಆದರೆ ಶುಭಾ ಪೂಂಜಾಗೆ ಪ್ರಿಯಕರನ ಕರೆ ಬಂದಾಗ ಶುಭಾ ಕಣ್ಣೀರು ಹಾಕಿದ್ದಾರೆ.

ಕಿಚ್ಚನ ಕಟ್ಟೆಪಂಚಾಯ್ತಿ ವೇಳೆ ಶುಭಾ ಅವರಿಗೆ ಪ್ರಿಯಕರ ಕರೆ ಬರುತ್ತದೆ. ಮೊದಲಿಗೆ ಧ್ವನಿ ಯಾರದ್ದು ಎಂದು ತಿಳಿಯದ ಶುಭಾ ಕೊಂಚ ಸಮಯ ಹಾಗೆ ಕುಳಿತು ಕೇಳಿದ್ದಾರೆ. ನಂತರ ತನ್ನ ಪ್ರಿಯಕರ ಎಂದು ತಿಳಿಯುತ್ತಿದ್ದಂತೆ ಕುಣಿದು ಕುಪ್ಪಳಿಸಿದ್ದಾರೆ.

ನೀನು ಬಿಗ್‍ಬಾಸ್ ಹೋಗುತ್ತಿದ್ದಾಗ ಸ್ವಲ್ಪ ದಿನ ಆರಾಮ್ ಆಗಿರಬಹುದು ಎಂದು ಕೊಂಡಿದ್ದೇನು. ನೀನು ಹೋಗಿರುವ ಮರುದಿನವೇ ನನಗೆ ಗೊತ್ತಾಯಿತ್ತು ಎಷ್ಟೊಂದು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು. ನಾನು ನೀನು ಹೋದ ವರ್ಷ ಈ ದಿನ ಮಂಗಳೂರಿನಲ್ಲಿ ಸ್ಟ್ರಕ್ ಆಗಿದ್ದೇವು. ಆಗ ನೀನು ಜೊತೆಯಲ್ಲಿದ್ದೆ. ಆದರೆ ಮನೆಯವರು ಇರಲಿಲ್ಲ, ಆಗ ನಾವಿಬ್ಬರೆ ಆಗಿದ್ದೇವು. ಈಗ ನೀನು ಅಲ್ಲಿ ಇದ್ದೀಯಾ, ನಾವೆಲ್ಲರೂ ಇಲ್ಲಿದ್ದೇವೆ. ನಾನು ನಿನಗೆ ಯಾವತ್ತು ಹೇಳಿರದ ಒಂದು ಮಾತನ್ನು ಹೇಳುತ್ತಿದ್ದೇನೆ. ನಾನು ನಿನ್ನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಪರವಾಗಿಲ್ಲ ಇನ್ನಷ್ಟು ದಿನ ನಿನ್ನನ್ನು ಮಿಸ್ ಮಾಡಿಕೊಳ್ಳಲು ಸಿದ್ದವಾಗಿದ್ದೇನೆ. ಚೆನ್ನಾಗಿ ಆಟ ಆಡಿ ಇನ್ನಷ್ಟು ದಿನ ಇದ್ದು ಬಾ… ಮನೆಯಲ್ಲಿ ಹಠ ಮಾಡುವ ಮಗು ಇಲ್ಲ, ಬೆಸ್ಟ್ ಫ್ರೆಂಡ್ ಇಲ್ಲ, ಪರ್ಸನಲ್ ಎಂಟಟೈನರ್ ಎಂದು ಅನ್ನಿಸುತ್ತಿದೆ ಎಂದು ಹೇಳಿದ್ದಾರೆ.

ಶುಭಾ ಕೂಡಾ ಪ್ರಿಯಕರ ಧ್ವನಿ ಕೇಳಿ ಕಣ್ಣೀರು ಹಾಕಿದ್ದಾರೆ. ಐ ಮಿಸ್ ಯೂ ಟು ಚಿನ್ನಿ ಬಾಂಬ್. ನಾನು ನಿನ್ನ ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಸ್ವಲ್ಪ ತಿಂಗಳ ಕಾಲ ವೇಟ್ ಮಾಡು ಎಂದು ಹೇಳಿದ್ದಾರೆ. ಪ್ರಿಯಕರ ಧ್ವನಿ ಕೇಳಿ ಸಂತೋಷನಾ ಎಂದು ಸುದೀಪ್ ಕೇಳಿದ್ದಾರೆ. ನಾನು ಒಂದು ತಿಂಗಳಿಂದ ತುಂಬಾ ಕಾಯುತ್ತಾ ಇದ್ದೇನು ಎಂದು ಹೇಳಿದ್ದಾರೆ.

ನಾವು ಅವರನ್ನು ಫೋನ್ ಕರೆಗೆ ತರಲು ತುಂಬಾ ಕಷ್ಟ ಪಟ್ಟೆವು. ಅವರು ಯಾವಾಗಲು ಆನ್‍ಲೈನ್ ಇರುತ್ತಾರೆ. ಕಾಲ್ ಬ್ಯುಸಿ ಬರುತ್ತಾ ಇರುತ್ತದೆ. ಅವರು ಆರಾಮ್ ಆಗಿದ್ದಾರೆ ಎಂದು ಹೇಳುತ್ತಾ ಸುದೀಪ್ ಶುಭಾ ಅವರಿಗೆ ತಮಾಷೆ ಮಾಡಿದ್ದಾರೆ.

Comments

Leave a Reply

Your email address will not be published. Required fields are marked *