ಪ್ರಧಾನಿ ಮೋದಿಗೆ ಶಾಸಕ ಮುನಿರತ್ನ ಸ್ವಾಗತ

ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಚಾರ ನಡೆಸಲು ಆಗಮಿಸಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ಶಾಸಕ ಮುನಿರತ್ನ ಸ್ವಾಗತ ಕೋರಿದರು.

ಬಿಜೆಪಿ ಅಭ್ಯರ್ಥಿ ಮುರುಗನ್ ಮತ್ತು ಅರವಕುರಿಚಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಕೆ.ಅಣ್ಣಾಮಲೈ ಅವರ ಪರವಾಗಿ ಚುನಾವಣಾ ಪ್ರಚಾರ ನಡೆಸಲು ಮೋದಿ ಇಂದು ಆಗಮಿಸಿದ್ದರು. ಈ ವೇಳೆ ಧಾರಪುರಂನ ಹೆಲಿಪ್ಯಾಡ್‍ನಲ್ಲಿ ಆರ್‍ಆರ್ ನಗರ ಶಾಸಕ ಮುನಿರತ್ನ ಅವರು ಮೋದಿಗೆ ಪಕ್ಷದ ಶಾಲು ಹೊದಿಸಿ ಆದರದಿಂದ ಬರಮಾಡಿಕೊಂಡರು.

ನಂತರ ತಮಿಳುನಾಡಿನ ಧಾರಾಪುರಂನಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಪಾಲ್ಗೊಂಡ ಮೋದಿ, ಸಿಎಂ ಪಳನಿಸ್ವಾಮಿ ತಾಯಿ ಕುರಿತು ಡಿಎಂಕೆಯ ಎ ರಾಜ ಹೇಳಿಕೆ ಉಲ್ಲೇಖಿಸಿ ತರಾಟೆಗೆ ತೆಗೆದುಕೊಂಡ್ರು. ಅಲ್ಲದೆ 1989ರಲ್ಲೇ ಜಯಲಲಿತಾರನ್ನು ಡಿಎಂಕೆ ಅಪಮಾನಿಸಿತ್ತು ಎಂಬುದನ್ನು ನೆನಪಿಸಿದ್ರು.

ಒಟ್ಟಿನಲ್ಲಿ ಪಂಚ ರಾಜ್ಯಗಳಲ್ಲಿ ಮತದಾರರ ಮನಗೆಲ್ಲಲು ಅಬ್ಬರದ ಪ್ರಚಾರ ಜೋರಾಗಿ ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಇಂದು ಕೇರಳದಲ್ಲಿಯೂ ಪ್ರಚಾರ ನಡೆಸಿದ್ರು. ಪಾಲಕ್ಕಾಡ್‍ನಲ್ಲಿ ಭಾಷಣ ಮಾಡಿದ ಮೋದಿ, ಎಲ್‍ಡಿಎಫ್ ಮತ್ತು ಯುಡಿಎಫ್ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿವೆ ಎಂದು ಆಪಾದಿಸಿದರು.

Comments

Leave a Reply

Your email address will not be published. Required fields are marked *