ಪ್ರಿಯಕರನೊಂದಿಗಿದ್ದ 16ರ ಅಪ್ರಾಪ್ತೆ – ನಿದ್ದೆಯಿಂದ ಎದ್ದು ನೋಡಿದ್ದಕ್ಕೆ 11ರ ಸೋದರಿಯ ಕೊಲೆ

– ಮೊಬೈಲ್ ವಿಚಾರಕ್ಕೆ ಕೊಂದೆ ಎಂದು ತಪ್ಪೊಪ್ಪಿಗೆ
– ವಿಚಾರಣೆ ವೇಳೆ ಬಾಯಿ ಬಿಟ್ಟ ಗೆಳೆಯ

ರಾಯ್ಪುರ್: ತನ್ನ ಗೆಳೆಯನೊಂದಿಗೆ ಇದ್ದುದ್ದನ್ನು ನೋಡಿದ 11 ವರ್ಷದ ಬಾಲಕಿಯನ್ನು ಆಕೆಯ ಸಹೋದರಿಯೇ ಪ್ರಿಯಕರನೊಂದಿಗೆ ಸೇರಿಕೊಂಡು ಕ್ರೂರವಾಗಿ ಕೊಲೆ ಮಾಡಿರುವ ಘಟನೆ ಛತ್ತೀಸ್‍ಗಢದ ಕೊರ್ಬಾದಲ್ಲಿ ನಡೆದಿದೆ.

ಈ ಘಟನೆ ಶುಕ್ರವಾರ ರಾತ್ರಿ ನಡೆದಿದೆ. 16 ವರ್ಷದ ಅಪ್ರಾಪ್ತೆ ತನ್ನ ಪ್ರಿಯಕರನೊಂದಿಗೆ ಸೇರಿಕೊಂಡು ಮೊದಲಿಗೆ ದಿಂಬಿನಿಂದ ಉಸಿರುಗಟ್ಟಿಸಿ ನಂತರ ಕೊಡಲಿಯಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದಾಳೆ. ಮೊದಲಿಗೆ ಮೊಬೈಲ್ ವಿಚಾರಕ್ಕೆ ಕೊಲೆ ಮಾಡಿದೆ ಎಂದು ಅಪ್ರಾಪ್ತೆ ಹೇಳಿದ್ದಳು. ಆದರೆ ತನಿಖೆ ವೇಳೆ ಸತ್ಯ ಬಯಲಾಗಿದೆ.

ಏನಿದು ಪ್ರಕರಣ?
ಹುಡುಗಿಯ ಪೋಷಕರು ಹಬ್ಬಕ್ಕಾಗಿ ಪಕ್ಕದ ಹಳ್ಳಿಗೆ ಹೋಗಿದ್ದರು. ಮನೆಯಲ್ಲಿ 11 ವರ್ಷದ ಮತ್ತು 16 ವರ್ಷದ ಸಹೋದರಿಯ ಇದ್ದರು. ರಾತ್ರಿ ಬಾಲಕಿ ನಿದ್ದೆಯಿಂದ ಎಚ್ಚರಗೊಂಡಿದ್ದಾಳೆ. ಆಗ ತನ್ನ ಸಹೋದರಿ ಆಕೆಯ ಪ್ರಿಯಕರನೊಂದಿಗೆ ಇದ್ದುದ್ದನ್ನು ನೋಡಿದ್ದಾಳೆ. ಇದರಿಂದ ಭಯಗೊಂಡ ಸಹೋದರಿಗೆ ಎಲ್ಲರಿಗೂ ಈ ವಿಚಾರ ಹೇಳುತ್ತಾಳೆ ಎಂದು ಪ್ರಿಯಕರನೊಂದಿಗೆ ಸೇರಿಕೊಂಡು ಕೊಲೆ ಮಾಡಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಪೋಷಕರು ಶನಿವಾರ ಬೆಳಗ್ಗೆ ಮನೆಗೆ ಹಿಂದಿರುಗಿದಾಗ ಮಗಳು ಮೃತಪಟ್ಟಿರುವುದು ತಿಳಿದಿದೆ. ನಂತರ ಈ ಬಗ್ಗೆ ಮಾಹಿತಿ ಸ್ಥಳಕ್ಕೆ ಬಂದು ಪೊಲೀಸರು ಸಹೋದರಿಯನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ಮಾಡಿದ್ದಾರೆ. ಆಗ ನನ್ನ ಮೊಬೈಲ್ ಫೋನ್‍ನಲ್ಲಿ ಆಟವಾಡುತ್ತಿದ್ದಳು. ನಾನು ವಾಪಸ್ ಕೇಳಿದರೂ ಕೊಡಲಿಲ್ಲ. ಹೀಗಾಗಿ ಕೊಲೆ ಮಾಡಿದೆ ಎಂದು ಅಪ್ರಾಪ್ತೆ ಹೇಳಿದ್ದಾಳೆ.

ಮತ್ತೆ ತನ್ನ ಹೇಳಿಕೆಯನ್ನು ಬದಲಾಯಿಸಿದ್ದಾಳೆ. ಇದರಿಂದ ಅನುಮಾನಗೊಂಡ ಪೊಲೀಸರು ಮನೆಯೊಳಗೆ ಹೋಗಿ ಪರಿಶೀಲನೆ ನಡೆಸಿದ್ದಾರೆ. ಆಗ ಮೃತ ಬಾಲಕಿಯ ಮನೆಯ ಹೊರಗೆ ಬೈಕಿನ ಟಯರ್ ಗುರುತುಗಳನ್ನು ಪೊಲೀಸರು ಗಮನಿಸಿದ್ದಾರೆ. ಆಗ ಪೊಲೀಸರು ಮೃತಳ ಸಹೋದರಿಯ ಫೋನ್ ಪರಿಶೀಲಿಸಿದ್ದಾರೆ. ಆಕೆ ಕರೆ ವಿವರಗಳನ್ನು ಡಿಲೀಟ್ ಮಾಡಿದ್ದಳು.

ಸೈಬರ್ ಪೊಲೀಸರು ಒಂದು ನಂಬರಿಗೆ ಫೋನ್ ಮಾಡಿದ್ದಾಳೆ ಎಂದು ತಿಳಿಸಿದ್ದಾರೆ. ತಪಾಸಣೆ ನಡೆಸಿದಾಗ ಘಟನೆಯ ಸಮಯದಲ್ಲಿ ಫೋನ್ ಬಾಲಕಿಯ ಮನೆಯ ವ್ಯಾಪ್ತಿಯಲ್ಲಿ ಇರುವುದನ್ನು ಗೊತ್ತಾಗಿದೆ. ವಿನಯ್ ಜಗತ್ ಹೆಸರಿನಲ್ಲಿ ಫೋನ್ ನಂಬರ್ ನೋಂದಾಯಿಸಲಾಗಿತ್ತು. ತಕ್ಷಣ ಆತನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿದೆ. ಆಗ ತಾವೇ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ.

ಸದ್ಯಕ್ಕೆ ಇಬ್ಬರು ಆರೋಪಿಗಳನ್ನು ಪೋಕ್ಸೋ, ಬಾಲಾಪರಾಧಿ ನ್ಯಾಯ ಕಾಯ್ದೆ ಮತ್ತು ಐಪಿಸಿ ಸೆಕ್ಷನ್ ಕಾಯ್ಡೆಯಲ್ಲಿ ಬಂಧಿಸಲಾಗಿದೆ.

Comments

Leave a Reply

Your email address will not be published. Required fields are marked *